ರಾಯಚೂರು ಜಿಲ್ಲೆ ಸುದ್ದಿ

ರಾಯಚೂರು: ಒಂದೇ ದಿನ 83 ಪಾಸಿಟಿವ್ ದೃಢ : 183ಕ್ಕೆ ಏರಿದ ಸೋಂಕಿತರ ಸಂಖ್ಯೆ.

— ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ

ರಾಯಚೂರು ಮೇ.31: ಒಂದೇ ದಿನ 83 ಜನರಿಗೆ ಕೊರೋನಾ ದೃಢವಾಗಿದೆ. ಇದಿನ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಜಿಲ್ಲೆಯಲ್ಲಿ ಕರೊನಾ ಸೊಂಕಿತರ ಸಂಖ್ಯೆ 183 ಕ್ಕೆ ಏರಿಕೆಯಾದಂತಾಗಿದೆ.

ಜಿಲ್ಲೆಯಲ್ಲಿ 34 ಜನ ಸೋಂಕಿತರು ಗುಣಮುಖರಾಗಿ ಮನೆಗೆ ಹೋದರು ಎಂಬ ಸಂತಸದಲ್ಲಿದ್ದ ಜಿಲ್ಲೆಯ ಜನರಿಗೆ ಇಂದಿನ ವರದಿ ಸಗ್ಬ್ರಾಂತಿಯಾಗುವಂತೆ ಮಾಡಿದೆ. ಇಂದು ಜಿಲ್ಲೆಯಲ್ಲಿ ಒಂದೇ ದಿನ 83 ಪ್ರಕರಣಗಳು ಸೋಕಿರುವುದು ದೃಢವಾಗಿದೆ. ಇದರಿಂದ 183 ಕ್ಕೆ ಏರಿಕೆಯಾದಂತಾಗಿದ್ದು ಸೋಂಕಿತರಲ್ಲರಿಗೂ ನಗರದ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಇವರೆಲ್ಲ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಬಂದ ಕಾರ್ಮಿಕರಾಗಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣದಲ್ಲಿ 80 ಜನ ಕ್ವಾರೆಂಟೈನ್ ನಲ್ಲಿರುವ ,ಲಿಂಗಸುಗೂರಿನ ಮೂರು ಜನರಿಗೆ ಸೋಂಕು ತಗುಲಿದ್ದು, ಓರ್ವ ಕೇರಳದಿಂದ ವಾಮಮಾರ್ಗದಲ್ಲಿ ಬಂದಿದ್ದ ವ್ಯಕ್ತಿ, ಇತ್ತೀಚೆಗೆ ಸೋಂಕು ದೃಢವಾಗಿದ್ದ ಬ್ಯಾಂಕ್ ಸಿಬ್ಬಂದಿ ಜೊತೆ ಸಂಪರ್ಕ ಹೊಂದಿದ್ದರಿಂದ ಸೋಂಕು ಹರಡಿದ್ದು, ಮೂರನೆ ವ್ಯಕ್ತಿ ಡೆಂಗ್ಯೂ ಜ್ವರದಿಂದ ಬಳುತ್ತಿದ್ದೇನೆ ಎಂದು ಮನೆಯಲ್ಲೆ ಇದ್ದ ವ್ಯಕ್ತಿಗೆ ಸೋಂಕು ದೃಢವಾಗಿದೆ. ಎಂದು ರಾಯಚೂರು ಜಿಲ್ಲಾಧಿಕಾರಿ ಎ ವೆಂಕಟೇಶ ಕುಮಾರ್ ಹೇಳಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close