ಕರ್ನಾಟಕ ಸುದ್ದಿ

ಕಳ್ಳ ಮಾರ್ಗದಿಂದ ಚಾಮರಾಜನಗರಕ್ಕೆ ನುಗ್ಗುತ್ತಿರುವ ತಮಿಳುನಾಡಿನ ಕಾರ್ಮಿಕರು; ಆತಂಕದಲ್ಲಿ ಸ್ಥಳಿಯರು

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಪೋಲಿಸರು ಅದೇಷ್ಟು ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ಬೇರೆ ರಾಜ್ಯಗಳಿಂದ ಜನರ ಪ್ರೇವೆಶವನ್ನು ತಡೆಯುತ್ತಿದ್ದರೂ, ರಾತ್ರೊ ರಾತ್ರಿ ತಮಿಳುನಾಡಿನಿಂದ, ಚಾಮರಾಜನಗರಕ್ಕೆ ಪೋಲಿಸರ ಕಣ್ಣುತ್ತಪ್ಪಿಸಿ ನುಗ್ಗುತ್ತಿದ್ದಾರೆ ತಮಿಳುನಾಡಿನ ಕಾರ್ಮಿಕರು.

ಅತಿ ಹೆಚ್ಚು ಕೊರೋನಾ ಪ್ರಕರಣಗಳ ಹಿನ್ನಲೆಯಲ್ಲಿ ತಮಿಳುನಾಡಿನಿಂದ ಗಡಿ ಜಿಲ್ಲೆ ಚಾಮರಾಜ‌ನಗರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೂ,  10ಕ್ಕು ಹೆಚ್ಚು ಕಾರ್ಮಿಕರು ರಾತ್ರೋರಾತ್ರಿ ಕಳ್ಳಮಾರ್ಗದಲ್ಲಿ  ಚಾಮರಾಜನಗರದ ಬದನಗುಪ್ಪೆಗೆ ಬಂದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಿಂದ ತಮಿಳುನಾಡಿಗೆ ಸಂಪರ್ಕಿಸುವ ಗಡಿಭಾಗಗಳಲ್ಲಿ 5 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ತಮಿಳುನಾಡು ಕಡೆಯಿಂದ ಬರುವವರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು ಈ ಹಿನ್ನಲೆಯಲ್ಲಿ ಅತ್ತ ಕಡೆಯಿಂದ ಯಾರೂ ಬಾರದಂತೆ   ಹದ್ದಿನ ಕಣ್ಣಿರಿಸಲಾಗಿದೆ.

ಕಟ್ಟೆಚ್ಚರ ವಹಿಸಿದ್ದರು ಚಾಮರಾಜನಗರ ಜಿಲ್ಲೆ ಬದನಗುಪ್ಪೆ ಬಳಿ ಇರುವ ಗ್ರಾನೈಟ್ ಕಾರ್ಖಾನೆಗೆ ತಮಿಳುನಾಡಿನಿಂದ ಹತ್ತಕ್ಕು ಹೆಚ್ಚು  ಕಾರ್ಮಿಕರು ರಾತ್ರೋ ರಾತ್ರಿ ಕಳ್ಳಮಾರ್ಗದಲ್ಲಿ ಗಡಿ ದಾಟಿ ಬಂದಿದ್ದಾರೆ. ತಮಿಳು ಕಾರ್ಮಿಕರನ್ನು  ನೋಡಿದ ಸ್ಥಳೀಯ ಕಾರ್ಮಿಕರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಈ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು.

ತಕ್ಷಣ ಎಚ್ಚೆತ್ತ ಆರೋಗ್ಯಾಧಿಕಾರಿಗಳು ಬದನಗುಪ್ಪೆ ಬಳಿ ಇರುವ  ಗ್ರಾನೈಟ್ ಕಾರ್ಖಾನೆಗೆ ಧಾವಿಸಿ ತಮಿಳುನಾಡಿನಿಂದ ಬಂದಿದ್ದ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿ ನಂತರ  ಆ್ಯಂಬುಲೆನ್ಸ್  ಮೂಲಕ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close