Uncategorized

ಕೇಂದ್ರ ಸಂಸತ್​​ ಭವನ ಬೆನ್ನಲ್ಲೀಗ ವಿದೇಶಾಂಗ ಇಲಾಖೆಗೂ ತಟ್ಟಿದ ಕೊರೋನಾ ಬಿಸಿ: ಇಬ್ಬರು ಅಧಿಕಾರಿಗಳಿಗೆ ಪಾಸಿಟಿವ್​

— ಸಿರಾಜುದ್ದೀನ್ ಬಂಗಾರ್ ಸಂಪಾದಕರು, ಕರ್ನಾಟಕ-ಜ್ವಾಲೆ

ಕೇಂದ್ರ ಸಂಸತ್​ ಭವನದ ಬೆನ್ನಲ್ಲೀಗ ವಿದೇಶಾಂಗ ಇಲಾಖೆಗೂ ಮಾರಕ ಕೊರೋನಾ ವೈರಸ್​​ ಬಿಸಿ ತಟ್ಟಿದೆ. ಇದರ ಪರಿಣಾಮ ವಿದೇಶಾಂಗ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ಕೋವಿಡ್​​-19 ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಇಲಾಖೆಯೂ ಇತರೆ ಅಧಿಕಾರಿಗಳಿಗೂ ಹೋಮ್​​ ಕ್ವಾರಂಟೈನ್​​ಗೆ ತೆರಳುವಂತೆ ಸೂಚಿಸಿದೆ.

ಶುಕ್ರವಾರಷ್ಟೇ(ನಿನ್ನೆ) ರಾಜ್ಯಸಭಾ ಸಚಿವಾಲಯದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೂ ಸಂಸತ್ ಭವನವನ್ನು ಸೀಲ್‌ಡೌನ್ ಮಾಡಿ ಆದೇಶಿಸಿದರು.

ಎರಡು ತಿಂಗಳಿನಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಹೀಗಿದ್ದರೂ ಸಂಸತ್‌ ಭವನ ಮತ್ತು ವಿದೇಶಾಂಗ ಇಲಾಖೆ ಸೇರಿದಂತೆ ಇನ್ನೂ ಹಲವು ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಹೀಗಾಗಿ ಈ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ನೌಕರರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿತ್ತು. ಇವರಲ್ಲಿ ಈಗ ಒಂದರ ಮೇಲೋಂದು ಕೊರೋನಾ ಪಾಸಿಟಿವ್​​ ಪ್ರಕರಣಗಳು ಕಂಡು ಬರುತ್ತಿವೆ.

ಹಾಗೆಯೇ, ಸಿಬ್ಬಂದಿಯ ಮಡದಿ ಮಕ್ಕಳಲ್ಲೂ ಕೊರೋನಾ ರೋಗ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿ ಸಂಪರ್ಕದಲ್ಲಿದ್ದವರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close