ಸಿನಿಮಾ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಪ್ರೀತಿಸಿ ಮೋಸ ಹೋದ ಕನ್ನಡ ಕಿರುತೆರೆ ನಿರೂಪಕಿ ಬೆಂಗಳೂರಲ್ಲಿ ಆತ್ಮಹತ್ಯೆಗೆ ಶರಣು

Posted By: Sirajuddin Bangar

Source:NS18

ಬೆಂಗಳೂರು (ಜೂ.1): ಪ್ರೀತಿಸಿ ಮೋಸ ಹೋದ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವ ದೃಶ್ಯಗಳು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ತೋರಿಸಲಾಗುತ್ತದೆ. ನಿಜ ಜೀವನದಲ್ಲೂ ಈ ರೀತಿಯ ಸಾಕಷ್ಟು ಘಟನೆ ನಡೆದಿವೆ. ವಿಚಿತ್ರ ಎಂದರೆ, ಪ್ರೀತಿಸಿ ಮೋಸ ಹೋದ ಕಿರುತೆರೆ ನಿರೂಪಕಿ ಚಂದನಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚಂದನಾ ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಐದು ವರ್ಷಗಳಿಂದ ದಿನೇಶ್ ಎಂಬಾತನನ್ನು ಚಂದನಾ ಪ್ರೀತಿಸುತ್ತಿದ್ದರು. ಅಲ್ಲದೆ, ಮದುವೆ ಆಗುವ ನಿರ್ಧಾರವನ್ನು ಕೂಡ ಇಬ್ಬರು ತೆಗೆದುಕೊಂಡಿದ್ದರು.

ಇತ್ತೀಚೆಗೆ ಮದುವೆಯಾಗುವಂತೆ ದಿನೇಶ್​ಗೆ ಚಂದನಾ ಒತ್ತಾಯ ಮಾಡಿದ್ದರು. ‘ಈಗ ಲಾಕ್​ಡೌನ್​ ಇದೆ. ಹೀಗಾಗಿ ಲಾಕ್​ಡೌನ್​ ಪೂರ್ಣಗೊಂಡ ನಂತರ ಮದುವೆಯಾಗುವುದಾಗಿ’ ದಿನೇಶ್​ ಭರವಸೆ ನೀಡಿದ್ದ. ಆದರೆ, ಮತ್ತೆ ಉಲ್ಟಾ ಹೊಡೆದಿದ್ದ ದಿನೇಶ್​ ಮದುವೆಯಾಗಲು ನಿರಾಕರಿಸಿದ್ದ.

ಇನ್ನು, ಮದುವೆ ಆಗುವುದಾಗಿ ನಂಬಿಸಿ ಚಂದನಾ ಜೊತೆ ಈತ ಅನೇಕ ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಇನ್ನು, ಐದು ಲಕ್ಷ ಹಣ ಪಡೆದು ದಿನೇಶ್ ವಂಚಿಸಿದ್ದ ಎಂದು ಚಂದನಾ ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಎಲ್ಲ ಘಟನೆಯಿಂದ ಮನನೊಂದ ಚಂದನಾ ಮೇ 28 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು. ಕೂಡಲೇ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚಂದನಅ ಇಂದು ಮೃತಪಟ್ಟಿದ್ದಾರೆ.ದಿನೇಶ್​ ಮಾರತ್ತಹಳ್ಳಿಯ ಕಂಪನಿಯೊಂದಲ್ಲಿ  ಸಾಪ್ಟ್​​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಚಂದನಾ  ಹಾಸನದ ಬೇಲೂರು ಮೂಲದವರು. ಸದ್ಯ ದಿನೇಶ್ ಹಾಗೂ ಆತನ ಕುಟುಂಬದವರ ಮೇಲೆ ದೂರು ದಾಖಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close