ದೇವದುರ್ಗರಾಯಚೂರು ಜಿಲ್ಲೆ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಕೋತಿಗುಡ್ಡ ಗ್ರಾಮದ 38 ಜನರಿಗೆ ಹೋ ಕ್ವಾರಂಟೈನ್

ವರದಿ: ಸಿರಾಜುದ್ದೀನ್ ಬಂಗಾರ

ದೇವದುರ್ಗ:ಕಳೆದ ಒಂದು ವಾರದಿಂದ ಬಾರೀ ಸಂಖ್ಯೆಯಲ್ಲಿ ಕರೋನಾ ಪ್ರಕರಣಗಳ ಪತ್ತೆ ನಂತರ ಮೇ.29 ರಂದು ಮೊಟ್ಟ ಮೊದಲ ಕೊರೋನಾ ಬಲಿ ಜಿಲ್ಲೆಯಲ್ಲಿ ಆತಂಕ ತೀವ್ರಗೊಳ್ಳುವಂತೆ ಮಾಡಿದ್ದರೇ, ಮೃತಪಟ್ಟ ವ್ಯಕ್ತಿಯ ಕೋತಿಗುಡ್ಡ ಗ್ರಾಮದಲ್ಲಿ ಭಯಭೀತಿಗೋಳ್ಳುವಂತೆ ಮಾಡಿದೆ.

ಮಹಾರಾಷ್ಟ್ರದಿಂದ ಬಂದ ಶಿವಪ್ಪ ಬಲ್ಲಿದ್ ಎನ್ನುವವರು ಮೇ.29ರಂದು ಬೆಳಗಿನ ಜಾವ ಮೃತಪಟ್ಟಿದ್ದರು. ಈ ಸಾವಿನ ನಂತರ ಇವರಿಗೆ ಕೊರೋನಾ ಧೃಡಪಟ್ಟಿದೆ. ಅಂತ್ಯ ಸಂಸ್ಕಾರದ ನಂತರ ಪಾಸಿಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮುಂಜಾಗೃತಾ ಕ್ರಮವಾಗಿ ಸಂಬಂಧಿಕರು ಸೇರಿ 38 ಜನರನ್ನು ಹೋಂ ಕ್ವಾರಂಟೈನ್‌ ಮಾಡಿದ್ದಾರೆ ಎಂದು ತಹಶೀಲ್ದಾರ್‌ ಮಧುರಾಜ ಯಾಳಗಿ ತಿಳಿಸಿದ್ದಾರೆ.

ಕೈಯಿಗಳಿಗೆ ಶೀಲು ಹಾಕಿದ್ದು, ಹೊರಗಡೆ ಬರಲಾರದಂತೆ ಕರ್ತವ್ಯಕ್ಕೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಪಾಸಿಟಿವ್‌ ಕಂಡು ಬಂದ ವ್ಯಕ್ತಿ ಪ್ರಾಥಮಿಕ ಹಂತದಲ್ಲಿದ್ದ 38 ಜನಕ್ಕೆ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಗ್ರಾಪಂನಿಂದ ಗ್ರಾಮದಲ್ಲಿ ಡಂಗೂರ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ. ಮೃತ ವ್ಯಕ್ತಿ ಕುಟುಂಬಸ್ಥರನ್ನು ತೋಟದ ಮನೆಯಲ್ಲಿ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಬಂದು ಖಾಸಗಿ ಕೊಳವೆಬಾವಿಯಲ್ಲಿ ಮುಖ ತೊಳೆದುಕೊಂಡಿರುವ ಹಿನ್ನೆಲೆಯಲ್ಲಿ ಅದರನ್ನು ಸಹ ಬಂದ್‌ ಮಾಡಲಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಆದರೆ ಇದೀಗ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಪಂನಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಗ್ರಾಮದಲ್ಲಿ ಎಂದಿನಂತೆ ವಾತಾವರಣ ಬರಲು ತಿಂಗಳ ಕಾಲ ಬೇಕಾಗಬಹುದು. ಮೃತ ವ್ಯಕ್ತಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಂಬಂಧಿ ಕರು ಸೇರಿದಂತೆ 38 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಹೊರಗಡೆ ಬರಲಾರದಂತೆ ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಗ್ರಾಪಂ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಯಾಳಗಿ ತಿಳಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close