ಕರ್ನಾಟಕ ಸುದ್ದಿ

PM ಕಿಸಾನ್ ಯೋಜನೆಯ ದುಡ್ಡು ಬಂದಿಲ್ಲವೆ..? ಇಲ್ಲಿದೆ ಮಾರ್ಗೋಪಾಯ

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರ ಬದುಕಿಗೆ ನೆರವಾಗಲೆಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಒಂದು ವರ್ಷದಲ್ಲಿ 2 ಸಾವಿರ ರೂಪಾಯಿಗಳ ಮೂರು ಕಂತುಗಳನ್ನ, ಅಂದರೆ ವರ್ಷಕ್ಕೆ 6 ಸಾವಿರ ರೂಪಾಯಿಯನ್ನು ನೇರವಾಗಿ ಫಲಾನುಭವಿ ರೈತರ ಖಾತೆಗಳಿಗೆ ವರ್ಗಾವಣೆ ಆಗುತ್ತದೆ. ಜೊತೆಗೆ ಕರ್ನಾಟಕ ಸರ್ಕಾರ ಇನ್ನೆರಡು ಹೆಚ್ಚುವರಿ ಕಂತುಗಳ ಹಣವನ್ನು ರೈತರಿಗೆ ನೀಡುತ್ತದೆ. ಅಂದರೆ, ರೈತರ ಖಾತೆಗೆ ವರ್ಷಕ್ಕೆ 10 ಸಾವಿರ ರೂಪಾಯಿ ಜಮಾವಣೆ ಆಗುತ್ತದೆ.

ಬಹುತೇಕ ರೈತರು ಈ ಯೋಜನೆಗೆ ಹೆಸರು ನೊಂದಾಯಿಸಿದ್ಧಾರೆ. ಅವರಲ್ಲಿ ಬಹಳಷ್ಟು ಮಂದಿಗೆ ಈಗಾಗಲೇ ನಿಯಮಿತವಾಗಿ ಹಣ ಸಿಗುತ್ತಿದೆ. ಬೇರೆ ಬೇರೆ ಕಾರಣಗಳಿಂದಾಗಿ ಕೆಲವರಿಗೆ ಹಣ ಸಿಗುತ್ತಿಲ್ಲದೇ ಇರಬಹುದು. ಯೋಜನೆಗೆ ಹೆಸರು ನೊಂದಾಯಿಸಿದ್ದರೂ ಖಾತೆಗೆ ಹಣ ಪಡೆದಿಲ್ಲದ ರೈತರಿಗೆ ಈ ಸಮಸ್ಯೆ ನೀಗಿಸಲು ಕೆಲವಾರು ಮಾರ್ಗೋಪಾಯಗಳಿವೆ.

ರೈತರು ಮೊದಲು ತಮ್ಮ ಗ್ರಾಮ ಲೆಕ್ಕಿಗ (ವಿಲೇಜ್ ಅಕೌಂಟೆಂಟ್)ರನ್ನು ಸಂಪರ್ಕ ಮಾಡಿ ವಿಚಾರಿಸಬಹುದು. ಅಥವಾ ಜಿಲ್ಲೆಯ ಕೃಷಿ ಇಲಾಖೆಯನ್ನ ಸಂಪರ್ಕಿಸಬಹುದು. ಅಲ್ಲಿಯೂ ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಕೇಂದ್ರ ಸರ್ಕಾರ ಕೆಲವು ಸಹಾಯವಾಣಿ ನಂಬರ್​ಗಳನ್ನ ನೀಡಿದೆ:

ಹೆಲ್ಪ್​ಲೈನ್ ನಂಬರ್: 155261
ಟಾಲ್​ಫ್ರೀ ನಂಬರ್: 18001155266
ಲ್ಯಾಂಡ್​ಲೈನ್ ನಂಬರ್: 011-23381092, 011-23382401,ಹೆಲ್ಪ್​ಲೈನ್ ನಂಬರ್: 0120-6025109
ಇಮೇಲ್: pmkisan-ict@gov.in

ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರೀಕ್ಷಿಸಿ:

ಕೇಂದ್ರ ಸರ್ಕಾರ ಈ ಯೋಜನೆಗೆಂದು ಪ್ರತ್ಯೇಕ ಜಾಲತಾಣ ರೂಪಿಸಿದೆ. ಈಗಾಗಲೇ ನೊಂದಾಯಿತ ಎಲ್ಲಾ ರೈತರ ಪಟ್ಟಿ ಸಿದ್ಧಗೊಂಡು ಈ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ರಾಜ್ಯ-ಜಿಲ್ಲೆ-ತಾಲೂಕು-ಗ್ರಾಮ ಹೀಗೆ ತಮ್ಮ ಊರನ್ನು ಆಯ್ದುಕೊಂಡು ಫಲಾನುಭವಿಗಳ ಪಟ್ಟಿ ವೀಕ್ಷಿಸಬಹುದು.

ಹಾಗೆಯೇ, ತಮಗೆ ಹಣ ಸಂದಾಯ ಆಗಿದೆಯಾ ಇಲ್ಲವಾ ಎಂದು ಖಾತ್ರಿಪಡಿಸಿಕೊಳ್ಳಲು ಆಧಾರ್ ನಂಬರ್ ಅಥವಾ ನೊಂದಾಯಿತ ಮೊಬೈಲ್ ನಂಬರ್ ಮೂಲಕ ಪರಿಶೀಲಿಸಬಹುದು. ಆಧಾರ್ ನಂಬರ್ ತಪ್ಪಾಗಿ ನಮೂದಾಗಿದೆಯಾ ಎಂಬುದನ್ನೂ ಪರೀಕ್ಷಿಸಬಹುದು.

ವೆಬ್​ಸೈಟ್ ವಿಳಾಸ ಇಲ್ಲಿದೆ: pmkisan.gov.in

ಈ ವೆಬ್​ಸೈಟ್​ಗೆ ಹೋದರೆ ಹೋಮ್ ಪೇಜ್​ನ ಮೆನುಬಾರ್​ನಲ್ಲಿ ಕಾಣುವ Farmer Corner ಮೇಲೆ ಕರ್ಸರ್ ಇಟ್ಟರೆ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ Beneficiary list ಕ್ಲಿಕ್ ಮಾಡಿದರೆ ನಿಮಗೆ ಪಟ್ಟಿ ಹುಡುಕುವ ಅವಕಾಶ ಸಿಗುತ್ತದೆ. ರಾಜ್ಯ, ಜಿಲ್ಲೆ, ಉಪವಿಭಾಗ ಮತ್ತು ಗ್ರಾಮವನ್ನು ಆಯ್ದುಕೊಂಡು ನಿಮ್ಮ ಊರಿನ ಫಲಾನುಭವಿಸಗಳ ಪಟ್ಟಿ ನೋಡಬಹುದು.

ಇದೇ Farmer Cornerನಲ್ಲಿ ಇನ್ನೂ ಕೆಲ ಆಯ್ಕೆಗಳಿವೆ. ಅದರಲ್ಲಿ ನಿಮ್ಮ ನೊಂದಾವಣಿಯ ಸ್ಥಿತಿಗತಿ, ಸಮಸ್ಯೆ ಇತ್ಯಾದಿಗಳನ್ನ ಪರಿಶೀಲಿಸಲು ಸಾಧ್ಯವಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close