ಅಂತರಾಷ್ಟ್ರೀಯಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿ

Google playstore ನಿಂದ ಕಣ್ಮರೆಯಾದ “ಮಿತ್ರೋ” ಆ್ಯಪ್!

–ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ದೇಶಿಯ ಆ್ಯಪ್​ ಎಂದು ಜನಪ್ರಿಯತೆ ಪಡೆಯುವ ಮೂಲಕ ಅನೇಕ ಬಳಕೆದಾರರನ್ನು ಹೊಂದಿದ್ದ ‘ಮಿತ್ರೋ‘ ಆ್ಯಪ್​ ಪ್ಲೇ ಸ್ಟೋರ್​​ನಿಂದ ಕಣ್ಮರೆಯಾಗಿದೆ.

ಇತ್ತೀಚೆಗೆ ಚೀನಾ ವಸ್ತುಗಳ ಬಳಸದಂತೆ ಅಭಿಯಾನವು ಆರಂಭವಾಗಿತ್ತು. ಪ್ರಮುಖವಾಗಿ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಟಿಕ್​ಟಾಕ್​ ಆ್ಯಪ್​ ಬ್ಯಾನ್​ ಮಾಡುವ ಬಗ್ಗೆ ಅಭಿಯಾನ ನಡೆಯುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಬ್ಯಾನ್​ ಟಿಕ್​ಟಾಕ್​​ ಅಭಿಯಾನದ ಜೊತೆ ಅನೇಕರು ಕೈ ಜೋಡಿಸಿದ್ದರು. ಟಿಕ್​ಟಾಕ್​ ಅನ್​ಇನ್​ಸ್ಟಾಲ್ ಮಾಡುವ ಮೂಲಕ ಅಭಿಯಾನ ನಡೆಸುತ್ತಿದ್ದರು. ಈ ನಡುವೆ ‘ಮಿತ್ರೋ‘ ಎಂಬ ಆ್ಯಪ್​​​ ಜನಪ್ರಿಯತೆ ಪಡೆಡುಕೊಂಡಿತ್ತು.

ಸಾಕಷ್ಟು ಜನರು ‘ಮಿತ್ರೋ‘ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿದ್ದರು. ಸುಮಾರು 50 ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಕಂಡಿತ್ತು. ಇದರ ನಡುವೆ ‘ಮಿತ್ರೋ‘ ಆ್ಯಪ್​ನಲ್ಲಿ ಬಳಸಲಾದ ಕೋಡ್​ ಪಾಕಿಸ್ತಾನದ ಮೂಲದ್ದು ಎಂಬ ಮಾತುಗಳು ಕೇಳಿಬಂದಿತು.

ಟಿಕ್​ಟಾಕ್​ಗೆ ಪ್ರತಿಸ್ಪರ್ಧಿಯಾಗಿ ಟಿಕ್​ಟಿಕ್​ ಹೆಸರಿನಲ್ಲಿ ಆ್ಯಪ್​​ ಬಿಡುಗಡೆ ಮಾಡಲಾಗಿತ್ತು. ಈ ಆ್ಯಪ್​ನಲ್ಲಿ ಬಳಸಿರುವ ಕೋಡಿಂಗ್ ಅನ್ನು​ ಕೋಡ್​ಕ್ಯಾನನ್​​ನಲ್ಲಿ ಮಾರಾಟ ಇರಿಸಿದ್ದರು. ಸುಮಾರು 277 ಜನರು ಈ ಕೋಡ್​ ಅನ್ನು 2,500 ರೂ.ನೀಡಿ ಖರೀದಿಸಿದ್ದರು. ‘ಮಿತ್ರೋ‘ ಆ್ಯಪ್​ ಕೂಡ ಟಿಕ್​ಟಿಕ್​ಗೆ ಬಳಸಿದ ಕೋಡಿಂಗ್​ ಅನ್ನು ಕಾಪಿ ಮಾಡಿ ‘ಮಿತ್ರೋ‘ ಆ್ಯಪ್​ಗೆ ಬಳಸಿಕೊಂಡಿತ್ತು.

ಆದರೀಗ ಪ್ಲೇ ಸ್ಟೋರ್​​‘ ಮಿತ್ರೋ‘ ಆ್ಯಪ್​ ಅನ್ನು ತೆಗೆದು ಹಾಕಿದೆ. ಇನ್ನು ‘ಮಿತ್ರೋ‘ ಆ್ಯಪ್​ ಕಣ್ಣರೆಯಾದಂತೆ ಸಾಕಷ್ಟು ‘ಮಿತ್ರೋ‘ ಹೆಸರಿನ ನಕಲಿ ಆ್ಯಪ್​​​ಗಳು ಪ್ಲೇ ಸ್ಟೋರ್​ನಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ನಕಲಿ ಆ್ಯಪ್​ಗಳ ಬಳಸಿಕೊಂಡು ಸಮಸ್ಯೆ ಸಿಲುಕುವ ಮೊದಲು ಎಚ್ಚರಿಕೆಯಿಂದ ಇರುವುದು ಒಳಿತು.

Continue

Related Articles

Leave a Reply

Your email address will not be published. Required fields are marked *

Back to top button
Close
Close