ಕರ್ನಾಟಕ ಸುದ್ದಿ

ಜನಸಾಮಾನ್ಯರಿಗೆ ಶಾಕ್; ಅಡುಗೆ ಅನಿಲ ಬೆಲೆಯಲ್ಲಿ ದಿಢೀರ್ ಏರಿಕೆ

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಕೊರೋನಾ ವೈರಸ್ ಹರಡುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರ ಲಾಕ್​ಡೌನ್ ಸಡಿಲಿಕೆ ಮಾಡುವ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಹುತೇಕ ಕಾರ್ಯ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಈ ಮಧ್ಯೆ ಜನ ಸಾಮಾನ್ಯರಿಗೆ ಅಡುಗೆ ಅನಿಲ ಬೆಲೆ ಏರಿಕೆಯ ಬರೆ ಬಿದ್ದಿದೆ.

ದೆಹಲಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇಂಡೇನ್ ಗ್ಯಾಸ್ ಸಿಲಿಂಡರ್ 11.50 ರೂಪಾಯಿ ಹೆಚ್ಚಿಸಿದೆ. ಈ ದರ ನಗರದಿಂದ ನಗರಕ್ಕೆ ಬದಲಾವಣೆ ಇರಲಿದೆ.

ರೀಟೇಲರ್​​ಗಳು ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್​ಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್​ಪಿಜಿ ಬೆಲೆ ಹಾಗೂ ಅಮೆರಿಕ ಡಾಲರ್ ಮತ್ತು ಭಾರತೀಯ ರುಪೀ ಮೌಲ್ಯಗಳನ್ನು ಆಧರಿಸಿ ಈ ಬೆಲೆ ನಿರ್ಧಾರ ಮಾಡಲಾಗುತ್ತದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲದ ಬೆಲೆ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಎಲ್​ಪಿಜಿ ದರ ಭಾರೀ ಇಳಿಕೆ ಕಂಡಿತ್ತು. 744 ರೂ ಇದ್ದ ಸಿಲಿಂಡರ್ ದರ 581 ರೂಪಾಯಿ ಆಗಿತ್ತು. ಆದರೆ, ಈ ತಿಂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್​ಪಿಜಿ ದರ ಏರಿಕೆ ಕಂಡ ಹಿನ್ನೆಲೆಯಲ್ಲಿ 11 ಸಿಲಿಂಡರ್ಗೆ 11 ರೂಪಾಯಿ ಏರಿಕೆ ಮಾಡಲಾಗಿದೆ.

ಕೊರೋನಾ ವೈರಸ್​ ಭಾರತದಲ್ಲಿ ಮಿತಿ ಮೀರಿ ಹರಡುತ್ತಿದೆ. ವೈರಸ್​ ನಿಯಂತ್ರಣಕ್ಕೆ ಬಾರದ ಹೊರತಾಗಿಯೂ ಸರ್ಕಾರ ಲಾಕ್​ಡೌನ್​ ಸಡಿಲಿಕೆ ಮಾಡಿದ್ದು, ಇದು ಸೋಂಕು ಹೆಚ್ಚಲು ರಹದಾರಿ ಮಾಡಿಕೊಟ್ಟಂತಾಗಿದೆ. ಈ ಮಧ್ಯೆ ವಿಶ್ವದಲ್ಲಿ ಅತಿ ಹೆಚ್ಚು ಪೀಡಿತರಿರುವ ದೇಶಗಳ ಸಾಲಿನಲ್ಲಿ ಭಾರತ 7ನೇ ಸ್ಥಾನಕ್ಕೆ ಏರಿದೆ. ಇದು ಆರ್ಥಿಕತೆಯ ಮೇಲೆ ಭಾರೀ ಹೊಡೆತ ನೀಡಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close