Uncategorized

ಕೆಲ‌ ಬಿಜೆಪಿ ಶಾಸಕರು ಕಾಂಗ್ರೇಸಿಗರ ಸಂಪರ್ಕದಲ್ಲಿದ್ದಾರೆ; ಉಗ್ರಪ್ಪ ಹೊಸ ಬಾಂಬ್

-ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಬಿಜೆಪಿ ಪಕ್ಷದಲ್ಲಿ ಸ್ಥಿತಿ ಮುಂಚಿನಂತಿಲ್ಲ. ಅಲ್ಲೂ ಅನೇಕರು ಅಸಮಾಧಾನಿತ ಶಾಸಕರು ಇದ್ದಾರೆ. ಈ ಪೈಕಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಬಹುತೇಕ ಶಾಸಕರು ಕಾಂಗ್ರೆಸ್‌ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಇಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

ಆಪರೇಷನ್ ಕಮಲದ ಕುರಿತು ರಮೇಶ್‌ ಜಾರಕಿಹೊಳಿ ಮಾತಿಗೆ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ” ರಮೇಶ್ ಜಾರಕಿಹೊಳಿ ಡಿಸಿಎಂ ಆಗ್ಬೇಕು ಅಂತ ಕನಸು ಕಂಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ.  ಬಿಜೆಪಿಯಲ್ಲಿ ಅವರಿಗೆ ಈಗ  ಉಸಿರುಗಟ್ಟುವ ವಾತಾವರಣ ಇದೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್‌ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹುಸಿ ಕತೆ ಹೇಳುತ್ತಿದ್ದಾರೆ.

ನ ಒಬ್ಬೇ ಒಬ್ಬ ಶಾಸಕರು ರಮೇಶ್ ಅವರ ಸಂಪರ್ಕದಲ್ಲಿದ್ದರೆ ಅವರು ಹೆಸರು ಬಹಿರಂಗ ಪಡಿಸಲಿ.  ನಾನು ರಮೇಶ್ ಜಾರಕಿಹೊಳಿಗೆ ಓಪನ್ ಚಾಲೆಂಜ್ ಹಾಕ್ತೇನೆ. ಅವರು ಹೆಸರು ಹೇಳಿದ ತಕ್ಷಣವೇ ಬಿಜೆಪಿ ಪಕ್ಷದ ಯಾವ್ಯಾವ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬುದನ್ನು ನಾನು ಬಹಿರಂಗಪಡಿಸುತ್ತೇನೆ” ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನಕ್ಕೆ ಕಾರಣರಾಗಿದ್ದಾರೆ. ಅಲ್ಲದೆ, ಮತ್ತೊಂದು ರಾಜಕೀಯ ಆಪರೇಷನ್‌ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close