ರಾಯಚೂರು ಜಿಲ್ಲೆ ಸುದ್ದಿಸಿರವಾರ

ಸಿರವಾರ : ರಾಜೀವ್ ನಗರದಲ್ಲಿ ಸಿ.ಸಿ ರಸ್ತೆ ಕಾಮಗಾರಿ ವಿಳಂಬ; ಖಂಡನೆ

ವರದಿ : ಸಿರಾಜುದ್ದೀನ್ ಬಂಗಾರ್, ಸಿರವಾರ

ಸಿರವಾರ ಮೇ.27 : ಸಿ.ಸಿ ರಸ್ತೆ ನಿರ್ಮಿಸಲು ಪಟ್ಟಣ ಪಂಚಾಯತ್ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದು, ಅದನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿರುವದರಿಂದ ಜನರಿಗೆ ತೊಂದರೆಯಾಗಿದೆ ಎಂದು ಹೈದ್ರಾಬಾದ್ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಖಂಡಿಸಿ, ಇಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಕಳೆದ 6 ತಿಂಗಳ ಹಿಂದೆ ಸಿರವಾರ ಪಟ್ಟಣದ ವಾರ್ಡ ನಂ.7 ರಾಜೀವ್ ನಗರದಲ್ಲಿ ಶ್ರೀ ಅಮರೇಶ ಸಾಹುಕಾರ್ ಚಿತಾಪುರ ಇವರ ಮೆನಯಿಂದ ಶ್ರೀ ಅಮಾತೆಪ್ಪ ಅವರ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಿಸಲು ಪ.ಪಂಚಾಯತ್ ಕಾಮಗಾರಿಯನ್ನು ಕೈಗೆತ್ತುಕೊಂಡಿದ್ದು, ಈ ಕಾಮಗಾರಿಯ ಭಾಗವಾಗಿ ಚರಂಡಿ ಮಾತ್ರ ನಿರ್ಮಾಣವಾಗಿದ್ದು, ಸಿ.ಸಿ ರಸ್ತೆಯೂ ನಿರ್ಮಾಣವಾಗಿರುವುದಿಲ್ಲ.ಅಲ್ಲದೆ ತಗ್ಗು ದಿನ್ನೆಯುಳ್ಳ ರಸ್ತೆಯಿಂದಾಗಿ ರಸ್ತೆಯಲ್ಲಿ ಓಡಾಡುವ ಜನರು ಬಿದ್ದು ಅನಾಹುತಗಳು ಸಂಭವಿಸುತ್ತಿವೆ. ಅಲ್ಲದೆ ಚರಂಡಿಯೂ ಸಹ ನಿರ್ಮಾಣ ಮಾಡಿದ ಮೇಲೆ ಮೇಲ್ಬಾಗದಲ್ಲಿ ಮುಚ್ಚದೇ ಬೇಕಾಬಿಟ್ಟಿಯಾಗಿ ಬಿಟ್ಟು ಹೋಗಿದ್ದಾರೆ. ಇದಲ್ಲದೆ ಈ ಕಾಮಗಾರಿಯ ಸಂದರ್ಭದಲ್ಲಿ ಇಲ್ಲಿನ ವಿದ್ಯುತ್ ಕಂಬಗಳು ಸಹ ಸ್ಥಳಾಂತರ ಮಾಡುವ ಕುರಿತು ಈ ಹಿಂದೆ ಸಂಘಟನೆಯ ವತಿಯಿಂದ ಸಂಬಂಧಪಟ್ಟ ಇಲಾಖೆಗೆ ತಿಳಿಸಿದರೆ ಅವರು ಪಟ್ಟಣ ಪಂಚಾಯತಿಯಿಂದ ಆದೇಶ ಬರಬೇಕು ಎಂದು ಹೇಳುತ್ತಿದ್ದು, ನಿಜಕ್ಕೂ ಖಂಡನಿಯ.

ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ವಾರ್ಡ ನಂ.7 ರಾಜೀವ್ ನಗರದಲ್ಲಿ ಅರ್ಧಕ್ಕೆ ಮೊಟಕುಗೊಳಿಸಿರುವ ಸಿ.ಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ತೆರೆದ ಚೆರಂಡಿಯನ್ನು ಮುಚ್ಚಿಸಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಸಹಕರಿಸಬೇಕು. ವಾರ್ಡನ ಜನರಿಗೆ ಮುಂದೆ ಸಂಭವಿಸುವ ಅನಾಹುತದಿಂದ ಕಾಪಾಡಬೇಕು ಎಂದು ಸಂಘಟನೆಯ ತಾಲೂಕ ಅಧ್ಯಕ್ಷರಾದ ನಾಗರಾಜ್.ಆರ್ ತಿಳಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಸಹಕರಿಸದಿದ್ದಲ್ಲಿ ಪ.ಪಂ ಮುಂದೆ ಸಂಘಟನೆಯವತಿಯಿಂದ ಮತ್ತು ವಾರ್ಡನ ಸದಸ್ಯರೊಂದಿಗೆ ಧರಣಿ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮಹಿಳಾಧ್ಯಕ್ಷರಾದ ಕಮಲಮ್ಮ, ಹನುಮಂತಿ ಸೇರಿದಂತೆ ತಾ.ಪ್ರ.ಕಾ ನಾಗರಾಜ ಬೊಮ್ಮನಾಳ, ಗೌ.ಅಧ್ಯಕ್ಷರಾದ ಜಗನ್ನಾಥ ಹಾಗೂ ಜೆ.ಎಸ್.ರಮೇಶ ಜಕ್ಕಲದಿನ್ನಿ ಉಪಸ್ಥೀತರಿದ್ದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close