ಕರ್ನಾಟಕ ಸುದ್ದಿ

ಬ್ರೇಕಿಂಗ್ ನ್ಯೂಸ್ : ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ: ಚುನಾವಣೆ ಆಯೋಗದ ವಿರುದ್ಧ ಕೋರ್ಟ್​ ಮೊರೆ ಹೋಗಲು ಕಾಂಗ್ರೆಸ್​ ನಿರ್ಧಾರ

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿದ ರಾಜ್ಯ ಚುನಾವಣಾ ಆಯೋಗದ ವಿರುದ್ಧ ಕೋರ್ಟ್​ ಮೊರೆ ಹೋಗಲು ಕಾಂಗ್ರೆಸ್​ ನಿರ್ಧರಿಸಿದೆ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನ್ಯಾಯಲದ ಮೆಟ್ಟಿಲೇರಲು ಮುಂದಾಗಿರುವ ಕಾಂಗ್ರೆಸ್​ ನಾಯಕರು, ಚುನಾವಣೆ ಆಯೋಗವೂ ಬಿಜೆಪಿ ಸರ್ಕಾರಕ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ದೂರು ಸಲ್ಲಿಸಲಿದ್ದಾರೆ.

ಇನ್ನು, ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಗ್ರಾಮ ಪಂಚಾಯಿಯಿ ಚುನಾವಣೆ ಮುಂದೂಡಿಕೆ ಮೂಲಕ ಆಯೋಗ ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಜತೆಗೆ ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಪಂಚಾಯತಿ ಚುನಾವಣೆ ಮುಂದೂಡಿಕೆ ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆಗೆ 1993ಕ್ಕೆ ಅಪಚಾರ ಮಾಡಿದಂತೆ ಎಂದು ಕಿಡಿಕಾರಿದ್ದಾರೆ.

ಹಾಗೆಯೇ ಆಯೋಗದ ಈ ಪ್ರಜಾತಂತ್ರ ವಿರೋಧಿ ನಿರ್ಧಾರದ ವಿರುದ್ಧ ಕೋರ್ಟ್​ ಮೊರೆ ಹೋಗಲಿದ್ದೇವೆ. ಬಿಜೆಪಿ ಸರ್ಕಾರದ ಒತ್ತಡ ಹೇರಿದ ಕೂಡಲೇ ಆಯೋಗ ಚುನಾವಣೆ ಮುಂದೂಡಿರುವುದು ಕಾನೂನುಬಾಹಿರ ಎಂದು ನಿನ್ನೆಯೇ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದರು.

ಕರ್ನಾಟಕ ಪಂಚಾಯತ್ ಕಾಯ್ದೆ ಸೆಕ್ಷನ್ 8ರ ಪ್ರಕಾರ ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ ನಡೆಯದೇ ಆಡಳಿತ ಸಮಿತಿ ರಚಿಸುವಂತಿಲ್ಲ. ಈ ವಿಚಾರವನ್ನು ಕೋರ್ಟ್ ಗಮನಕ್ಕೆ ತರುತ್ತೇವೆ. ನಮಗೆ ಗೆಲುವು ಸಿಗಲಿದೆ ಎಂಬ ನಂಬಿಕೆ ಇದೆ ಎಂಬುದು ಕಾಂಗ್ರೆಸ್​ನ ಅಭಿಪ್ರಾಯ.

Continue

Related Articles

Leave a Reply

Your email address will not be published. Required fields are marked *

Back to top button
Close
Close