ದೇಶದ-ವಿದೇಶ

ಕೊನೆಗೂ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಕಡಿದುಕೊಂಡ ಅಮೇರಿಕಾ

— ಸಿರಾಜುದ್ದೀನ್ ಬಂಗಾರ್ ಸಂಪಾದಕರು, ಕರ್ನಾಟಕ-ಜ್ವಾಲೆ

ಪ್ರಪಂಚಾದ್ಯಂತ ಕೊರೋನಾ ಎಂಬ ಮಾರಕ ವೈರಸ್ ಹರಡಲು ಚೀನಾ ದೇಶವೇ ಕಾರಣ. ಚೀನಾ ವಿರುದ್ದ ಕ್ರಮ ಕೈಗೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ ಎಂದು ಗುಡುಗುತ್ತಲೇ ಇದ್ದ ಅಮೇರಿಕಾ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಕಡೆಗೂ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಕಡಿದುಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.

ಹೌದು, ಶುಕ್ರವಾರ ವೈಟ್ ಹೌಸಿನ ರೋಸ್ ಗಾರ್ಡ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಕೊರೋನಾ ಸೋಂಕು ಹರಡುವಿಕೆ ತಡೆಯಲು ವಿಫಲವಾದ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಅಮೇರಿಕಾ ಸಂಬಂಧವನ್ನು ಕೊನೆಗಾಣಿಸುತ್ತಿದೆ ಎಂದು ಘೋಷಿಸಿದರು.

ಟ್ರಂಪ್ ಈ ಮೊದಲೇ ‘ಚೀನಾ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಶ್ವ ಆರೋಗ್ಯ ಸಂಸ್ಥೆಗೆ ಅಮೇರಿಕಾದಿಂದ ನೀಡಲಾಗುತ್ತಿರುವ ದೇಣಿಗೆ ನಿಲ್ಲಿಸಲಾಗುವುದು’ ಎಂದು ಹೇಳುತ್ತಲೇ ಇದ್ದರು. ಇದನ್ನು ಶುಕ್ರವಾರದ ಸುದ್ದಿಗೋಷ್ಟಿಯಲ್ಲಿ ಪುನರುಚ್ಛರಿಸಿದ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಕಡಿದುಕೊಳ್ಳುತ್ತಿರುವುದರಿಂದ‌ ಇಷ್ಟು ದಿನ‌ ನೀಡುತ್ತಿದ್ದ ದೇಣಿಗೆಯ ಹಣವನ್ನು ಅಗತ್ಯ ಇರುವ ಇತರೆ ದೇಶಗಳಿಗೆ ನೀಡಲಾಗುವುದು‌ ಎಂದು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ ಚೀನಾ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂಬುದನ್ನೂ ಪುನರುಚ್ಛರಿಸಿದ ಟ್ರಂಪ್, ಚೀನಾದಂತೆ ಕೊರೊನಾ ವೈರಸ್ ಪ್ರಪಂಚಾದ್ಯಂತ ಹರಡಲು ವಿಶ್ವ ಆರೋಗ್ಯ ಸಂಸ್ಥೆ ಕೂಡ ಕಾರಣ ಎಂದರು.

ಹಾಂಗ್ ಕಾಂಗ್ ಇಡೀ ಜಗತ್ತಿಗೆ ಕೊರೊನಾವನ್ನು ಹರಡಿದೆ. ಇದರಿಂದ ಅಮೇರಿಕಾದ ಲಕ್ಷಕ್ಕೂ‌ ಹೆಚ್ಚು ಜನ‌ ಪ್ರಾಣ ಕಳೆದುಕೊಂಡಿದ್ದಾರೆ. ಈ‌ ಹಿನ್ನೆಲೆಯಲ್ಲಿ ಈಗಾಗಲೇ ಚೀನಾದೊಂದಿಗೆ ಯಾವುದೇ ವ್ಯವಹಾರ ಇಟ್ಟುಕೊಳ್ಳದಂತೆ ತಮ್ಮ ಸರ್ಕಾರಕ್ಕೆ ಸೂಚಿಸಲಾಗಿದೆ. ಚೀನಾದಿಂದ ಬರುವ ವಿದ್ಯಾರ್ಥಿಗಳಿಗೂ ನಿಷೇಧ ಹೇರುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ ತಿಳಿಸಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close