ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ವಿಮಾನಯಾನ ಪುನರಾರಂಭ; ಒಂದು ವಾರದಲ್ಲಿ 3370 ವಿಮಾನ ಹಾರಾಟ, 2.6 ಲಕ್ಷ ಪ್ರಯಾಣಿಕರ ಓಡಾಟ

Posted By: Sirajuddin Bangar

Source: NS18

ದೇಶದಲ್ಲಿ ಲಾಕ್‌ಡೌನ್ ಸಡಿಲವಾಗಿ ಕಳೆದ ಒಂದು ವಾರದಿಂದ ದೇಶದಾದ್ಯಂತ ವಿಮಾನಯಾನ ಆರಂಭವಾಗಿದೆ. ಮೇ.25 ರಿಂದ ಮೇ.31ರ ಅವಧಿಯಲ್ಲಿ ಕನಿಷ್ಟ 3,370 ವಿಮಾನಗಳು ಹಾರಾಟ ನಡೆಸಿವೆ ಎಂದು ನಾಗರೀಕ ವಿಮಾನುಯಾನ ಸಚಿವಾಲಯ ಇಂದು ಮಾಹಿತಿ ನೀಡಿದೆ.

ಮಾರಣಾಂತಿಕ ಕೊರೋನಾ ವೈರಸ್ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಕಳೆದ ಎರಡು ತಿಂಗಳಿನಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಪರಿಣಾಮ ಎಲ್ಲಾ ರೀತಿಯ ಸಾರಿಗೆಯನ್ನು ಸಹ ತಾತ್ಕಾಲಿಕವಾಘಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಲಾಕ್‌ಡೌನ್ ಸಡಿಲವಾಗಿರುವ ಕಾರಣ ಮೇ. 25ರಿಂದ ಎಲ್ಲಾ ರೀತಿಯ ಸಾರಿಗೆ ಜೊತೆಗೆ ವಿಮಾನಯಾನವನ್ನೂ ಆರಂಭಿಸಲಾಗಿದೆ.

ವಿಮಾನಯಾನ ಆರಂಭವಾದ ಮೇ.25 ರಿಂದ ಈವರೆಗೆ ವಿಮಾನ ಸಂಚಾರದಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತಿದೆ. ದಿನದ ದತ್ತಾಂಶವನ್ನು ನೋಡುವುದಾದರೆ, ಮೊದಲ ದಿನ ದೇಶದಾದ್ಯಂತ ಸುಮಾರು 428 ವಿಮಾನಗಳು ಸಂಚಾರ ನಡೆಸಿವೆ. ಮೇ 26 ರಂದು 445, ಮೇ 27 ರಂದು 460, ಮೇ 28 ರಂದು 494, ಮೇ 29 ರಂದು 513, ಹಾಗೂ ಮೇ 30 ರಂದು 529 ವಿಮಾನಗಳು ಕಾರ್ಯನಿರ್ವಹಿಸಿವೆ.

ಆದರೆ, ಅಂಕಿಅಂಶಗಳ ಪ್ರಕಾರ ಪ್ರಯಾಣಿಕರ ಸಂಖ್ಯೆ ಶೇ.45 ರಿಂದ 50 ರಷ್ಟು ಕಡಿಮೆಯಾಗಿದೆ. ಆರಂಭದಲ್ಲಿ ಅಗತ್ಯ ಪ್ರಮಾಣದ ಸಂಚಾರವನ್ನಷ್ಟೆ ಆರಂಭಿಸಲಾಗಿತ್ತು. ಅಲ್ಲದೆ, ಇನ್ನೂ ಹಲವಾರು ರಾಜ್ಯಗಳಲ್ಲಿ ಲಾಕ್‌ಡೌನ್ ಅನ್ನು ಪಾಲಿಸಲಾಗುತ್ತಿರುವುದರಿಂದ ಹಾಗೂ ವಿಮಾನ ಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಕಾರಣ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ಮೇ 25 ರಿಂದ ವಿಮಾನ ಯಾನವನ್ನು ಪುನರಾರಂಭಿಸಿದ ಕೇಂದ್ರ ಸರ್ಕಾರ ಕೇವಲ ಮೂರನೇ ಒಂದು ಭಾಗದಷ್ಟು ಮಾತ್ರ ಕಾರ್ಯಾಚರಣೆ ಆರಂಭಿಸಿದೆ. ಮತ್ತು ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾದಂತಹ ಪ್ರಮುಖ ಕೇಂದ್ರಗಳಲ್ಲಿ ವಿಮಾನಯಾನ ಕಾರ್ಯ ನಿರ್ವಹಣೆಯನ್ನು ನಿರ್ಬಂಧಿಸಿರುವುದೂ ಸಹ ಪ್ರಯಾಣಿಕರ ಸಂಖ್ಯೆ ಕುಗ್ಗಲು ಕಾರಣವಾಗಿದೆ.

ವಿಮಾನ ಯಾನ ಆರಂಭವಾದ ಈ ಏಳು ದಿನದಲ್ಲಿ ಒಟ್ಟಾರೆ 3,070 ವಿಮಾನಗಳು ಹಾರಾಟ ನಡೆಸಿದ್ದು 2,60,000 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ನಾಗರೀಕ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close