ಆರೋಗ್ಯ

ಎಲ್ಲರಿಗೂ ಕೊರೋನಾ ಲಾಕ್‌ಡೌನ್ ಶಾಪವಾದ್ರೆ ನನಗೆ ಟರ್ನಿಂಗ್ ಪಾಯಿಂಟ್.!! ಇದು ಕುಡಿತ ಬಿಟ್ಟವನ ಪಾಸಿಟಿವ್ ಸ್ಟೋರಿ

— ಸಿರಾಜುದ್ದೀನ್ ಬಂಗಾರ್ ಸಂಪಾದಕರು

ಲಾಕ್‌ಡೌನ್‌ ನಿಂದ ಎಣ್ಣೆಗಾಗಿ ಪರದಾಡಿದವರನ್ನು ನೋಡಿದ್ದೇವೆ. ಎಣ್ಣೆಯಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿನೂ ಓದಿದ್ದೇವೆ. ಆದರೆ, ಇದೇ ಲಾಕ್ ಡೌನ್‌ನಿಂದ ದಿನನಿತ್ಯ ಎಣ್ಣೆ ಹೊಡೆಯುತ್ತಿದ್ದ ಈ ವ್ಯಕ್ತಿ ಇದೀಗ ‘ನೋ ಡ್ರಿಂಕ್ಸ್ ಪ್ಲೀಸ್’ ಎನ್ನುತ್ತಿದ್ದಾರೆ‌.

ಯಪ್ಪ! ಏನ್ರೀ ಇದು ಅಂತೀರಾ? ಹೌದು ಕಣ್ರೀ… ಈಯಪ್ಪ ಲಾಕ್ ಡೌನ್ ಮುಂಚಿತವಾಗಿ ಡೈಲಿ ಕುಡಿತಿದ್ದ. ಇವರ ಕುಡಿತ ನೋಡಿ ಏರಿಯಾದ ಜನ, ಮನೆ ಮಂದಿಯೆಲ್ಲ ಬೇಸತ್ತು ಹೋಗಿದ್ದರು. ಹೆಂಡತಿಯಂತೂ ನನ್ನ ಗಂಡ ಯಾವಾಗ ಕುಡಿಯೋದು ಬಿಡ್ತಾನೋ ಎಂದು ದೇವರಿಗೆ ಪೂಜೆ ಮೇಲೆ ಪೂಜೆ ಮಾಡುತ್ತಿದ್ದರು. ಆದರೆ, ಯಾವಾಗ ಕೊರೋನಾ ಹಿನ್ನೆಲೆ ಸರ್ಕಾರ ಲಾಕ್‌ಡೌನ್ ವಿಧಿಸಿತೋ? ಆಗಿನಿಂದ ಈಯಪ್ಪನಿಗೆ ಎಣ್ಣೆ ಸಿಗದಂತಾಯಿತು.

ಬ್ಲಾಕ್ ಲಿ ರೇಟು ಹೆಚ್ಚಾಯ್ತು. ಆಮೇಲೆ ಆಮೇಲೆಯಂತೂ  ‘ಎಣ್ಣೆ’ ಕುಡಿಯೋದು ಬಿಟ್ಟುಬಿಟ್ಟ.ರಾಜಧಾನಿ ಬೆಂಗಳೂರಿನಲ್ಲಿ ಕುಡಿತದ ಚಟ ರೂಢಿಸಿಕೊಂಡಿದ್ದ‌ ವ್ಯಕ್ತಿ ಇದೀಗ ಡ್ರಿಂಕ್ಸ್ ಅಂದರೆ ಬೇಡವೆನ್ನುತ್ತಾರೆ. ಇಂಥದೊಂದು ಅಪೂರ್ವ, ಒಂದೊಳ್ಳೆ ಅಭ್ಯಾಸಕ್ಕೆ ಕಾರಣವಾಗಿದ್ದು ಮತ್ಯಾವುದೂ ಅಲ್ಲ ಇದೇ ಲಾಕ್‌ಡೌನ್.

ಕೊರೋನಾ ಸೋಂಕು ಹರಡುವಿಕೆ ಹಿನ್ನೆಲೆ ಸರ್ಕಾರ ಮೊದಲು ಜನತಾ ಕರ್ಫ್ಯೂ ವಿಧಿಸಿ ಆನಂತರ ಇಡೀ ದೇಶವೇ ಲಾಕ್‌ಡೌನ್  ಆಯಿತು. ಇದ್ದಕ್ಕಿದ್ದಂತೆ ಲಾಕ್ ಡೌನ್ ಆಗುತ್ತಿದ್ದಂತೆ ಹೊರಗಡೆ ಜನರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಅವಶ್ಯಕ ವಸ್ತು ಹೊರತುಪಡಿಸಿ ಲಿಕ್ಕರ್, ಸಿಗರೇಟು ಸಿಗದಂತಾಯಿತು. ಇದರಿಂದ ಮಧ್ಯಪಾನಿಗಳಿಗೆ, ಅದರಲ್ಲೂ ಡೈಲಿ ಎಣ್ಣೆ ಹಾಕುವವರಿಗೆ ಇನ್ನಿಲ್ಲದ ಕಷ್ಟ ಎದುರಾಯಿತು.ಆದರೆ ಇಂಥ ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರಿನ ಕೆಪಿ ಅಗ್ರಹಾರದ ನಿವಾಸಿ ನರಸಿಂಹ ಮಧ್ಯಪಾನ ಮಾಡುವುದನ್ನೇ ಬಿಟ್ಟುಬಿಟ್ಟರು.

ಅದು ಆರಂಭದಲ್ಲಿ ಅವರ ಮನೆಯವರಿಗೆ ಅಚ್ಚರಿಯಾದ್ರೂ ಎಣ್ಣೆ ಸಿಗ್ತಿಲ್ಲ ಅದಕ್ಕೆ ಬಿಟ್ಟಿರಬೇಕು ಎಂದುಕೊಂಡರು. ಆದರೆ ಯಾವಾಗ ಎಣ್ಣೆ ರೇಟು ದುಬಾರಿಯಾದ್ರೂ ಬ್ಲಾಕ್ ಲಿ ಸಿಗಲು ಆರಂಭವಾಯಿತೋ ಆಗ ಡ್ರಿಂಕ್ಸ್ ತಗೋತಾರೆ ಎಂದುಕೊಂಡರು. ಆದರೆ ನರಸಿಂಹ ಎಣ್ಣೆ ಬಗ್ಗೆ ಜಿಗುಪ್ಸೆ ಹೊಂದಿ ಡಬಲ್, ತ್ರಿಬಲ್ ದುಡ್ಡು ತೆತ್ತು ಎಣ್ಣೆ ಯಾಕೆ ಕುಡಿಯಬೇಕು ಎಂದು ತನ್ನನ್ನೇ ಪ್ರಶ್ನಿಸಿಕೊಂಡು ಕೊನೆಗೆ ಕುಡಿಯೋದು ಬಿಟ್ಟೇಬಿಟ್ಟರು.

ಅಂದಹಾಗೆ 50 ವಯಸ್ಸಿನ ಆಸುಪಾಸಿನಲ್ಲಿ ನರಸಿಂಹ ಸೆಕ್ಯುರಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಕೆಪಿ ಅಗ್ರಹಾರದ 19ನೇ ಕ್ರಾಸ್ ನಲ್ಲಿ ಪುಟ್ಟದಾದ ಬಾಡಿಗೆ ಮನೆಯಲ್ಲಿ ಪತ್ನಿ ಪುಷ್ಪಲತಾ ಅವರಿಂದಿಗೆ ವಾಸ ಮಾಡುತ್ತಿದ್ದಾರೆ. ಕೊರೊನೋ ಮುಂಚೆ ಪ್ರತಿದಿನವೂ ಕುಡಿಯುತ್ತಿದ್ದರು. ಆದರೀಗ ಕೊರೊನೋ ಲಾಕ್‌ಡೌನ್ ಸಮಯದಲ್ಲಿ ಮನೆಯವರೊಂದಿಗೆ ಕಾಲ ಕಳೆದು ನಿಜ ಜೀವನದ ಅರ್ಥ ತಿಳಿದುಕೊಂಡು ಮಧ್ಯಪಾನವನ್ನು ಕಳೆದರಡು ತಿಂಗಳಿನಿಂದ ನಿಷೇಧಿಸಿ ಸರಳ ಜೀವನವನ್ನು ಮುಂದುವರೆಸಿದ್ದಾರೆ‌.

ಕಣ್ಣಿನ ದೃಷ್ಟಿಯೂ ಸರಿಯಾಯ್ತು!;

ಮುಂಚಿತವಾಗಿ ನರಸಿಂಹ ಅವರಿಗೆ ದೂರ ಹಾಗೂ ಸಮೀಪ ದೃಷ್ಟಿ ಸಮಸ್ಯೆಯಿತ್ತು. ಪೇಪರ್ ಓದಲು ಕಷ್ಟಪಡುತ್ತಿದ್ದಾರೆ. ಸೆಕ್ಯುರಟಿಯಾಗಿ‌ ಕೆಲಸ ಮಾಡುತ್ತಿದ್ದ ವೇಳೆ ಕಣ್ಣಿನ ತಪಾಸಣೆ ಮಾಡಲಾಯಿತು. ಆಗ ವೈದ್ಯರು ನಿಮಗೆ‌ ಆಪರೇಷನ್ ಮಾಡಬೇಕಿದೆ ಎಂದು ಹೇಳಿದ್ದರು. ತಿಂಗಳೊಳಗೆ ಆಪರೇಷನ್ ಮಾಡಿಸಿಕೊಳ್ಳಿ ಎಂದು ಚೀಟಿ ಬರೆದುಕೊಟ್ಟಿದ್ದರು.

ಆದರೆ, ಕಳೆದರಡು ತಿಂಗಳ ಲಾಕ್‌ಡೌನ್ ನಿಂದ ಎಣ್ಣೆ ಸಿಗದೆ ನರಸಿಂಹ ಕುಡಿತ ಬಿಟ್ಟರು. ಇದೀಗ ಎಣ್ಣೆ ಸಿಕ್ಕರೂ ಕುಡಿಯುತ್ತಿಲ್ಲ. ಇದರಿಂದ ಆರೋಗ್ಯವೂ ಸುಧಾರಿಸಿ, ಕಣ್ಣಿನ ಸಮಸ್ಯೆಯೂ ಹೆಚ್ಚೇನು ಕಾಡುತ್ತಿಲ್ಲ. ಮೊದಲಿಗಿಂತಲೂ ಚೆನ್ನಾಗಿ ಪೇಪರ್ ಓದುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಮನೆಯವರು.

“ಎಲ್ಲರಿಗೂ ಕೊರೋನಾ ಲಾಕ್‌ಡೌನ್ ಶಾಪವಾದ್ರೆ ನನಗೆ ಟರ್ನಿಂಗ್ ಪಾಯಿಂಟ್. ಹೆಚ್ಚಿನ ದುಡ್ಡು ಕೊಟ್ಟು ಎಣ್ಣೆ ಖರೀದಿಸಲಿಲ್ಲ. ಕುಡಿಯದೇ ಇದ್ದಾಗ ಮನೆಯವರು, ಹೊರಗಡೆಯವರು  ನನ್ನ ನೋಡೋ ರೀತಿ ನೀಡಿ ನಾನೇ ಸ್ವಯಂಪ್ರೇರಣೆಯಿಂದ ಮಧ್ಯಪಾನ ಮಾಡೋದು ಬಿಟ್ಟೆ‌. ಇದೀಗ ಕಣ್ಣು ಚೆನ್ನಾಗಿ ಕಾಣಿಸುತ್ತಿದೆ. ಇನ್ಮೇಲೆ ಕುಡಿಯಲ್ಲ, ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಕುಡಿತ ಬಿಟ್ಟ ನರಸಿಂಹ.

Continue

Related Articles

Leave a Reply

Your email address will not be published. Required fields are marked *

Back to top button
Close
Close