ಅಂತರಾಷ್ಟ್ರೀಯ

ಮಹಾರಾಷ್ಟ್ರಕ್ಕೆ ಅಪ್ಪಳಿಸಲಿದೆ ನಿಸರ್ಗ ಚಂಡಮಾರುತ; ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ

–ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಪಶ್ಚಿಮ ಬಂಗಾಳದಲ್ಲಿ ಅಂಫಾನ್​ ಚಂಡಮಾರುತ ಭಾರೀ ಅನಾಹುತ ಸೃಷ್ಟಿಸಿತ್ತು. ಈ ಚಂಡಮಾರುತ ತಣ್ಣಗಾದ ಬೆನ್ನಲ್ಲೇ ಈಗ ಮಹಾರಾಷ್ಟ್ರಕ್ಕೆ ನಿಸರ್ಗ ಚಂಡಮಾರುತ ಬಂದಪ್ಪಳಿಸಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಬುಧವಾರ ಮಹಾರಾಷ್ಟ್ರ ಕರಾವಳಿ ಭಾಗಕ್ಕೆ ನಿಸರ್ಗ ಚಂಡಮಾರುತ ಬಂದಪ್ಪಳಿಸುವ ಸಾಧ್ಯತೆ ಇದೆ. ಗಂಟೆಗೆ 100 ಕಿ.ಮೀ ವೇಗದಲ್ಲಿ ಬೀಸುವ ಈ ಮಾರುತ ಮುಂಬೈ ಹಾಗೂ ಸುತ್ತಮುತ್ತ ಭಾಗದಲ್ಲಿ ಭಾರೀ ಹಾನಿ ಸೃಷ್ಟಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗೃತೆ ಕೈಗೊಳ್ಳಲಾಗಿದೆ.

ನಿಸರ್ಗ ಚಂಡಮಾರುತ ಎದುರಿಸಲು ತೆಗೆದುಕೊಂಡ ಕ್ರಮದ ಬಗ್ಗೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಜೊತೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಅಗತ್ಯ ಸಹಾಯ ನೀಡುವ ಭರವಸೆ ನೀಡಿದ್ದಾರೆ.

ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್​ಡಿಆರ್​ಎಫ್​) ಕಾರ್ಯಪ್ರವೃತ್ತವಾಗಿದೆ. ಮುಂಬೈ ಸೇರಿ ಅನೇಕ ಭಾಗಗಳಲ್ಲಿ ಎನ್​ಡಿಆರ್​ಎಫ್​ ತಂಡ ನಿಯೋಜನೆ ಮಾಡಲಾಗಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ . ಕರಾವಳಿ ಅಂಚಿನಲ್ಲಿರುವ ಕೆಲವರನ್ನು ಸ್ಥಳಾಂತರ ಮಾಡುವ ಬಗ್ಗೆಯೂ ಎನ್​ಡಿಆರ್​ಎಫ್​ ಚಿಂತನೆ ನಡೆಸಿದೆ.

ಮಹಾರಾಷ್ಟ್ರದಲ್ಲಿ 70 ಸಾವಿರ ಕೊರೋನಾ ವೈರಸ್​ ಪ್ರಕರಣ ದಾಖಲಾಗಿದ್ದು, ಮುಂಬೈ ಒಂದರಲ್ಲೇ 40 ಸಾವಿರ ಕೊರೋನಾ ಸೋಂಕಿತರಿದ್ದಾರೆ. ಈಗ ಚಂಡಮಾರುತ ಕೂಡ ಅಪ್ಪಳಿಸುತ್ತಿರುವುದು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕಕ್ಕೂ ಎಫೆಕ್ಟ್​:

ಮಹಾರಾಷ್ಟ್ರಕ್ಕೆ ಅಪ್ಪಳಿಸುವ ಚಂಡಮಾರುತದ ಎಫೆಕ್ಟ್​ ಕರ್ನಾಟಕದಮೇಲೂ ಉಂಟಾಗಲಿದೆ. ಕಾರವಾರ, ಕುಮಟಾ, ಉಡಪಿ, ಮಂಗಳೂರು ಭಾಗದಲ್ಲಿ ನಿಸರ್ಗ ಚಂಡಮಾರುತದ ಎಫೆಕ್ಟ್​ ಕೊಂಚ ಪ್ರಮಾಣದಲ್ಲಿ ಇರಲಿದೆ. ಇನ್ನು, ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close