ಅಂತರಾಷ್ಟ್ರೀಯ

ಮನ್ ಕಿ ಬಾತ್: ಕೊರೋನಾ ವಿರುದ್ಧ ಹೋರಾಟದಲ್ಲಿ ದೇಶದ ಪ್ರತಿಯೊಬ್ಬರ ಪಾತ್ರವಿದೆ – ಪ್ರಧಾನಿ ಮೋದಿ

Posted By : Sirajuddin Bangar

Source: NS18

ನವದೆಹಲಿ(ಮೇ.31): ಮಾರಕ ಕೊರೋನಾ ವೈರಸ್​ ವಿರುದ್ಧದ ಹೋರಾಟದಲ್ಲಿ ದೇಶದ ಪ್ರತಿಯೊಬ್ಬರ ಪಾತ್ರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇಂದು ಕೋವಿಡ್​-19 ಬಗ್ಗೆ ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ಮೋದಿ, ಈ ಸಂಗ್ರಾಮದಲ್ಲಿ ಶತಾಯಗತಾಯ ಜಯಸಾಧಿಸುವುದು ನಮ್ಮ ಗುರಿ ಎಂದು ಸಾರಿದ್ದಾರೆ.

ನಾವು ಕೋವಿಡ್-19 ವೈರಾಣು ತಹಬದಿಗೆ ತರಲು ಸಾಕಷ್ಟು ಶ್ರಮಿಸುತ್ತಿದ್ದೇವೆ. ಇಂತಹ ಧೀರ್ಘ ಯುದ್ಧದಲ್ಲಿ ಜಯ ಸಾಧಿಸುವುದು ನಮ್ಮ ಪರಮ ಗುರಿ. ಇದಕ್ಕಾಗಿ ನಾವು ಇನ್ನಷ್ಟು ಧೃಡಸಂಕಲ್ಪ ತೊಡಗಿದ್ದೇವೆ. ಇದನ್ನು ನಿಗ್ರಹಿಸುವ ತನಕ ಯಾರು ವಿರಮಿಸಬಾರದು. ನಾವೀಗಾಗಲೇ ಕೋವಿಡ್​​-19 ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿದ್ದೇವೆ ಎಂದರು.

ಮಾರಕ ಕೊರೋನಾ ವೈರಸ್​ನಿಂದ ಯಾರು ನೆಮ್ಮದಿಯಿಂದ ಇಲ್ಲ. ದೇಶದ ಎಲ್ಲಾ ವರ್ಗಗಳು ಕಾರ್ಮಿಕರು, ಬಡವರು, ಮಹಿಳೆಯರು, ಶ್ರೀಮಂತರು ತತ್ತರಿಸಿಹೋಗಿದ್ದಾರೆ. ನಾವು ಇನ್ನಷ್ಟು ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕಿದೆ. ಎಲ್ಲವನ್ನು ಧೈರ್ಯದಿಂದ ಎದುರಿಸಬೇಕಿದೆ ಎಂದರು.

ಶ್ರದ್ಧೆ ಮತ್ತು ಭಕ್ತಿಯೊಂದಿಗೆ ಸಂಶೋಧನೆಯೂ ಅಗತ್ಯವಿದೆ. ಸಾವಿರಾರು ವರ್ಷಗಳ ಬಳಿಕ ಮಾನವ ಕುಲ ಸಂಶೋಧನೆ ಮೂಲಕ ಆಧುನಿಕ ಜಗತ್ತನ್ನು ತಲುಪಿದೆ. ಇದು ನಮ್ಮನ್ನು ಪರೀಕ್ಷೆಗೆ ಒಳಪಡಿಸುವ ಕಾಲ. ಈ ಸಂದರ್ಭದಲ್ಲಿ ಯೋಗ ಮತ್ತು ಆಯುರ್ವೇದ ಉತ್ತಮ ಅಭ್ಯಾಸಗಳು, ನಮ್ಮ ಉಸಿರಾಟಕ್ಕೂ ಒಳ್ಳೆಯದು ಎಂದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close