ಕರ್ನಾಟಕ ಸುದ್ದಿ

ಬ್ರೇಕಿಂಗ್ ನ್ಯೂಸ್: ಜೂನ್‌ ತಿಂಗಳಿನಿಂದ ಗ್ರಾಹಕರಿಗೆ ಹೊರೆಯಾಗಲಿದೆ ಪೆಟ್ರೋಲ್‌-ಡೀಸಲ್; ಲೀಟರ್‌ಗೆ 5 ರೂ. ಹೆಚ್ಚಳವಾಗುವ ಸಾಧ್ಯತೆ?

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಲಾಕ್‌ಡೌನ್‌ ಸಡಿಲಿಕೆಯಾಗುತ್ತಿರುವ ಬೆನ್ನಿಗೆ ದೇಶದ ಎರಡು ಪ್ರಮುಖ ಪೆಟ್ರೋಲಿಯಂ ತೈಲ ಕಂಪೆನಿಗಳು ದರ ಪರಿಷ್ಕರಣೆಗೆ ಮುಂದಾಗಿದ್ದು, ಜೂನ್ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕನಿಷ್ಠ ಲೀಟರ್‌ಗೆ 4 ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ಎರಡು ತಿಂಗಳಿನಿಂದ ದೇಶದಲ್ಲಿ ಲಾಕ್‌ಡೌನ್ ಚಾಲ್ತಿಯಲ್ಲಿದ್ದು ಸ್ಥಳೀಯ ವಾಗಿಯೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಚಿಲ್ಲರೆ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅಲ್ಲದೆ, ಜೂನ್ 01 ರಿಂದ 5ನೇ ಹಂತದ ಲಾಕ್‌ಡೌನ್ ಚಾಲ್ತಿಗೆ ಬರಲಿದ್ದು ಇದು ಸಹ ಚಿಲ್ಲರೆ ವ್ಯಾಪಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇದೇ ಕಾರಣಕ್ಕೆ ದೇಶದ ಎಲ್ಲಾ ಪೆಟ್ರೋಲ್ ಚಿಲ್ಲರೆ ವ್ಯಾಪಾರಿಗಳು ಕಳೆದ ವಾರ ಸಭೆ ನಡೆಸಿದ್ದು ಚಿಲ್ಲರೆ ಇಂಧನ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಮುಂದಿನ ತಿಂಗಳಿನಿಂದ ಇಂಧನ ಕಡಿಮೆ ಮಾರಾಟವಾದರೂ ಸಹ ದೊಡ್ಡ ನಷ್ಟವನ್ನು ಸರಿದೂಗಿಸುವ ಸಲುವಾಗಿ ಇಂಧನದ ಬೆಲೆ ಏರಿಕೆ ಮಾಡುವುದು ಸೂಕ್ತ ಎಂಬ ನಿರ್ಣಯಕ್ಕೆ ಬರಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ

ಕೊರೋನಾ ಆರಂಭವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೇಡಿಕೆ ಕುಗ್ಗಿದೆ. ಪರಿಣಾಮ ಇತಿಹಾಸ ಕಾಣದ ಮಟ್ಟಿಗೆ ತೈಲದ ಬೆಲೆ ಬ್ಯಾರೆಲ್‌ಗೆ 30 ಡಾಲರ್‌ಗೆ ಕುಗ್ಗಿದೆ. ಪರಿಣಾಮ ತೈಲ ಕಂಪೆನಿಯ ಲಾಭವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಳೆದ ತಿಂಗಳ ದುಬಾರಿ ಮಟ್ಟದ ಅಬಕಾರಿ ಸುಂಕ ಹೇರಲು ಮುಂದಾಗಿತ್ತು. ಆದರೆ, ಇದೀಗ ತೈಲ ಕಂಪೆನಿಗಳು ಮತ್ತೊಂದು ದಾರಿಯಲ್ಲಿ ಈ ಹಣವನ್ನು ಗ್ರಾಹಕರಿಂದಲೂ ಸಂಗ್ರಹಿಸಲು ಮುಂದಾಗಿದೆ

Continue

Related Articles

Leave a Reply

Your email address will not be published. Required fields are marked *

Back to top button
Close
Close