Uncategorized

ಕರ್ನಾಟಕಕ್ಕೂ ಕಾದಿದೇಯಾ ಮಿಡತೆ ಗಂಡಾಂತರ?; ಆತಂಕದಲ್ಲಿ ರೈತರು

— ಸಿರಾಜುದ್ದೀನ್ ಬಂಗಾರ್, ಸಿರವಾರ ಸಂಪಾದಕರು

ಕೊರೋನಾ ಭೀತಿ ನಡುವೆಯೇ ಪಂಜಾಬ್, ಹರ್ಯಾಣ, ರಾಜಸ್ಥಾನ ಸೇರಿದಂತೆ ಭಾರತದ ಕೆಲ ರಾಜ್ಯಗಳಲ್ಲಿ ಡೆಸರ್ಟ್ ಲೋಕಸ್ಟ್ ಮಿಡತೆ ಹಿಂಡು ರೈತರನ್ನು ಕಾಡುತ್ತಿದೆ. ಹಸಿರು ಹೊಲವನ್ನು ನಾಶ ಮಾಡುವ ಈ ಮಿಡತೆ  ಸದ್ಯ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಮಾಹಿತಿಯಿದೆ. ಈ ಮಿಡತೆ ಈಗ ಬೀದರ್​ಗೂ ಲಗ್ಗೆ ಇಡುವ ಮುನ್ಸೂಚನೆ ಸಿಕ್ಕಿದೆ. ನಾಗ್ಪುರದಲ್ಲಿ ಮಿಡತೆಗಳ ಹಿಂಡು ಇರುವ ಬಗ್ಗೆ  ಸರ್ಕಾರದಿಂದಲೇ ಬೀದರ್ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ. ಈ ಭಯಾನಕ ಮಿಡತೆ ದಂಡು ಬೀದರ್​ ಜಿಲ್ಲೆಗೂ ಲಗ್ಗೆಯಿಡುವ ಸಂಭವವಿದೆ ಎಂದು ಜಿಲ್ಲಾಧಿಕಾರಿ ಎಚ್.ಆರ್. ಮಹದೇವ್ ಹೇಳಿದ್ದಾರೆ. ಈಗಾಗಲೇ ಭಾರತದ ಕೆಲ ರಾಜ್ಯಗಳ ರೈತರ ಬೆಳೆ ಹಾಗೂ ಕೃಷಿ ಚಟುವಟಿಕೆಗಳನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಈ ಕೋಟ್ಯಾಂತರ ಮಿಡತೆಗಳು ಭಾರೀ ಆತಂಕ ಸೃಷ್ಟಿಸಿವೆ.

ಬೆಳೆ ಹಾನಿ ಮಿಡತೆ

ಈ ನಡುವೆಯೇ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸರಣಿ ರೂಪದ ಎರಡು ಸಭೆ ನಡೆಸಿರುವ ಅವರು, ಜಿಲ್ಲೆಯ ಎಲ್ಲ ರೈತರಿಗೆ ಬೆಳೆ ಉಳಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಿದರು. ಬೀದರ್ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಅರಣ್ಯಾಧಿಕಾರಿಗಳಿಗೂ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ತಿಳಿಸಲಾಗಿದೆ.

ಸುಮಾರು ಐದು ಕೋಟಿಯಷ್ಟಿರುವ ಮಿಡತೆಗಳ ದಾಳಿ ಜಿಲ್ಲೆಯಲ್ಲಿ ನಡೆದರೆ ಜೈವಿಕ ಕೀಟನಾಶಕಗಳ ಕೊರತೆಯಾಗಬಾರದು. ಜೊತೆಗೆ ಈಗಾಗಲೇ ಜಿಲ್ಲೆಯ ಎಲ್ಲ ಹಸಿರು ಬೆಳೆಗಳ ಸಮೀಕ್ಷೆ ಮಾಡಲು ಸಹ ಸಂಬಂಧಪಟ್ಟ ಇಲಾಖೆಯವರಿಗೂ ಸೂಚಿಸಲಾಗಿದೆ. ಲೋಕೆಸ್ಟ್ ಮಿಡತೆಗಳ ಬೆಳವಣಿಗೆ ಬಿಸಿಲು ಇದ್ದಲ್ಲಿ ಹೆಚ್ಚು. ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಈಗಾಗಲೇ 43ಕ್ಕೆ ತಲುಪಿರುವುದು ಸಹ ಕಳವಳಕಾರಿ ಸಂಗತಿ. ಈಗಾಗಲೇ ಜಿಲ್ಲೆಯ ಎಲ್ಲ ಬೆಳೆಗಳ ಸಮೀಕ್ಷೆ ನಡೆಸಲು ಆದೇಶ ಹೊರಡಿಸಲಾಗಿದ್ದು, ಮಿಡತೆಗಳ ಜೀವನ ಚಕ್ರದ ಬಗ್ಗೆ ಕೀಟ ವಿಜ್ಞಾನಿಗಳಿಂದಲೂ ಜಿಲ್ಲಾಡಳಿತ ಸಮಗ್ರ ಮಾಹಿತಿ ಪಡೆದಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close