ಅಂತರಾಷ್ಟ್ರೀಯ

ಆರೋಗ್ಯ ಸೇವೆ ನೀಡಲು ವಿಶೇಷ ವಾಹನಗಳನ್ನು ಸಿದ್ಧಪಡಿಸಿದ ಅಹಮದಾಬಾದ್ ಮಹಾನಗರ ಪಾಲಿಕೆ

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕ-ಜ್ವಾ ಸಿರವಾರ

ಪ್ರತಿ ವಾಹದನಲ್ಲಿ ಓರ್ವ ಡಾಕ್ಟರ್​, ಪ್ಯಾರಾಮೆಡಿಕಲ್​ ಸ್ಟಾಪ್​ ಹಾಗೂ ಪ್ಯಾರಾಮೆಸಿಸ್ಟ್​ಗಳು ಇರುತ್ತಾರೆ. ಆರಂಭಿಕ ಹಂತದಲ್ಲಿ 50 ವಾಹನಗಳನ್ನು ಸಿದ್ಧಪಡಿಸಲಾಗಿದ್ದು, ಗುರುತಿಸಲಾದ ಸ್ಥಳದಲ್ಲಿ ಎರಡು ಗಂಟೆಗಳ ಕಾಲ ಈ ವಾಹನ ನಿಲ್ಲಲಿದೆ.

ಗುಜರಾತ್​ನ ಅಹಮದಾಬಾದ್​ ಭಾಗದಲ್ಲಿ ಕೊರೋನಾ ವೈರಸ್​ ದೊಡ್ಡ ಮಟ್ಟದಲ್ಲಿ ಪರಿಣಾಮ ಉಂಟು ಮಾಡುತ್ತಿದೆ. ಇದರ ವಿರುದ್ಧ ಹೋರಾಡಲು ಅಹಮದಾಬಾದ್ ಮಹಾನಗರ ಪಾಲಿಕೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗ ಧನ್ವಂತರಿ ರಾಥ್ ಅಥವಾ ವಿಶೇಷ ಕೋವಿಡ್​-19 ವಾಹನಗಳನ್ನು ಸಿದ್ಧಪಡಿಸಿದೆ. ಈ ವಾಹನಗಳು ಅಹಮದಾಬಾದ್ ಭಾಗದಲ್ಲಿ ಸುತ್ತಾಟ ನಡೆಸಲಿದ್ದು, ಚೆಕಪ್​​​ ಹಾಗೂ ಜನರಿಗೆ ಔಷಧ ನೀಡುವ ಕೆಲಸವನ್ನು ಇದು ಮಾಡಲಿದೆ.

ಪ್ರತಿ ವಾಹನಗಳಲ್ಲಿ ಓರ್ವ ಡಾಕ್ಟರ್​, ಪ್ಯಾರಾಮೆಡಿಕಲ್​ ಸ್ಟಾಪ್​ ಹಾಗೂ ಪ್ಯಾರಾಮೆಸಿಸ್ಟ್​ಗಳು ಇರುತ್ತಾರೆ. ಆರಂಭಿಕ ಹಂತದಲ್ಲಿ 50 ವಾಹನಗಳನ್ನು ಸಿದ್ಧಪಡಿಸಲಾಗಿದ್ದು, ಗುರುತಿಸಲಾದ ಸ್ಥಳದಲ್ಲಿ ಎರಡು ಗಂಟೆಗಳ ಕಾಲ ಈ ವಾಹನ ನಿಲ್ಲಲಿದೆ. ಪ್ರತಿ ವಾಹನ ನಿತ್ಯ ನಾಲ್ಕು ಪ್ರದೇಶಗಳಲ್ಲಿ ಓಡಾಟ ನಡೆಸಲಿದೆ.

ಮೊದಲ ಹಂತದಲ್ಲಿ ಅಹಮದಾಬಾದ್​ನ 14 ಕಂಟೇನ್​ಮೆಂಟ್​ನ 200 ಪ್ರದೇಶಗಳನ್ನು ಕವರ್ ಮಾಡಲು ನಿರ್ಧರಿಸಲಾಗಿದೆ. ಈ ವಾಹನದಲ್ಲಿ ಚೆಕಪ್​ ಮಾಡಿಸಿಕೊಳ್ಳಲು ಬರುವ ವ್ಯಕ್ತಿಗಳ ದೇಹದ ತಾಪಮಾನವನ್ನು ಮೊದಲು ಥರ್ಮಲ್​ ಸ್ಕ್ರೀನಿಂಗ್​ ಮೂಲಕ ಅಳೆಯಲಾಗುತ್ತದೆ. ಅವರ ಆರೋಗ್ಯ ಇತಿಹಾಸವನ್ನು ವೈದ್ಯರು ತಿಳಿದುಕೊಳ್ಳುತ್ತಾರೆ. 40 ವರ್ಷ ಮೇಲಿನ ವ್ಯಕ್ತಿಗಳ ರಕ್ತದಲ್ಲಿ ಸಕ್ಕರೆ ಅಂಶ ಎಷ್ಟಿದೆ ಎಂಬುದನ್ನು ತಪಾಸಣೆ ಮಾಡಲಾಗುತ್ತದೆ.   ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಪ್ರತಿ ರೋಗಿಗೆ ಆಯುಷ್​ ಔಷಧ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close