Uncategorized

ಕೋಲಾರದಲ್ಲಿ ಕಾಣಿಸಿಕೊಂಡ ಮಿಡತೆಗಳು; ತೋಟಗಾರಿಕಾ ಇಲಾಖೆ ತಜ್ಞರು ಹೇಳಿದ್ದೇನು?

ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕ-ಜ್ವಾ ಸಿರವಾರ

Locust Attack: ಕೋಲಾರದ ದಿಂಬ ಗ್ರಾಮದ ಬಳಿ ನೆನ್ನೆ ಮಿಡತೆಗಳು ಪ್ರತ್ಯಕ್ಷ್ಯ‌ ಆಗಿವೆ. ಈ ಮಿಡತೆಗಳು ತಿಳಿ ಹಸಿರು ಬಣ್ಣದಿಂದ ಕೂಡಿದ್ದು, ಅವು ಕುಳಿತ ಗಿಡಗಳ ಎಲೆಯನ್ನು ತಿಂದು ಹಾಕಿದ್ದವು.

ಕೋಲಾರ (ಮೇ 28) ಉತ್ತರ ಭಾರತಕ್ಕೆ ಮಿಡತೆಗಳ ಹಿಂಡು ದಾಳಿ ನಡೆಸಿವೆ. ತಂಡೋಪ ತಂಡವಾಗಿ ಬರುವ ಈ ಮಿಡತೆಗಳು ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಿವೆ. ಈಗ ಕೋಲಾರದಲ್ಲೂ ಮಿಡತೆಗಳು ಕಾಣಿಸಿಕೊಂಡಿದ್ದು ಭಾರೀ ಆತಂಕ ಸೃಷ್ಟಿಸಿತ್ತು.

ಕೋಲಾರದ ದಿಂಬ ಗ್ರಾಮದ ಬಳಿ ನೆನ್ನೆ ಮಿಡತೆಗಳು ಪ್ರತ್ಯಕ್ಷ್ಯ‌ ಆಗಿವೆ. ಈ ಮಿಡತೆಗಳು ತಿಳಿ ಹಸಿರು ಬಣ್ಣದಿಂದ ಕೂಡಿದ್ದು, ಅವು ಕುಳಿತ ಗಿಡಗಳ ಎಲೆಯನ್ನು ತಿಂದು ಹಾಕಿದ್ದವು. ಈ ಮಿಡತೆಗಳು ಬೆಳೆಗಳನ್ನು ನಾಶ ಮಾಡುತ್ತವೆ ಎನ್ನುವ ಭೀತಿಯಲ್ಲಿ ರೈತರು ಮಿಡತೆಗಳಿಗೆ ಬೆಂಕಿಯಿಟ್ಟು ನಾಶ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತೋಟಗಾರಿಕಾ ಇಲಾಖೆ ತಜ್ಞರು, ಇದು ಹಾನಿಕಾರಕ ಲೋಕಸ್ಟ್ ಮಿಡತೆಗಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಂತರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ರೈತರ ಪಾಲಿಗೆ ಸಿಂಹಸ್ವಪ್ನ ಎನಿಸಿರುವ ಮಿಡತೆಗಳು ಉತ್ತರ ಭಾರತದಲ್ಲಿ ಆರ್ಭಟ ಮಾಡುತ್ತಿವೆ. ರಾಜಸ್ಥಾನ, ಗುಜರಾತ್, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹಸಿರು ಹೊಲವನ್ನು ತಿಂದುಂಡು ಈ ಮಿಡತೆಗಳು  ದಾಂಗುಡಿ ಇಡುತ್ತಿವೆ. ದಕ್ಷಿಣ ಭಾರತದ ಇವು ಮುಖ ಮಾಡಿರುವುದರಿಂದ ರೈತರು ಆತಂಕಗೊಂಡಿದ್ದಾರೆ. ಅಲ್ಲದೆ, ಈ ಮಿಡತೆ ಈಗ ಬೀದರ್​ಗೂ ಲಗ್ಗೆ ಇಡುವ ಮುನ್ಸೂಚನೆ ಸಿಕ್ಕಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close