ರಾಯಚೂರು ಜಿಲ್ಲೆ ಸುದ್ದಿ

ಕೊರೋನ : ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕಾದಿದೆ ಭಾರಿ ಗಂಡಾಂತರ..!

ವರದಿ : ಸಿರಾಜುದ್ದೀನ್ ಬಂಗಾರ್, ಸಂಪಾದಕೀಯ ಕರ್ನಾಟಕ-ಜ್ವಾಲೆ

ಇಡೀ ವಿಶ್ವಾದ್ಯಾಂತ ವ್ಯಾಪಕವಾಗಿ ಯಮ-ರೂಪ ತಾಳಿರುವ ಭಯಾನಕ ಕೊರೋನದಿಂದ ಆದಂತಹ ನಷ್ಟಗಳನ್ನು, ಸೃಷ್ಟಿಸಿದ ಭಯಾನಕ ವಾತಾವರಣವನ್ನ ಮುಂದಿನ ದಿನಗಳಲ್ಲೂ ಮರೆಯಲು ಅಸಾಧ್ಯ ಹೊಸ ಇತಿಹಾಸವನ್ನೆ ರಚಿಸಿದ ಮಹಾಮಾರಿ ಕೊರೋನದಿಂದ ಜನ ಸಂಕುಲಕ್ಕೆ ಆದಂತಹ ನಷ್ಟ ಅಷ್ಟಿಷ್ಟಲ್ಲ.

ಲಾಕಡೌನ 5.0 ಬರಲಿದೆ. ಸರ್ಕಾರ ಲಾಕಡೌನ ಪ್ರಾರಂಭದಿಂದಲೂ ನಮಗೆ ಕಲಿಸಿದ ಪಾಠಗಳನ್ನ ಅದೇಷ್ಟು ಬೇಗ ಜನರು/ಅಧಿಕಾರಿಗಳು ಮರೆತುಬಿಟ್ಟಿದ್ದಾರೆ ಎಂದರೆ ಊಹಿಸಲು ಅಸಾಧ್ಯ. ನನಗೆ ಸಂಬಂಧವೆ ಇಲ್ಲ ಎನ್ನುವ ರೀತಿಯಲ್ಲಿ ತಮ್ಮ ತಮ್ಮ ಕೆಲಸದಲ್ಲಿ ಮಘ್ನರಾಗಿರುವ ವ್ಯಾಪಾರಿಗಳು ಇದು ಈಗೆ ಮುಂದುವರೆದರೆ ಜನ-ಜೀವನ ಅಂತ್ಯಗೊಳ್ಳುವಲ್ಲಿ ಸಂಶಯವೆ ಇಲ್ಲ..!

ಹಾಗಾದರೆ ಸರ್ಕಾರದ ನಿಯಮಗಳನ್ನು ನಾವು ಉಲ್ಲಂಘಿಸಿದಿದ್ದಾರು ಏಕೆ?

ಹಣ, ಕಾಂಚಾಣ ಜೀವ-ಜೀವನ ಕುಟುಂಬಕ್ಕಿಂತ ನಮಗೆ ಇದುವೇ ಬಹು ಮುಖ್ಯ ಅಲ್ಲವೆ. ರೋಗ ಬರುವುದು ಹೋಗುವುದು ಸಾಮನ್ಯ ಬಿಡ್ರಿ ಹಾಗಾಂತಹ ನಾವು ನಮ್ಮ ವ್ಯಾಪಾರಗಳನ್ನ, ದುಡಿಕೆಯನ್ನು ನಿಲ್ಲಿಸಬೇಕಾ..? ಸರ್ಕಾರ ಏನ್ ಹೇಳುತ್ತೇ ಬಿಡ್ರಿ..? ಅನ್ನೋ ಅಹಂ, ಕೊನೆಗೂ ಮನುಷ್ಯನನ್ನೆ ಸುಟ್ಟಿಹಾಕುತ್ತೇ ಎಂಬುದು ಪ್ರತ್ಯೆಕ್ಷವಾಗಿ ನಾವು ದಿನ ನಿತ್ಯ ನೋಡುತ್ತಿದ್ದರು, ಸಂಬಂಧವಿಲ್ಲ ಎಂಬಂತೆ ಇರುವುದೇ ನಿಯಮಗಳ ಉಲ್ಲಂಘನೆಗೆ ಮೂಲ ಕಾರಣ.

  1. ಅಂಗಡಿ ಮುಂಗಟ್ಟುಗಳಲ್ಲಿ/ಸಾರ್ವಜನಿಕ ಜನ ಸೇರುವ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದ್ರೆ ಇಲ್ಲಿ ಸರ್ಕಾರದ ನಿಯಮಗಳನ್ನ ಯಾರು ಪಾಲಿಸುತ್ತಿದ್ದಾರೆ ?ನಿಯಮಗಳ ಉಲ್ಲಂಘನೆ ಸಾರ್ವಜನಿಕರಷ್ಟೇ ಅಲ್ಲ,ಅಧಿಕಾರಿಗಳು ಸಹಾ ಜನರ ನಡವಳಿಕೆಗಳನ್ನ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ದರೆ ಈ ನಿಯಮಗಳನ್ನು ಪಾಲನೆ ಮಾಡುವುದಾದರೂ ಯಾರು?
  2. ದ್ವೀ-ಚಕ್ರ ಹಾಗೂ ಮತ್ತೀತರ ವಾಹನಗಳ ಅನಾವಶ್ಯಕ ಓಡಾಟವನ್ನ ಸರ್ಕಾರ ಕಟ್ಟುನಿಟ್ಟಾಗಿ ಲಾಕಡೌನ ಸಮಯದಲ್ಲಿ ರದ್ದು ಮಾಡಿತ್ತು ಮತ್ತು ಲಾಕಡೌನ ಸಡಲಿಕೆ ಬಳಿಕ ಹಲವು ನಿಯಮಗಳನ್ನು ಜಾರಿ ಮಾಡಿದೆ, ಹಾಗೂ ಮಾಸ್ಕ್ ಕಡ್ಡಾಯಗೊಳಿಸಿತ್ತು.. ಈ ನಿಯಮಗಳನ್ನು ಯಾರು ಪಾಲಿಸುತ್ತಿದ್ದಾರೆ..?ಹೋಗಲಿ ಪೋಲಿಸ್ ಇಲಾಖೆ/ಜಿಲ್ಲಾಡಳಿತ/ತಾಲೂಕು ಆಡಳಿತ ಇದರ ಬಗ್ಗೆ ಏನಾದರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆಯಾ?
  3. ಪ್ರತಿ ಅಂಗಡಿ ಮುಂಗಟ್ಟುಗಳ ಮುಂದೆ ಸ್ಯಾನಿಟೈಜರ್, ನೀರು, ಮಾಸ್ಕ್ ಕಡ್ಡಾಯದ ಜೊತೆ ಸಾಮಾಜಿಕ ಅಂತರ ಆದರೆ ಯಾವ ವ್ಯಾಪಾರಿ ಇದನ್ನು ಪಾಲಿಸುತ್ತಿದ್ದಾರೆ..?
  4. ಪೋಲಿಸರ ಕಣ್ಣುತಪ್ಪಿಸಿ ವಲಸಿಗರು ತಮ್ಮ ತಮ್ಮ ಗ್ರಾಮಗಳಿಗೆ ಕ್ವಾರಂಟೈನ್ ಮಾಡಿಸದೆ ಹಾಗಯೇ ಮನೆ ಸೇರುತ್ತಿದ್ದಾರೆ ಇವರುಗಳ ಬಗ್ಗೆ ನಾವು ಏನಾದರೂ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವಾ..? ಒಮ್ಮೆ ಯೋಚಸಿ.? ಇಲ್ಲಿಯೂ ವ್ಯಾಪಾರದ ದೃಷ್ಟಿಯಿಂದ ಲಾಭ/ನಷ್ಟಗಳ ಬಗ್ಗೆ ನಾವು ಲೆಕ್ಕಚಾರ ಮಾಡಿದ್ದೇವೆ.

ರಾಯಚೂರು ಜಿಲ್ಲೆ ಕೊರೋನ ಮುಕ್ತ ಹಸಿರು ವಲಯವಾಗಿತ್ತು ಆದರೆ ಈಗ ದಿನೆ-ದಿನೆ ಹೆಚ್ಚುತ್ತಿರುವ ಕೊರೋನ ಆತಂಕದಿಂದ ಜಿಲ್ಲಾಧ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಕೊಟ್ಟ ನಿಯಮಗಳನ್ನ ಉಲ್ಲಂಘನೆ ಫಲವಾಗಿ ನಾವು ಇಂತಹ ಕಠೀಣ ಪರಿಸ್ಥಿತಿಗೆ ತುತ್ತಾಗಿರುವುದು.

ಮಹಾನ್ ವ್ಯಕ್ತಿ ಹೇಳುತ್ತಾರೆ; ಕೊರೋನ ಸಂದರ್ಭದಲ್ಲಿ ಲಾಭ ಮತ್ತು ನಷ್ಟದ ಬಗ್ಗೆ ಚಿಂತಿಸಬೇಡ, ಕನಸುಗಳು ಮತ್ತು ಯೋಜನೆಗಳ ಬಗ್ಗೆ ಚಿಂತಿಸಬೇಡ, ನಾವು ಜೀವಂತವಾಗಿ ಬದುಕಿರುವುದೆ ಈ ವರ್ಷದ ಲಾಭ ಎಂದು ಹೇಳಿದ್ದಾರೆ.

ಇಷ್ಟೇಲ್ಲ ಗೊತ್ತಿದ್ದರು, ನಾವು ಮಂಡುತನ ಪ್ರದರ್ಶಿಸಿದ್ದಲ್ಲಿ ನಾವು ಈ ಕಷ್ಟಗಳನ್ನ ಮುಂದೆಯು ಅನುಭವಿಸಲೇಬೆಕು. ಉತ್ತಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೇ ಎಂಬುದು ಮಾತ್ರ ಮರೇಯಬೇಡಿ. ಸರ್ಕಾರದ ನಿಯಮಗಳನ್ನು ತಪ್ಪದೆ ಪಾಲನೆ ಮಾಡಿ. ಎಂದಿಗೂ ದುಡ್ಡಿನ ಆಸೆಗೆ ಬಲಿಯಾಗಿ ಅಮೂಲ್ಯ ಜೀವನ,ಕುಟುಂಬವನ್ನು ಕಳೆದುಕೊಳ್ಳಬೇಡಿ. ಮೊದಲು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜೀವ-ಕುಟುಂಬಕ್ಕಿಂತ ಮಿಗಿಲಾದದ್ದು, ಇನ್ಯಾವುದು ಇಲ್ಲ. ಜೀವಂತ/ಆರೋಗ್ಯವಂತರಾಗಿದ್ದರೆ ಮುಂದಿನ ವರ್ಷವು ನಾವು ಹಣಗಳಿಸಬಹುದು.

ಸರ್ಕಾರವು ಕೂಡ ಸಾರ್ವಜನಿಕರ ಹಿತದೃಷ್ಟೀಯಿಂದ ಕೊರೋನ ರೋಗ ಮುಕ್ತಗೊಳಿಸಲು ನಿಯಮಗಳನ್ನು ಕಡ್ಡಾಯಗೊಳಿಸಲೆಬೇಕು.. ಮಾಸ್ಕ ದರಿಸಿದಿದ್ದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮಾನವನ ಆರೋಗ್ಯದ ಹಿತದೃಷ್ಟಿಯಿಂದ ಬಾರಿ ಮೊತ್ತದ ದಂಡವಿಧಿಸಬೇಕು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close