ಕರ್ನಾಟಕ ಸುದ್ದಿ

ಬ್ರೇಕಿಂಗ್ ನ್ಯೂಸ್: ಒಂದೇ ದಿನ 100 ಮಂದಿಗೆ ವೈರಸ್​; 2,282ಕ್ಕೆ ಏರಿದ ಸೋಂಕಿತರ ಸಂಖ್ಯೆ

— ಸಿರಾಜುದ್ದೀನ್ ಬಂಗಾರ್

2,282 ಸೋಂಕಿತರ ಪೈಕಿ ಇಂದು 17 ಮಂದಿ ಸೇರಿದಂತೆ ಒಟ್ಟು 722 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇನ್ನುಳಿದ 1514 ಮಂದಿಗೆ ಕೋವಿಡ್​​-19 ಚಿಕತ್ಸೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಇಂದು ಒಂದೇ ದಿನ ನೂರು ಮಂದಿಗೆ ಕೋವಿಡ್​​-19 ಪತ್ತೆಯಾದ ಕಾರಣ ಸೋಂಕಿತರ ಸಂಖ್ಯೆಯೂ 2,282ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್​​ನಿಂದ ತಿಳಿದು ಬಂದಿದೆ.‘

ಇನ್ನು, ರಾಜ್ಯ ಸರ್ಕಾರದ ಪ್ರಕಾರ ಚಿತ್ರದುರ್ಗವೊಂದರಲ್ಲೇ ಇಂದು 20 ಮಂದಿಗೆ ಕೊರೋನಾ ವಕ್ಕರಿಸಿದೆ. ಉಡುಪಿ ಮತ್ತು ದಾವಣಗೆರೆಯಲ್ಲಿ ತಲಾ 10 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳ ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಕೊರೋನಾ ತಹಬದಿಗೆ ಬಂದಿದೆ.

2,282 ಸೋಂಕಿತರ ಪೈಕಿ ಇಂದು 17 ಮಂದಿ ಸೇರಿದಂತೆ ಒಟ್ಟು 722 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇನ್ನುಳಿದ 1514 ಮಂದಿಗೆ ಕೋವಿಡ್​​-19 ಚಿಕತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರ, ತಮಿಳುನಾಡು, ಜಾರ್ಖಾಂಡ್​​ನಿಂದ ರಾಜ್ಯಕ್ಕೆ ಬಂದ ಬುಹುತೇಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮಾರಕ ಕೊರೋನಾಗೆ ಇದುವರೆಗೂ ರಾಜ್ಯದಲ್ಲಿ 44 ಮಂದಿ ಬಲಿಯಾಗಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close