Uncategorized

ಬ್ರೇಕಿಂಗ್ ನ್ಯೂಸ್ : ಕರ್ನಾಟಕದಲ್ಲಿಂದು ದಾಖಲೆಯ 388 ಕೊರೋನಾ ಕೇಸ್!; ಉಡುಪಿಯಲ್ಲಿ 150, ಕಲಬುರ್ಗಿಯಲ್ಲಿ 100 ಪ್ರಕರಣ ದಾಖಲು

— ಸಿರಾಜುದ್ದಿನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ ಸಿರವಾರ

ಕರ್ನಾಟದಲ್ಲಿ ನಿನ್ನೆಯಿಂದ 5ನೇ ಹಂತದ ಲಾಕ್​ಡೌನ್​ನೊಂದಿಗೆ ಹಲವು ನಿಯಮಗಳನ್ನು ಸಡಿಲಿಸಲಾಗಿದೆ. ಆದರೆ, ಇಂದಿನ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಬೆಚ್ಚಿಬೀಳಿಸುವಂತಿದೆ. ನಿನ್ನೆ ಸಂಜೆಯಿಂದ ಇಂದು ಸಂಜೆಯವರೆಗೆ ಕರ್ನಾಟಕದಲ್ಲಿ ದಾಖಲೆಯ 388 ಕೊರೋನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾಗಿರುವ ಶೇ. 80ರಷ್ಟು ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಇಂದು ಉಡುಪಿಯೊಂದರಲ್ಲೇ 150 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಕಲಬುರ್ಗಿಯಲ್ಲಿ 100 ಪ್ರಕರಣಗಳು ದಾಖಲಾಗಿವೆ. ಇಂದು ರಾಜ್ಯಾದ್ಯಂತ 75 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆ 388 ಆಗಿದ್ದರೂ ಇಂದು ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ. ಇದುವರೆಗೂ 1,403 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಟ್ಟಾರೆ 2,339 ಕೊರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 52 ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ.

ಉಡುಪಿ- 150, ಕಲಬುರ್ಗಿ- 100, ಬೆಳಗಾವಿ- 51, ಬೆಂಗಳೂರು- 12, ಯಾದಗಿರಿ- 5, ಮಂಡ್ಯ- 4, ರಾಯಚೂರು- 16, ಹಾಸನ 9, ಬೀದರ್- 10, ದಾವಣಗೆರೆ-7, ಚಿಕ್ಕಬಳ್ಳಾಪುರ- 2, ವಿಜಯಪುರ-4, ಬಾಗಲಕೋಟೆ- 9, ಧಾರವಾಡ-2, ತುಮಕೂರು- 2, ಕೋಲಾರ- 1, ಬೆಂಗಳೂರು ಗ್ರಾಮಾಂತರ- 3, ಹಾವೇರಿ- 1 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಜಿಲ್ಲೆಗಳಲ್ಲಿ ಮಹಾರಾಷ್ಟ್ರದಿಂದ ಬಂದವರ ಪಟ್ಟಿಯೇ ದೊಡ್ಡದಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close