ಅಪರಾಧಕರ್ನಾಟಕ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಲ್ಲಿ ನಡೆಯಿತು ಯುವಕನ ಬರ್ಬರ ಹತ್ಯೆ!

ಬೆಂಗಳೂರು(ಮೇ.31): ಲಾಕ್​ಡೌನ್​ ಸಡಿಲಿಕೆ ಬೆನ್ನಲ್ಲೇ ಬೆಂಗಳೂರಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಈಗ ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ರಾತ್ರಿ ವೇಳೆ ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಕೆಜಿ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಅಸ್ಕರ್​ ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಅಸ್ಕ​ರ್​ನನ್ನು ಇಬ್ಬರು ಯುವಕರು​ ಚಾಕುವಿನಿಂದ ಕೊಲೆ ಮಾಡಿದ್ದಾರೆ.

ಅಸ್ಕರ್ ಹಾಗೂ ತಬ್ರೆಜ್ ನಡುವೆ ಮೂರು ದಿನಗಳ ಹಿಂದೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ತಬ್ರೇಜ್ ಕೊಲೆಯಾದ ಅಸ್ಕರ್ ಗೆ ಕಪಾಳಕ್ಕೆ ಹೊಡೆದಿದ್ದ. ಕಪಾಳಕ್ಕೆ ಹೊಡೆದ ತಬ್ರೇಜ್ ಗೆ ಕೊಲೆ ಮಾಡೊದಾಗಿ ಹೇಳಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ.ಗಲಾಟೆ ವೇಳೆ ಅಸ್ಕರ್ ಗೆ ಚಾಕುವಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಅಸ್ಕರ್​ನ್ನು ತಬ್ರೇಜ್ ಹಾಗೂ ಸಮೀರ್ ಎಂಬುವರು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close