Uncategorized

ವಾಜಿದ್ ಅವರ ಭಾವನಾತ್ಮಕ ವಿಡಿಯೋ ವೈರೆಲ್; ಆಸ್ಪತ್ರೆಯಿಂದಲೆ ಸಹೋದರನಿಗಾಗಿ ಕೊನೆಯ ಹಾಡು

— ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ

ಬಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಹಿಂದಿ ಚಿತ್ರರಂಗದ ಸುಪ್ರಸಿದ್ಧ ಸಂಗೀತ ಸಹೋದರರು ಎಂದು ಖ್ಯಾತಿ ಗಳಿಸಿದ್ದ ಸಾಜಿದ್-ವಾಜಿದ್ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಗಾನ ಬಜಾಯಿಸಿದ್ದರು.

ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಾಜಿದ್ ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಕಳೆದ 4 ದಿನಗಳಿಂದ ವೆಂಟಿಲೇಟರ್​ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದಿನ ಕಳೆದಂತೆ ಆರೋಗ್ಯ ಹದಗೆಟ್ಟಿದೆ. ಇದರ ಬೆನ್ನಲ್ಲೇ ಹೃದಯಾಘಾತದಿಂದ ಸಹೋದರ ವಿದಾಯ ಹೇಳಿದ್ದಾರೆ ಎಂದು ಸಾಜಿದ್ ತಿಳಿಸಿದ್ದಾರೆ.

1998ರಲ್ಲಿ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಮತ್ತು ಕಾಜೋಲ್ ಅಭಿನಯದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಚಿತ್ರದ ಮೂಲಕ ಸಾಜಿದ್-ವಾಜಿದ್ ಜೋಡಿ ಪರಿಚಿತರಾಗಿದ್ದರು. ಮೊದಲ ಚಿತ್ರವೇ ಸೂಪರ್ ಹಿಟ್ ಆದ ಬೆನ್ನಲ್ಲೇ ಮತ್ತೆ ಹಿಂತಿರುಗಿ ನೋಡಿದಿಲ್ಲ. ಅದರಲ್ಲೂ ಸಲ್ಲು ಮಿಯಾ ಅವರ ಚಿತ್ರಗಳ ಮ್ಯೂಸಿಕ್ ಕಂಪೋಸರ್ ಎಂದೇ ಈ ಜೋಡಿ ಬಾಲಿವುಡ್​ನಲ್ಲಿ ಖ್ಯಾತಿಗಳಿಸಿದ್ದರು.

ಸಾಜಿದ್-ವಾಜಿದ್ ಯಾವಾಗೆಲ್ಲಾ ಸಲ್ಮಾನ್ ಖಾನ್ ಚಿತ್ರಗಳಿಗೆ ಗಾಜ ಬಜಾಯಿಸಿದ್ದರೂ, ಅವೆಲ್ಲವೂ ಸೂಪರ್ ಡೂಪರ್ ಹಿಟ್ ಲೀಸ್ಟ್​ಗೆ ಸೇರ್ಪಡೆಯಾಗುತ್ತಿತ್ತು. ಅದು ತೇರೆ ನಾಮ್ ಚಿತ್ರವಿರಲಿ, ಇಲ್ಲ ದಬಂಗ್ ಸಿರೀಸ್ ಚಿತ್ರಗಳಿರಲಿ…ಹೀಗೆ ಬಾಲಿವುಡ್​ ಭಾಯಿಜಾನ್ ಅಭಿನಯದ ಹಲೋ, ವೀರ್, ಪಾರ್ಟನರ್, ವಾಂಟೆಡ್ , ಏಕ್ ಥಾ ಟೈಗರ್ ಸೇರಿದಂತೆ ಹಲವು ಸಂಗೀತ ಹಿಟ್ ಚಿತ್ರಗಳಿಗೆ ಬ್ಯಾಂಡ್ ಬಜಾಯಿಸಿದ್ದರು.

ಆದರೆ ವಿಧಿಯಾಟ, 22 ವರ್ಷಗಳ ಸಂಗೀತ ಪಯಣಕ್ಕೆ ಇಂದು ವಾಜಿದ್ ವಿದಾಯ ಹೇಳಿದರು. ಆದರೆ ಅದಕ್ಕೂ ಮುನ್ನ ತನ್ನ ಸಹೋದರನಿಗಾಗಿ ಕೊನೆಯ ಬಾರಿ ವಾಜಿದ್ ಹಾಡೊಂದನ್ನು ಸಮರ್ಪಿಸಿದ್ದರು. ಈ ಹಾಡಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ, ಆಸ್ಪತ್ರೆ ಬೆಡ್​ನಲ್ಲಿ ಕೂತಿರುವ ವಾಜಿದ್, ನಾನು ಸಾಜಿದ್ ಭಾಯ್​ಗಾಗಿ ನಾನು ಒಂದು ಹಾಡು ಹಾಡಲು ಇಚ್ಛಿಸುತ್ತೇನೆ. ಅಂತೆಯೇ ದಬಂಗ್ ಚಿತ್ರದ ಶೀರ್ಷಿಕೆ ಹಾಡನ್ನು ಹಾಡಿದ್ದರು. ಭಾವನಾತ್ಮಕವಾಗಿ ಮೂಡಿ ಬಂದಿರುವ ಈ ಹಾಡಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ ಸಲ್ಮಾನ್ ಖಾನ್- ಕಿಚ್ಚ ಸುದೀಪ್ ಅಭಿನಯದ ದಬಂಗ್-3 ಚಿತ್ರಕ್ಕೂ ಸಾಜಿದ್-ವಾಜಿದ್ ಸಹೋದರು ಸಂಗೀತ ನೀಡಿದ್ದರು. ಈ ಸಿನಿಮಾ ಕನ್ನಡದಲ್ಲಿ ಡಬ್​ ಆಗಿದ್ದರಿಂದ ಅವರ ಹಾಡುಗಳು ಕನ್ನಡದಲ್ಲೂ ಕೇಳುವಂತಾಗಿತ್ತು. ವಾಜಿದ್ ಅವರ ನಿಧನಕ್ಕೆ ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ವರುಣ್ ಧವನ್ ಸೇರಿದಂತೆ ಬಾಲಿವುಡ್​ನ ಬಹುತೇಕರು ಸಂತಾಪ ಸೂಚಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close