ರಾಯಚೂರು ಜಿಲ್ಲೆ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಅಕ್ರಮ ಮರುಳುಗಾಕೆಗೆ ಸಾಥ್ ನೀಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ; ಪ್ರ.ಸ.ಒ.ರಾ

ರಾಯಚೂರು ಮೇ 29 : ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಹಗಲು ರಾತ್ರಿ ಎನ್ನದೇ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆ ಕಣ್ಣಾರೆ ಕಂಡರೂ ತಮಗೆ ಸಂಬಂಧವಿಲ್ಲದಂತೆ ಮೌನರಾಗಿದ್ದಾರೆ.

ಸದರಿ ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬುದು ತಿಳಿದುಬಂದಿದ್ದು, ಇದು ನೋವಿನ ಸಂಗತಿಯಾಗಿದೆ ಹಾಗೂ ಗಬ್ಬೂರು ವ್ಯಾಪ್ತಿಯಾ ಈ ಅಕ್ರಮ ಮರಳು ದಂಧೆಕೋರರ ಹಾವಳಿ ಹೆಚ್ಚಾಗಿದ್ದು ಕೇವಲ ಅಕ್ರಮ ಮರಳುಗಾರಿಕೆ ಅಷ್ಟೇ ಅಲ್ಲದೆ ಮಟಕಾ ಹಾಗೂ ಇಸ್ಪೇಟ್ ದಂಧೆಗಳು ಸಹ ಜೋರಾಗಿ ನಡೆದಿರುವುದು ತಿಳಿದು ಬಂದಿದ್ದು, ಇದನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ರಾಯಚೂರು ಖಂಡಿಸುತ್ತದೆ.

ತಪ್ಪಿತಸ್ತರ ವಿರುದ್ಧ ಹಾಗೂ ಇವರುಗಳ ಸಾಥ್ ನೀಡುತ್ತೀರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ರಾಯಚೂರು ಎಚ್ಚರಿಸಿದ್ದಾರೆ. ಒಂದು ವೇಳೆ ತಾವು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ರಾಯಚೂರು ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರವಿಕುಮಾರ ಗಬ್ಬೂರು, ಎಂ.ಆರ್.ಎಚ್.ಎಸ್, ತಾ.ಅ ಶಾಂತಕುಮಾರ ಹೊನ್ನಟಗಿ, ಕಲ್ಯಾಣ ಕರ್ನಾಟಕ ಸಂಘಟನೆ ರಾಯಚೂರು ಘಟಕದ ಅಧ್ಯಕ್ಷರಾದ ಇಮ್ರಾನ್ ಬಡೇಸಾಬ, ಎಂ.ಆರ್.ಎಚ್.ಎಸ್ ಮುಖಂಡರಾದ ಬಸಲಿಂಗಪ್ಪ ಖಾಲಾಪೂರ ಮತ್ತು ಸಾಬಣ್ಣ ಖಾನಾಪೂರ ಉಪಸ್ಥಿತರಿದ್ದರು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close