Uncategorized

ಲಾಕಡೌನನಿಂದಲೇ ಆತ್ಮಹತ್ಯೆ ಮಾಡಿಕೊಂಡ್ರಾ ಈ ಕಿರುತರೆ ನಟಿ….?

ಲಾಕ್​ಡೌನ್​ನಿಂದಾಗಿ ಸಿನಿ ರಂಗದ ಕಾರ್ಮಿಕರು ಕಲಾವಿದರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಅದರಲ್ಲಂತೂ ದಿನಗೂಲಿ ಕಾರ್ಮಿಕರು ಹಾಗೂ ಉದಯೋನ್ಮುಖ ಕಲಾವಿದರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗಲೇ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ವರದಿಯಾಗಿದೆ. 

ಹಿಂದಿ ಧಾರಾವಾಹಿಗಳಲ್ಲಿ ನಟಿಸಿರುವ ಕಲಾವಿದೆ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡಿರುವ ನಟಿ. ಇಂದೋರ್​ನ ನಿವಾಸಿಯಾಗಿರುವ ಪ್ರೇಕ್ಷಾ ಕ್ರೈಂ ಪೆಟ್ರೋಲ್​ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಲಾಕ್​ಡೌನ್​ನಿಂದಾಗಿ ಮನೆಯವರೊಂದಿಗೆ ಇದ್ದ ಪ್ರೇಕ್ಷಾ ಸೋಮವಾರ ರಾತ್ರಿ ತಮ್ಮ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರಂತೆ. ಬೆಳಿಗ್ಗೆ ಅವರ ತಂದೆ ರೂಮಿಗೆ ಹೋದಾಗ ಮಗಳು ನೇಣಿಗೆ ಶರಣಾಗಿದ್ದು ತಿಳಿದಿದೆ ಎನ್ನಲಾಗುತ್ತಿದೆ.

ಲಾಕ್​ಡೌನ್​ನಿಂದಾಗಿ ಧಾರಾವಾಹಿಯ ಕೆಲಸಗಳು ನಿಂತು ಹೋಗಿದ್ದು, ಪ್ರೇಕ್ಷಾ ತೀರಾ ಬೇಸರದಲ್ಲಿದ್ದರಂತೆ. ಇದರಿಂದಾಗಿ ಸೋಮವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ ಎನ್ನುತ್ತಿದ್ದಾರೆ ಮನೆಯವರು. ಆದರೆ ಪೊಲೀಸರ ಪ್ರಕಾರ ಆತ್ಮಹತ್ಯೆಗೆ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲವಂತೆ.

ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿರು ಖಾತೆಯಲ್ಲಿ ನಿರಾಶಾದಾಯಕ ಪೋಸ್ಟ್​ ಮಾಡಿದ್ದರಂತೆ ಪ್ರೇಕ್ಷಾ. ಕನಸುಗಳು ನುಚ್ಚು ನೂರಾದರೆ ತುಂಬಾ ನೋವಾಗುತ್ತದೆ ಎಂದು ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದರಂತೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲಾಕ್​ಡೌನ್​ ಎಫೆಕ್ಟ್​ ಜೊತೆಗೆ ಬೇರೆ ಕಾರಣಗಳೂ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close