ಕರ್ನಾಟಕ ಸುದ್ದಿ

ಕೊರೋನಾ ವಾರಿಯರ್ಸ್​​​​ಗೆ ಹೊಸ ವಿನ್ಯಾಸದ ಯೂನಿಫಾರ್ಮ್ ಕೊಡಲು ಮುಂದಾದ ಪೊಲೀಸ್ ಇಲಾಖೆ

— ಸಿರಾಜುದ್ದೀನ್ ಬಂಗಾರ್ ಸಿರವಾರ, ಸಂಪಾದಕರು ಕ-ಜ್ವಾ

ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.‌  ಸರ್ಕಾರ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಇದರ ಬೆನ್ನಲ್ಲೇ ಕೊರೋನಾ ವಾರಿಯರ್ ಆಗಿರುವ ಪೊಲೀಸರಿಗೆ ಹೊಸ ಮಾದರಿಯಲ್ಲಿ ಯೂನಿಫಾರ್ಮ್ ಕೊಡಲಾಗಿದೆ.

ಜೊತೆಗೆ ವಿಶೇಷ ಸೌಲಭ್ಯಗಳು ಇರುವ ಕಿಟ್ ಗಳನ್ನು ಸಹ ನೀಡಲಾಗುತ್ತಿದೆ. ಈಗ ಕೊಡುತ್ತಿರುವ ಯೂನಿಫಾರ್ಮ್ ಮಾರುಕಟ್ಟೆಯ ಬೆಲೆ ಸುಮಾರು 1000  ರೂಪಾಯಿಗಳಾಗಿದೆ. ಈಗ ಮೊದಲಿಗೆ ಕಂಟೈನ್ಮೆಂಟ್ ಏರಿಯಾಗಳಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಪೇದೆಗಳಿಗೆ ನೀಡಲು ಇಲಾಖೆ ನಿರ್ಧಾರ ಮಾಡಿದೆ.

ವ್ಯಾಪ್ತಿಯ ಸುಮಾರು 22 ಏರಿಯಾಗಳನ್ನು ಈಗಾಗಲೇ ಸೀಲ್ ಡೌನ್ ಮಾಡಿದ್ದು, ಅಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಯೂನಿಫಾರ್ಮ್ ನೀಡಲು ಇಲಾಖೆ ಈಗ ಫ್ಲಾನ್ ಮಾಡಿದೆ. ಹಾಗಾದ್ರೆ ಈ ಹೊಸ ಮಾದರಿಯ ಪೊಲೀಸ್ ಯೂನಿಫಾರ್ಮ್ ನ ವಿಶೇಷತೆಗಳು ಏನು ಗೊತ್ತಾ?

ಒಂದು ಕಡೆ ಕೊರೋನಾ ಮತ್ತೊಂದು ಕಡೆ ಮಳೆಯ ಕಾಟ. ಮಳೆಯ ನಡುವೆಯೂ ಪೊಲೀಸರು ಕೆಲಸ ಮಾಡುವ ಅನಿವಾರ್ಯತೆ ಇರುವ ಕಾರಣದಿಂದ ರೈನ್ ಕೋಟ್ ಮಾದರಿಯ ಯೂನಿಫಾರ್ಮ್ ನೀಡಲು‌ ತೀರ್ಮಾನ ಮಾಡಿದೆ.

ಇನ್ನು, ಇದರ ಜೊತೆಗೆ ಉಸಿರಾಟ ಆಡಲು ಸಹ ಯಾವುದೇ ತೊಂದರೆ ಆಗದ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ. ಜೊತೆಗೆ ಬೆಂಗಳೂರು ಪೊಲೀಸ್ ಇಲಾಖೆಯ ಲೋಗೋವನ್ನು ಯೂನಿಫಾರ್ಮ್ ಮೇಲೆ‌ ಮುದ್ರಿಸಲಾಗಿದೆ. ಖಾಕಿ ಕಲರ್ ನಲ್ಲಿ ರೈನ್ ಕೋಟ್ ಮಾದರಿಯಲ್ಲಿ ಸಿದ್ದ ಮಾಡಿದ್ದ, ಹೆಚ್ಚು ಭಾರ ಇಲ್ಲದ ಹಾಗೆ ಡಿಸೈನ್ ಮಾಡಲಾಗಿದೆ.

ಜೊತೆಗೆ ಕಂಟೈನ್ಮೆಂಟ್ ಏರಿಯಾಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಬಳಸುವಂತೆ ಪೊಲೀಸ್ ಇಲಾಖೆ ನಿರ್ಧಾರ ಮಾಡಿದೆ.‌ ಸದ್ಯ ಈಗ ಕೆಲವು ಯೂನಿಫಾರ್ಮ್ ಮಾತ್ರ ತಯಾರಾಗಿದ್ದು, ಅಗತ್ಯ ಇರುವ ಹಾಗೂ ತೀರಾ ಎಫೆಕ್ಟ್ ಆಗಿರುವ ಏರಿಯಾಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ನೀಡಲು ನಿರ್ಧಾರ ಮಾಡಿದೆ. ಇನ್ನು ಈ ಯೂನಿಫಾರ್ಮ್ ಎಷ್ಟೇ ಮಳೆ ಬಂದು ನೆನೆದರೂ ಏನೂ ಆಗದ ಹಾಗೆ ಡಿಸೈನ್ ಮಾಡಲಾಗಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close