ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ರಾಷ್ಟ್ರವನ್ನುದ್ದೇಶಿಸಿ ಬರೆದ ಪತ್ರದಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗೆ ಮಿಡಿದ ಪ್ರಧಾನಿ ಮೋದಿ

Posted By : Sirajuddin Bangar

Source: NS18

ನವದೆಹಲಿ(ಮೇ 30): ತಮ್ಮ ಎರಡನೇ ಅವಧಿಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ದಿನದ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ದೇಶದ ವಲಸಿಗರ ಕಷ್ಟಕ್ಕೆ ಮಿಡಿದಿದ್ದಾರೆ. ಇವತ್ತು ದೇಶವನ್ನುದ್ದೇಶಿಸಿ ಅವರು ಬರೆದ ಪತ್ರದಲ್ಲಿ ಕೊರೋನಾ ವೈರಸ್​ನಿಂದ ವಲಸಿಗರು ಬಹಳ ಕಷ್ಟ ಅನುಭವಿಸಿರುವುದಕ್ಕೆ ಅನುಕಂಪ ವ್ಯಕ್ತಪಡಿಸಿದ್ಧಾರೆ. ವಲಸೆ ಕಾರ್ಮಿಕರು ಸೇರಿದಂತೆ ಹಲವರು ಬಹಳ ಸಂಕದಷ್ಟ ಅನುಭವಿಸುತ್ತಿರುವಂತೆಯೇ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ವಿಜಯದ ಹಾದಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಬೇರೆ ಸಂದರ್ಭದಲ್ಲಾಗಿದ್ದರೆ ನಾನು ಜನರ ಮಧ್ಯೆ ಇರುತ್ತಿದ್ದೆ. ಆದರೆ, ಈಗ ಅದಕ್ಕೆ ಅವಕಾಶ ಇಲ್ಲ. ಹೀಗಾಗಿ ನಾನು ಪತ್ರ ಬರೆಯಬೇಕಾಯಿತು ಎಂದು ಪ್ರಧಾನಿ ತಮ್ಮ ಪತ್ರ ಸಂವಾದಕ್ಕೆ ಕಾರಣ ತಿಳಿಸಿದ್ದಾರೆ.

“ನಮ್ಮ ಶ್ರಮಿಕರು, ವಲಸೆ ಕಾರ್ಮಿಕರು, ಕರಕುಶಲಕರ್ಮಿಗಳು, ಬೀದಿ ವ್ಯಾಪಾರಿಗಳು ಮೊದಲಾದವರು ಬಹಳ ಕಷ್ಟ ಅನುಭವಿಸಿದ್ದಾರೆ. ಅವರ ಸಂಕಷ್ಟ ದೂರ ಮಾಡಲು ನಾವೆಲ್ಲರೂ ಒಗ್ಗಟ್ಟಿನಿಂದ ಛಲದಿಂದ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.

ಇಂಥ ಮಹಾ ಬಿಕ್ಕಟ್ಟಿನಲ್ಲಿ ತೊಂದರೆಗೊಳಗಾಗದೇ ಇರುವವರಿಲ್ಲ. ಜನರು ತಮಗಾಗಿರುವ ತೊಂದರೆಗಳು ಬಿಕ್ಕಟ್ಟಿಗೆ ತಿರುಗುದಂತೆ ಎಚ್ಚರ ವಹಿಸಬೇಕು ಎಂದು ಮೋದಿ ಕರೆ ನೀಡಿದರು.

ಕಳೆದ ಒಂದು ವರ್ಷದಲ್ಲಿ ತಮ್ಮ ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನ ಕೈಗೊಂಡಿದೆ. ದೇಶ ವೇಗವಾಗಿ ಅಭಿವೃದ್ಧಿ ಹೊಂದಿದೆ. ಮಾಡಬೇಕಾದ ಕೆಲಸಗಳು ಹಾಗೂ ಮುಂದಿರುವ ಸವಾಲುಗಳು ಬಹಳಷ್ಟಿವೆ. ನಾನು ರಾತ್ರಿ ಹಗಲು ಕೆಲಸ ಮಾಡುತ್ತಿದ್ದೇನೆ. ನನ್ನಲ್ಲಿ ಕೊರತೆಗಳಿರಬಹುದು. ಆದರೆ, ನಮ್ಮ ದೇಶದಲ್ಲಿ ಯಾವುದೇ ಕೊರತೆ ಇಲ್ಲ. ನಾನು ನಿಮ್ಮನ್ನು, ನಿಮ್ಮ ಶಕ್ತಿಯನ್ನು ನಿಮ್ಮ ಸಾಮರ್ಥ್ಯವನ್ನು ಎಲ್ಲಕ್ಕಿಂತ ಹೆಚ್ಚು ನಂಬುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಕೊರೋನಾ ಸಂಕಷ್ಟವನ್ನು ಪ್ರಸ್ತಾಪಿಸುತ್ತಾ ಅವರು, ಪ್ರತಿಯೊಬ್ಬ ಭಾರತೀಯನೂ ಲಾಕ್ ಡೌನ್ ನಿಯಮಗಳನ್ನ ಪಾಲಿಸುವ ಅಗತ್ಯ ಇರುವುದನ್ನು ತಿಳಿಸಿದರು. ಹಾಗೇ, ಜನರ ಸಹಕಾರವನ್ನೂ ಪ್ರಶಂಸಿಸಿದರು.“ಭಾರತ ಸುರಕ್ಷಿತವಾಗಿರುವುದಕ್ಕೆ ಮತ್ತು ಬೇರೆ ದೇಶಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿರುವುದಕ್ಕೆ ಜನರ ಸಹಕಾರ ಕೂಡ ಪ್ರಮುಖ ಕಾರಣ. ಇದೊಂದು ಸುದೀರ್ಘ ಯುದ್ಧವಾಗಿದ್ದು, ನಾವು ಜಯದತ್ತ ಹೆಜ್ಜೆ ಇಡಲು ಪ್ರಾರಂಭಿಸಿದ್ದೇವೆ. ನಮ್ಮೆಲ್ಲರ ಸಂಘಟಿತ ಬಲವೇ ನಮ್ಮ ಗೆಲುವು ತರುತ್ತದೆ” ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close