ಕರ್ನಾಟಕ ಸುದ್ದಿ

ವಯೋವೃದ್ದರ ಸಹಾಯಕ್ಕೆ ಹೊಸ ವೇದಿಕೆ ಸೃಷ್ಟಿಸಿದ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ

— ಸಿರಾಜುದ್ದೀನ್ ಬಂಗಾರ್ ಸಂಪಾದಕರು

ಬೆಂಗಳೂರು(ಮೇ 30): ರಾಜ್ಯದಲ್ಲಿ ಲಾಕ್‌ಡೌನ್‌ ಪ್ರಾರಂಭವಾದ ಬಳಿಕ ವಯೋವೃದ್ದರಿಗೆ ಸಾಕಷ್ಟು ಸಮಸ್ಯೆಗಳಾಗಿತ್ತು. ತಮ್ಮ ಸಮಸ್ಯೆಗೆ ಸ್ಪಂದಿಸಲು ಮಕ್ಕಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಬೆಂಗಳೂರು ಪೊಲೀಸ್ ಇಲಾಖೆ ಸಹ ವೃದ್ಧರ ನೆರವಿಗೆ ಧಾವಿಸಿ, ಬೇಕಾದ ಸಹಾಯವನ್ನು ಮಾಡಿತ್ತು.‌ ಆದರೀಗ ಈ ಸಹಾಯ ಹಸ್ತ ಕೇವಲ ಲಾಕ್​ಡೌನ್​ಗೆ ಮಾತ್ರ ಸೀಮಿತವಾಗಬಾರದು, ಶಾಶ್ವತವಾಗಿರಬೇಕೆಂದು ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ವೇದಿಕೆ ನಿರ್ಮಿಸಿದ್ದಾರೆ.

“ನಮ್ಮ ಹಿರಿಯರು” ಎಂಬ ವೇದಿಕೆ ನಿರ್ಮಿಸಿ ಡಿಸಿಪಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಒಬ್ಬಂಟಿಯಾಗಿರೋ ವಯೋವೃದ್ದರ ಸಹಾಯಕ್ಕೆ ಈ ವೇದಿಕೆ ಸಹಾಯವಾಗಲಿದೆ. ದಕ್ಷಿಣ ವಿಭಾಗದಲ್ಲಿ ಬರುವ ಎಂಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬೊಬ್ಬರಂತೆ ನೋಡೆಲ್ ಆಫೀಸರ್ ಅಧಿಕಾರಿ ಸಹ ಇರಲಿದ್ದಾರೆ. ಪಿಎಸ್​ಐ ಮತ್ತು ಇಬ್ಭರು ಕಾನ್ಸ್​ಟೆಬಲ್​ಗಳನ್ನ ಆಯಾ ಠಾಣೆಗೆ ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆ ಸಂಪರ್ಕದಲ್ಲಿರಬೇಕಂದ್ರೆ ಮೊದಲು ಸ್ಟೇಷಲ್‌ನಲ್ಲಿ ಕೊಡುವ ಫಾರಂ ಭರ್ತಿ ಮಾಡಬೇಕಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ಸಿಬ್ಬಂದಿಗೆ ತರಬೇತಿ ಕೂಡ ಕೊಡಲಾಗಿದೆ.

ನಮ್ಮ ಹಿರಿಯರು

“ನಮ್ಮ ಹಿರಿಯರು” ಗ್ರೂಪ್ ಉದ್ದೇಶ ಅರಿತು 250 ಕ್ಕೂ ಹೆಚ್ಚು ವೃದ್ದರು ಪೊಲೀಸ್ ಸಂಪರ್ಕದಲ್ಲಿದ್ದಾರೆ. ಎಲ್ಲ ವಯೋವೃದ್ದರ ಸಂವಹನಕ್ಕೆ ವಾಟ್ಸ್ ಆಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿದ್ದು, ವಯೋವೃದ್ದರ ಏನೇ ಸಮಸ್ಯೆ ಇದ್ರೂ ಈ ವೇದಿಕೆ‌ ನೆರವಾಗಲಿದೆ.. ಜೊತೆಗೆ 9480801500, 8022943111 ನಂಬರ್​ಗೆ ಕರೆ ಮಾಡಿದ್ರೆ ಪ್ರತಿಯೊಂದು ಮಾಹಿತಿ ಸಿಗಲಿದೆ. ಕೇವಲ‌ ಸಮಸ್ಯೆ ಬಗೆಹರಿಸಿ ಪೊಲೀಸರು ಸುಮ್ಮನಾಗಲ್ಲ. ಪ್ರತಿದಿನವೂ ಆಯಾ ಠಾಣಾ ಸಿಬ್ಬಂದಿಯಿಂದ‌ ವಯೋವೃದ್ದರ ಮೇಲೆ ನಿಗಾ ಇಡಲಾಗುತ್ತದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close