ಕರ್ನಾಟಕ ಸುದ್ದಿ

ಸಿಎಂ ಬಿ.ಎಸ್​​ ಯಡಿಯೂರಪ್ಪ ಭೇಟಿಗೂ ಆರೋಗ್ಯ ಸೇತು ಆ್ಯಪ್​​ ಕಡ್ಡಾಯ;

ಆರೋಗ್ಯ ಸೇತು ಆ್ಯಪ್​​ ಅನ್ನು ರಾಜ್ಯದಲ್ಲಿ‌ 63 ಲಕ್ಷಕ್ಕೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಈಗಾಗಲೇ ‌2226 ಜನರಿಗೆ ಆರೋಗ್ಯ ಸೇತು ಆ್ಯಪ್ ರೆಡ್ ಅಲರ್ಟ್ ಕಳುಹಿಸಿದೆ. ಈ ಪೈಕಿ 233 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇದು ವರೆಗೂ ಆರೋಗ್ಯ ಸೇತು ಆ್ಯಪ್ ಮೂಲಕ 17 ಜನರಿಗೆ ಕೊರೋನಾ ಧೃಡ ಪಟ್ಟಿದೆ.

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದೆ. ಈ ಮಾರಕ ಸೋಂಕು ಬಲಿಯಾಗುವವರ ಸಂಖ್ಯೆಯೂ ಜಾಸ್ತಿಯಾಗುಲ್ಲೇ ಇದೆ. ಹೀಗಾಗಿ ಕೋವಿಡ್​​-19 ಸೋಂಕಿತರ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಲು ರಾಜ್ಯ ಸರ್ಕಾರ ಆರೋಗ್ಯ ಸೇತು ಆ್ಯಪ್​​ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್​​ ಮೂಲಕ ಜನ ತಮ್ಮ ಸುತ್ತಲಿನ ಕೊರೋನಾ ಪಾಸಿಟಿವ್​​ ಕೇಸುಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. 

ಆರೋಗ್ಯ ಸೇತು ಆ್ಯಪ್ ಬೇರೆಯವರಿಗೆ ಇರುವ ಕೊರೋನಾ ಗುಣ ಲಕ್ಷಣಗಳ ಬಗ್ಗೆ ಮಾಹಿತಿ ನೀಡುತ್ತದೆ. ಆದ್ದರಿಂದ ಈ ಆ್ಯಪ್ ಅನ್ನು ಎಲ್ಲರೂ​ ಕಡ್ಡಾಯವಾಗಿ ಬಳಸಲೇಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆಯೇ ಸಿಎಂ ಅಧಿಕೃತ ಕಚೇರಿ ಕೃಷ್ಣಾದಲ್ಲೂ ಈ ಆ್ಯಪ್​​​​ ಕಡ್ಡಾಯವಾಗಿದೆ.

ಇನ್ನು, ಆರೋಗ್ಯ ಸೇತು ಆ್ಯಪ್​​​ ಇದ್ದವರಿಗೆ ಮಾತ್ರ ಪ್ರವೇಶ ಎಂಬ ಫಲಕವೂ ಕೃಷ್ಣಾ ಎದುರಿನ ಗೇಟ್​​ನಲ್ಲಿ ಹಾಕಲಾಗಿದೆ.  ಈಗಾಗಲೇ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕೂಡ ಈ ಆರೋಗ್ಯ ಆ್ಯಪ್​​ ಅನ್ನು ಬಳಕೆ ಮಾಡುತ್ತಿದ್ದಾರೆ. ಕೃಷ್ಣಾ ಭೇಟಿಗೆ ನೀಡುವ ಎಲ್ಲರಿಗೂ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ.

ಕೃಷ್ಣಾದಲ್ಲಿ ತಿಂಗಳಿಗೆ ಎರಡು ಬಾರಿ ಟೆಸ್ಟಿಂಗ್ ಹಾಗೂ ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಮಾಡಲಾಗಿದೆ.‌ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಸಿಎಂ ಬಿ.ಎಸ್​ ಯಡಿಯೂರಪ್ಪರನ್ನು ಭೇಟಿ ಮಾಡಲು ಬರುವವರಿಗೂ ಆರೋಗ್ಯ ಸೇತು ಆ್ಯಪ್​​​ ಕಡ್ಡಾಯ ಮಾಡಲಾಗಿದೆ.

ರಾಜ್ಯದಲ್ಲಿ 65 ಲಕ್ಷಕ್ಕೂ ಹೆಚ್ಚು ಜನರಿಂದ ಆರೋಗ್ಯ ಸೇತು ಆ್ಯಪ್ ಬಳಕೆ

ಆರೋಗ್ಯ ಸೇತು ಆ್ಯಪ್​​ ಅನ್ನು ರಾಜ್ಯದಲ್ಲಿ‌ 63 ಲಕ್ಷಕ್ಕೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಈಗಾಗಲೇ ‌2226 ಜನರಿಗೆ ಆರೋಗ್ಯ ಸೇತು ಆ್ಯಪ್ ರೆಡ್ ಅಲರ್ಟ್ ಕಳುಹಿಸಿದೆ. ಈ ಪೈಕಿ 233 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇದುವರೆಗೂ ಆರೋಗ್ಯ ಸೇತು ಆ್ಯಪ್ ಮೂಲಕ 17 ಜನರಿಗೆ ಕೊರೋನಾ ಧೃಡಪಟ್ಟಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close