ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ರಾಜ್ಯದಲ್ಲಿಂದು 122 ಕೊರೋನ ಕೇಸ್; 2400 ರ ಗಡಿ ದಾಟಿದ ಸೋಂಕಿತರ ಸಂಖ್ಯೆ

Posted By: Sirajuddin Bangar

Source: NS18

ಬೆಂಗಳೂರು(ಮೇ.27): ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್​ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 122 ಕೋವಿಡ್​​-19 ಪಾಸಿಟಿವ್​​​​ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆಯೂ 2,405ಕ್ಕೆ ಏರಿಕೆಯಾಗಿದೆ ಎಂಬುದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್​ ಬುಲೆಟಿನ್​​ನಿಂದ ತಿಳಿದು ಬಂದಿದೆ. 

ಇನ್ನು, ಮಾರಕ ಕೊರೋನಾಗೆ ಇಂದು ಒಬ್ಬರು ಬಲಿಯಾಗಿದ್ದಾರೆ. ಯಾದಗಿರಿ ಮೂಲದ 69 ವರ್ಷದ ಮಹಿಳೆ ಈ ಹಿಂದೆ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿದ್ದರು. ಸಂಬಂಧಿಕರು ಈಕೆಯನ್ನು ಮಹಾರಾಷ್ಟ್ರದಿಂದ ಕೋವಿಡ್​​-19 ಚಿಕಿತ್ಸೆಗಾಗಿ ಯಾದಗಿರಿ ಆಸ್ಪತ್ರೆಗೆ ಕರೆ ತರುವಾಗ ಮೃತಪಟ್ಟರು. ಇವರು ಮೃತರಾದ ಬಳಿಕ ವರದಿಯೂ ಕೋವಿಡ್​​-19 ಪಾಸಿಟಿವ್​​ ಎಂದು ಬಂದಿದೆ. ಈಗ ಯಾದಗಿರಿ ಒಂದು ಸಾವಿನ ಪ್ರಕರಣ ಸೇರಿದಂತೆ ರಾಜ್ಯದಲ್ಲಿ 25 ಮಂದಿಯನ್ನು ಕೊರೋನಾ ಬಲಿ ಪಡೆದಿದೆ.

ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಒಟ್ಟು 2045 ಸೋಂಕಿತರ ಪೈಕಿ ಇಂದು 14 ಮಂದಿ ಸೇರಿದಂತೆ ಒಟ್ಟು ಇದುವರೆಗೂ 762 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ಸದ್ಯ ರಾಜ್ಯದಲ್ಲಿ 1596 ಸಕ್ರಿಯ ಕೇಸುಗಳಿವೆ. ಎಲ್ಲರಿಗೂ ಕೋವಿಡ್​​-19 ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾ ಸೋಂಕು ತಡೆಯಲೇಬೇಕೆಂದು ಒಂದಲ್ಲ, ಎರಡಲ್ಲ, ಮೂರಲ್ಲ ನಾಲ್ಕು ಬಾರಿ‌ ದೇಶಕ್ಕೆ ದೇಶವನ್ನೇ ದಿಗ್ಬಂಧನಕ್ಕೆ ಒಳಪಡಿಸಲಾಗಿದೆ. ಆದರೂ ಸೋಂಕು ಹರಡುವಿಕೆ ಮಾತ್ರ ಕಮ್ಮಿ ಆಗಿಲ್ಲ. ಕಳೆದ ವಾರವಷ್ಟೇ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಒಂದೂಕಾಲು ಲಕ್ಷದ ಗಡಿ ದಾಟಿತ್ತು. ಈಗ ಒಂದೂವರೆ ಲಕ್ಷದ ಗಡಿಯನ್ನೂ ದಾಟಿ ಮುಂದೆ ಹೋಗಿದೆ.

ಮೊನ್ನೆಯಷ್ಟೇ ಭಾರತವು ಜಾಗತಿಕವಾಗಿ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ‘ಟಾಪ್ 10’ ಪಟ್ಟಿಯೊಳಗೆ ಬಂದಿತ್ತು. ಬಳಿಕ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಒಂದೂಕಾಲು ಲಕ್ಷದ ಗಡಿ ದಾಟಿತ್ತು. ಈಗ ನಿನ್ನೆ ಒಂದೇ ದಿನ ದೇಶದಲ್ಲಿ 6,387 ಜನರು‌ ಹೊಸದಾಗಿ ಕೊರೋನಾ ಪೀಡಿತರಾಗಿದ್ದಾರೆ. ಇದರಿಂದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 1,51,767ಕ್ಕೆ ಏರಿಕೆಯಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close