Uncategorized

ಡಿಕೆ ಬ್ರದರ್ಸ್​​ ಕರಾಳ ಬದುಕಿಗೆ ಬೆಳಕು ನೀಡಿದ್ದೇ ಬಿಜೆಪಿ‘ – ಡಿಸಿಎಂ ಅಶ್ವಥ್​​ ನಾರಾಯಣ್

— ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಮತ್ತವರ ಸಹೋದರ ಡಿ.ಕೆ ಸುರೇಶ್​ ವಿರುದ್ಧ ಉಪಮುಖ್ಯಮಂತ್ರಿ ಅಶ್ವಥ್​​ ನಾರಾಯಣ್​​ ಕಿಡಿಕಾರಿದ್ಧಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 1 ವರ್ಷದ ಸಾಧನೆ ಸಂಬಂಧ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅಶ್ವಥ್​​ ನಾರಾಯಣ್​​ ಡಿ.ಕೆ ಬ್ರದರ್ಸ್​ಗೆ ತಪರಾಕಿ ಬಾರಿಸಿದ್ದಾರೆ.

ಕೆಲವು ರಾಜಕಾರಣಿಗಳು ಕರಾಳವಾಗಿ ಬದುಕುತ್ತಿದ್ದಾರೆ. ಅಂತವರ ಪಕ್ಷವೂ ಕರಾಳವಾಗಿದೆ. ಇಂತಹ ರಾಜಕಾರಣಿಗಳಿಗೆ ಪ್ರಗತಿ, ಬೆಳಕು ನೀಡುತ್ತಿರುವುದು ಬಿಜೆಪಿ ಪಕ್ಷ. ಬಿಜೆಪಿಗೆ ಡಿ.ಕೆ ಶಿವಕುಮಾರ್​​ ಮತ್ತು ಡಿ.ಕೆ ಸುರೇಶ್ ಎನ್ನುವುದು ಕಾಣೋದಿಲ್ಲ. ಬದಲಿಗೆ ಜಿಲ್ಲೆಯ ಅಭಿವೃದ್ದಿ ಮಾತ್ರ ಮುಖ್ಯವಾಗುತ್ತದೆ. ನಾವು ರಾಮನಗರ ಅಭಿವೃದ್ದಿ ಮಾಡುತ್ತೇವೆ ಎಂದರು ಡಿಸಿಎಂ ಅಶ್ವಥ್​​ ನಾರಾಯಣ್​.

.ಕೆ ಶಿವಕುಮಾರ್​​ ಕಾಂಗ್ರೆಸ್​ ಅಧ್ಯಕ್ಷರಾಗಿದ್ದಾರೇ ಎಂದು ನಾನು ಜಿಲ್ಲೆಗೆ ಬರುತ್ತಿಲ್ಲ. ನಮ್ಮ ಸರ್ಕಾರ ನನಗೆ ಈ ಜಿಲ್ಲೆಯ ಜವಾಬ್ದಾರಿ ನೀಡಿದೆ. ಹಾಗಾಗಿ ಇಲ್ಲಿಗೆ ಬರುತ್ತಿದ್ದೇನೆ. ದೊಡ್ಡ ಮನುಷ್ಯರು ದೊಡ್ಡವರಾಗೆಯೇ ಕಾಣುತ್ತಾರೆ. ನಾವು ಅವರಷ್ಟು ದೊಡ್ಡ ಮನುಷ್ಯರಲ್ಲ ಎಂದರು.

ರಾಮನಗರ ಬಂಡೆ ಡಿ.ಕೆ ಶಿವಕುಮಾರ್​​ ಕೆಪಿಸಿಸಿ​​ ನೂತನ ಅಧ್ಯಕ್ಷರಾಗುತ್ತಿದಂತೆಯೇ ಜಿಲ್ಲೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಜಟಾಪಟಿ ಶುರುವಾಗಿದೆ. ಈ ಹಿಂದೆ ಡಿ.ಕೆ ಸುರೇಶ್​​ ಡಿಸಿಎಂ ಅಶ್ವಥ್​​ ನಾರಾಯಣ್​ ವಿರುದ್ಧ ಕಿಡಿಕಾರಿದ್ದರು. ಈಗ ಅಶ್ವಥ್​​ ನಾರಾಯಣ್​​ ಡಿಕೆ ಬ್ರದರ್ಸ್​ಗೆ ಟಾಂಗ್​​ ನೀಡುವ ಕೆಲಸ ಮಾಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close