ಅಂತರಾಷ್ಟ್ರೀಯಕರ್ನಾಟಕ ಸುದ್ದಿ

ಇಂದು 200 ವಿಶೇಷ ರೈಲುಗಳಲ್ಲಿ ಪ್ರಯಾಣಿಸಲಿದ್ದಾರೆ 1.45 ಲಕ್ಷ ಪ್ರಯಾಣಿಕರು; ರಾಜ್ಯದಿಂದಲೂ 5 ರೈಲುಗಳು ಸಂಚಾರ

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಹೆಚ್ಚುವರಿಯಾಗಿ 200 ಶ್ರಮಿಕ್ ವಿಶೇಷ ರೈಲುಗಳು ಸೋಮವಾರ ದೇಶಾದ್ಯಂತ ಸಂಚರಿಸಲಿದ್ದು, ಇಂದು ಒಂದೇ ದಿನ 1.45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ. ಮೇ 12ರಿಂದ 30 ವಿಶೇಷ ರೈಲುಗಳು ಓಡಾಟ ಆರಂಭಿಸಿದ್ದವು. ಜೂನ್ 1ರಿಂದ ಜೂನ್ 30ರವರೆಗೆ 26 ಲಕ್ಷ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಈ ರೈಲುಗಳು ಸಾಮಾನ್ಯ ರೈಲುಗಳ ಮಾದರಿಯಂತೆ ಇರಲಿದೆ. ಇವು ಎಸಿ ಮತ್ತು ನಾನ್​ ಎಸಿ ಎರಡೂ ಕೋಚ್​ಗಳನ್ನು ಹೊಂದಿರುವ ಸಂಪೂರ್ಣ ಕಾಯ್ದಿರಿಸಿದ ರೈಲುಗಳಾಗಿವೆ. ಜನರಲ್ (ಜಿಎಸ್) ಕೋಚ್​ನಲ್ಲಿ ಕುಳಿತುಕೊಳ್ಳಲು ಆಸನ ಕಾಯ್ದಿರಿಸಲಾಗಿದೆ. ಕಾಯ್ದಿರಿಸದ ಕೋಚ್​ಗಳು ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ವರ್ಗದ ದರದಲ್ಲಿ ವ್ಯತ್ಯಾಸವಿದೆ. ಸಾಮಾನ್ಯ ದರ್ಜೆಗೆ (ಜಿಎಸ್) ಎರಡನೇ ದರ್ಜೆಯ (2ಎಸ್)ಯ ದರ ವಿಧಿಸಲಾಗುವುದು. ಮತ್ತು ಎಲ್ಲ ಪ್ರಯಾಣಿಕರಿಗೂ ಆಸನದ ವ್ಯವಸ್ಥೆ ಒದಗಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ರೈಲು ಹೊರಡುವ ಸಮಯಕ್ಕಿಂತ 90 ನಿಮಿಷ ಮುಂಚಿತವಾಗಿ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಬಂದಿರಬೇಕು. ಮತ್ತು ಕೇವಲ ದೃಢಪಡಿಸಲಾದ ಹಾಗೂ ಆರ್​ಎಸಿ ಟಿಕೆಟ್ ಪಡೆದ ಪ್ರಯಾಣಿಕರನ್ನು ಮಾತ್ರ ರೈಲ್ವೆ ನಿಲ್ದಾಣ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಪ್ರಕಾರ ಎಲ್ಲ ಪ್ರಯಾಣಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್​ಗೆ ಒಳಪಡಿಸಲಾಗುವುದು ಮತ್ತು ಪ್ರಯಾಣಿಕರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಾರದಿದ್ದಲ್ಲಿ ಮಾತ್ರ ಅವರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ರಾಜ್ಯದಿಂದ 5 ಶ್ರಮಿಕ್ ರೈಲುಗಳು

ಇಂದು ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ 5 ಶ್ರಮಿಕ್‌ ರೈಲುಗಳು ಹೊರಡಲಿವೆ. ಪ್ರತಿ ರೈಲಿನಲ್ಲೂ 1500ರಂತೆ 7500 ವಲಸಿಗರ ಪ್ರಯಾಣಿಸಲಿದ್ದಾರೆ. ಸೇವಾ ಸಿಂಧು ಮೂಲಕ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ

ಚಿಕ್ಕಬಾಣಾವರದಿಂದ ಉತ್ತರ ಪ್ರದೇಶದ ಗೋರಕ್‌ಪುರಕ್ಕೆ‌ ಸಂಜೆ 4ಕ್ಕೆ ಒಂದು ರೈಲು

ಹೊಸೂರು ರಸ್ತೆ ರೈಲು ನಿಲ್ದಾಣದಿಂದ ಅಸ್ಸಾಂನ ದಿಬ್ರುಗರ್‌ಗೆ ಸಂಜೆ 4ಕ್ಕೆ ಒಂದು ರೈಲು

KSR ರೈಲು ನಿಲ್ದಾಣದಿಂದ ಒಡಿಸ್ಸಾದ ಬಾಲಸೊರೆಗೆ ರಾತ್ರಿ 10ಕ್ಕೆ ಒಂದು ರೈಲು

KSR ರೈಲು ನಿಲ್ದಾಣದಿಂದ ಪಶ್ಚಿಮಬಂಗಾಳದ ಜಪ್ಲೈ‌ಗುರಿಗೆ ಸಂಜೆ 6ಕ್ಕೆ

KSR ರೈಲು ನಿಲ್ದಾಣದಿಂದ ಪಶ್ಚಿಮಬಂಗಾಳದ ಜಪ್ಲೈ‌ಗುರಿಗೆ ರಾತ್ರಿ 8ಕ್ಕೆ

Continue

Related Articles

Leave a Reply

Your email address will not be published. Required fields are marked *

Back to top button
Close
Close