ಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿ

ಬ್ರೇಕಿಂಗ್ ನ್ಯೂಸ್ : ರಾಜ್ಯದಲ್ಲಿಂದು 178 ಹೊಸ ಸೋಂಕಿತರು ಪತ್ತೆ; ಪ್ರಕರಣಗಳ ಸಂಖ್ಯೆ 2,711ಕ್ಕೆ ಏರಿಕೆ

— ಸಿರಾಜುದ್ದೀನ್ ಬಂಗಾರ್, ಸಿರವಾರ

ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಇಂದು ಒಂದೇ ದಿನ 178 ಕೇಸ್ ಪತ್ತೆಯಾಗಿವೆ. ಸೋಕಿತರ ಸಂಖ್ಯೆ 2,711 ಕ್ಕೆ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ 35 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ

ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 869ಕ್ಕೆ ಏರಿದೆ. ಹೊಸ ಸಾವು ಸಂಭವಿಸಿಲ್ಲ. ಸಾವಿನ ಸಂಖ್ಯೆ 47ರಲ್ಲೇ ಇದೆ. ಸಕ್ರಿಯ ಸೋಂಕು ಪ್ರಕರಣಗಳು 1793 ಇವೆ.

ಇನ್ನು ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆಯಿಂದ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಇಂದು ಪತ್ತೆಯಾದ 178 ಹೊಸ ಪ್ರಕರಣಗಳಲ್ಲಿ 156 ಮಂದಿ ಮಹಾರಾಷ್ಟ್ರದ ಟ್ರಾವೆಲ್ ಹಿಸ್ಟರಿ ಹಿನ್ನೆಲೆ ಇದೆ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 1,65,799ಕ್ಕೆ ಏರಿಕೆಯಾಗಿದೆ. ಜೊತೆಗೆ ಭಾರತವು ಜಾಗತಿಕವಾಗಿ ಅತಿಹೆಚ್ಚು ಕೊರೋನಾ ಪೀಡಿತರಿರುವ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಏರಿದೆ.

ಇಂದು ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿಚಿಕ್ಕಬಳ್ಳಾಪುರ – 04, ಬೆಂಗಳೂರು ಗ್ರಾ – 01, ಬೆಂಗಳೂರು – 10, ಮೈಸೂರು – 02, ಚಿತ್ರದುರ್ಗ – 01, ಶಿವಮೊಗ್ಗ – 01, ರಾಯಚೂರು – 62, ಯಾದಗಿರಿ – 60, ಮಂಡ್ಯ – 2, ಕಲಬುರಗಿ – 15, ಉಡುಪಿ – 15, ಧಾರವಾಡ – 1, ದಾವಣಗೆರೆ – 4 ಪ್ರಕರಣಗಳು ದಾಖಲಾಗಿವೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close