ರಾಯಚೂರು ಜಿಲ್ಲೆ ಸುದ್ದಿಸಿರವಾರ

ಸಿರವಾರ : ಕೊರೋನ ಸೊಂಕು ತಡೆಗಟ್ಟಲು ಸರ್ಕಾರ ಶಿಸ್ತಿನ ಕ್ರಮಗಳನ್ನು ಜಾರಿಗೊಳಿಸುವಂತೆ DYFI ಮನವಿ

ವರದಿ : ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ ಜ್ವಾಲೆ ಸಿರವಾರ

ಸಿರವಾರ ಮೇ.27 : ಮಹಮಾರಿ ಕೊರೋನ ಸೊಂಕಿನ ಹಾವಳಿ ಹೆಚ್ಚಾಗಿರುವುದರಿಂದ ಮತ್ತು ಸಾರ್ವಜನಿರ ಆರೋಗ್ಯದ ಹಿತದೃಷ್ಟಿಯಿಂದ ಸೊಂಕನ್ನು ತಡೆಗಟ್ಟಲು ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್,ಸ್ಯಾನಿಟೈಜರ್ ಬಳಕೆ ಕಡ್ಡಾಯ ಮತ್ತು ಶಿಸ್ತಿನ ಕ್ರಮಗಳನ್ನು ಜಾರಿಗೊಳಿಸುವಂತೆ ಇಂದು ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಧೀಕಾರಿಗಳ/ತಹಶೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸುವಂತೆ, ಭಾರತ ಪ್ರಜಾಸತಾತ್ಮಕ ಯುವಜನ ಸಂಘಟನೆ (DYFI) ಮನವಿ ಪತ್ರವನ್ನು ಸಲ್ಲಿಸಿದರು.

ವಿಶ್ವಾದ್ಯಾಂತ ವ್ಯಾಪಿಸಿರುವ ಭಯಾನಕ ಸೊಂಕು ಕೋವಿಡ19 ನಿಂದ ಹಲವಾರು ಸಾವಿನ ಪ್ರಕರಣಗಳು ಸಂಭವಿಸಿದ್ದು, ನಿಜಕ್ಕೂ ಭಯಾನಕ ವಾತಾವರಣವನ್ನು ಸೃಷ್ಠಿಸಿದೆ. ರಾಯಚೂರು ಜಿಲ್ಲೆ ಹಸಿರು ವಲವಾಗಿತ್ತು, ಮಹರಾಷ್ಟ್ರ ,ಮುಂಬೈನಿಂದ ಆಗಮಿಸಿದ ವಲಸಿಗರಿಂದ ಸೊಂಕು ವ್ಯಾಪಕವಾಗಿ ಹರಡಲು ಕಾರಣವಾಯಿತು, ರಾಯಚೂರು ಜಿಲ್ಲಾಡಳಿತ,ಪೋಲಿಸ್ ಇಲಾಖೆ,ವೈದ್ಯಾಧಿಕಾರಿಗಳು ತೆಗೆದುಕೊಂಡ ಶಿಸ್ತಿನ ಕ್ರಮದಿಂದ ಸೊಂಕಿನ ಸಂಖ್ಯೆ ಕಡಿಮೆಯಾಗಿದ್ದು ಇವರ ಕಾರ್ಯ ಶ್ಲಾಘನೀಯ.

ಸಿರವಾರ ಪಟ್ಟಣ ಸುತ್ತಮುತ್ತಲು ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳಿಗೆ (ದೇವದುರ್ಗ ತಾಲೂಕು ಸೇರಿ) ಎಲ್ಲಾ ಗ್ರಾಮಗಳಿಗೆ ವ್ಯವಹಾರ ವಹಿವಾಟು, ಮದುವೆ ಸಮಾರಂಭಗಳ ವಸ್ತುಗಳ ಖರೀದಿಗಾಗಿ ಸಾವಿರಾರು ಜನರು ಸಿರವಾರ ಪಟ್ಟಣಕ್ಕೆ ಆಗಮಿಸುತ್ತಿದ್ದು, ಸಾಮಾಜಿಕ ಅಂತರವನ್ನು ಮರೆತಿದ್ದಾರೆ ಹಾಗೂ ಅಂಗಡಿ ಮಾಲೀಕರು ಸಹ ಸರ್ಕಾರ ನೀಡಿದ ಶಿಸ್ತೀನ ಕ್ರಮಗಳನ್ನು ಉಲ್ಲಂಘಿಸಿದ್ದು, ಭಯದ ವಾತಾವರಣ ಸೃಷ್ಟೀಸಿದೆ. ಎಲ್ಲಂದರಲ್ಲೂ ಜನರು ಗುಂಪು ಸೇರುವುದು ಸಾಮಾನ್ಯವಾಗಿದೆ. ಇಂತವರ ವಿರುದ್ದ ಸರ್ಕಾರಿ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆ ಕಾನೂನಿನ ಪ್ರಕಾರ ಶಿಸ್ತಿನ ಕ್ರಮ ಜರುಗಿಸಬೇಕು ಮತ್ತು ಕೆಳಗೆ ತೋರಸಿದ ವಿನಂತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

  1. ಪ್ರತಿ ಅಂಗಡಿಯಲ್ಲೂ ಸ್ಯಾನೀಟೈಜರ್ ಬಳಕೆ ಕಡ್ಡಾಯಗೊಳಿಸಬೇಕು.
  2. ಸಾರ್ವಜನಿಕರು, ಗ್ರಾಹಕರು, ಅಂಗಡಿ ಮಾಲೀಕರು ಸೇರಿದಂತೆ ಬೈಕ್ ಮತ್ತು ವಾಹನ ಚಾಲಕರು ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಬೇಕು.
  3. ಎಲ್ಲಾ ಅಂಗಡಿಗಳು/ಬ್ಯಾಂಕ್ ಸೇರಿದಂತೆ, ಇನ್ನೀತರೆ ವ್ಯಾವಹಾರಗಳಲ್ಲಿ ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಅಂಗಡಿ ಮಾಲಿಕರಿಗೆ ಎಚ್ಚರಿಕೆ ನೀಡಬೇಕು

ಒಂದು ವೇಳೆ ಈ ನಿಯಮಗಳನ್ನು ಸರ್ಕಾರ ಕಡ್ಡಾಯಗೊಳಿಸಿದಿದ್ದಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು DYFI ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ DYFI ರಾಜ್ಯ ಸಮೀತಿಯ ಸದಸ್ಯರಾದ ಚಂದ್ರಶೇಖರ್, ಸಾಮಾಜಿಕ ಚಿಂತಕರಾದ ಸಿರಾಜುದ್ದೀನ್ ಬಂಗಾರ್, ರಾಮಕುಮಾರ್ ಹಾಗೂ SFI ಸಂಘಟನೆಯ ತಾಲೂಕು ಅಧ್ಯಕ್ಷರಾದ ಚಿದಾನಂದ ಕರಿಗೂಳಿ, ಪತ್ರಿಕಾ ವರದಿಗಾರರಾದ ವೀರುಪಾಕ್ಷೀ ಮರಾಠ ಸೇರಿದಂತೆ ಸಂಘಟನೇಯ ಸದಸ್ಯರುಗಳು ಉಪಸ್ಥೀತರಿದ್ದರು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close