ಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿ

ಬಿದಿಗೆ ಬಿದ್ದ ಮೇದಾರರ ಬದುಕು; ದೇಶೀ ವಸ್ತುಗಳಿಗೆ ಆದ್ಯತೆ ಸಿಕ್ಕರೆ ಮಾತ್ರ ಮೇದಾರರು ಬಚಾವ್

Posted By : Sirajuddin Bangar

ಲಾಕ್​ಡೌನ್​ ಎಫೆಕ್ಟ್ ; ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್​​ ಡೌನ್ ಘೋಷಣೆ ಮಾಡಿದ ಪರಿಣಾಮ ತೀವ್ರ ಹೊಡೆತ ಬಿದ್ದಿದೆ.

ಕೊರೋನಾ ಲಾಕ್​​ ಡೌನ್‌ನಿಂದ ಅದೆಷ್ಟೋ ಗುಡಿ ಕೈಗಾರಿಕೆಗಳು ಅವಸಾನದ ಹಾದಿ ಹಿಡಿದಿವೆ. ಇವರಲ್ಲಿ ಮೇದಾರರ ಕುಟುಂಬಗಳು ಸಹ ಒಂದು. ಬಿದುರನ್ನೇ ನಂಬಿರುವ ಮೇದಾರ ಜನಾಂಗದವರ ಬದುಕೇ ಅತಂತ್ರವಾಗುತ್ತಿದೆ.

ವರ್ಷವಿಡೀ ಕಾಯಕ ಮಾಡುವ ಈ ಜನಾಂಗಕ್ಕೆ ಇದೀಗ ಕೊರೋನಾ ಸಂಕಷ್ಟ ತಂದಿದೆ. ಬಿದರಿನಲ್ಲಿ ಪಡ್ಡಲಗಿ, ಬುಟ್ಟಿ, ಮರಾ, ಜಲ್ಲಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತಯಾರಿಸುವ ಮೇದಾರ ಜನಾಂಗದವರದ್ದು ಸದಾ ಮನೆಯಲ್ಲಿಯೇ ಕಾಯಕ. ಮನೆ ಅಥವಾ ಮನೆಯಂಗಳದಲ್ಲಿಯೇ ಕುಳಿತು ಕೈಯ್ಯಾರೆ ತಯಾರಿಕೆ ಮಾಡುತ್ತಾರೆ. ಆದರೆ, ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್​​ ಡೌನ್ ಘೋಷಣೆ ಮಾಡಿದ ಪರಿಣಾಮ ತೀವ್ರ ಹೊಡೆತ ಬಿದ್ದಿದೆ.

ವರ್ಷಪೂರ್ತಿ ಶ್ರಮಕ್ಕೆ ಬೆಲೆಯೇ ಸಿಗದಂತೆ ಮಾಡಿಬಿಟ್ಟಿದೆ ಕೊರೋನಾ. ಸದ್ಯ ಸಂಕಷ್ಟದಲ್ಲಿ ಸುಳಿಯಲ್ಲಿ ಸಿಲುಕಿರುವ ಈ ಜನಾಂಗವು, ಕೃಷಿ ಚಟುವಟಿಕೆಗೆ ಬೇಕಾದ ಜಲ್ಲಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಹ ತಯಾರಿಸಿ ರೈತರಿಗೆ ಮಾರಾಟ ಮಾಡಿ ವಾರದ ಸಂತೆಯ ಭಾರ ಇಳಿಸಿಕೊಂಡು ಜೀವನ ಸಾಗಿಸುವಂತಾಗಿದೆ.

ಸವದತ್ತಿಯ ಯಲ್ಲಮ್ಮನ ಗುಡ್ಡದ ಜಾತ್ರಾ ಮಹೋತ್ಸವವೇ ಮೇದಾರ ಜನಾಂಗದವರ ಮಾರುಕಟ್ಟೆಯ ಮುಖ್ಯ ವೇದಿಕೆಯಾಗಿದೆ. ದವನ ಹುಣ್ಣಿಮೆಯಿಂದ ಆರಂಭ ಆಗುವ ಜಾತ್ರಾ ಮಹೋತ್ಸವದಿಂದ ಮೇದಾರ ಜನಾಂಗ ಬಿದುರಿನಿಂದ ಮಾಡುವ ಪಡ್ಡಲಗಿ ಸೇರಿದಂತೆ ಬುಟ್ಟೆಗಳು ಮಾರಾಟ ಆಗುತ್ತವೆ. ಆದರೆ ಈ ಸಲ ಕೊರೋನಾ ಹಿನ್ನೆಲೆಯಿಂದ ಯಲ್ಲಮ್ಮನಗುಡ್ಡ ಬಂದ್ ಆಗಿದ್ದು, ಈ ಮೂಲಕ ಮಾರಾಟಕ್ಕೆ ಹೊಡೆತ ಬೀಳುವಂತಾಗಿದೆ.

ಈ ಸಲ ಲಾಕ್​ಡೌನ್ ಕಾರಣದಿಂದ ಯಲ್ಲಮನ ಗುಡ್ಡ ಬಂದ್ ಆಗಿರುವ ಕಾರಣ ತಯಾರಿಸಿದ ಪಡ್ಡಲಗಿ, ಬುಟ್ಟೆಗಳು ಮನೆಯಲ್ಲಿಯೇ ಉಳಿಯುವಂತಾಗಿದ್ದು, ಇಡೀ ವರ್ಷದ ಶ್ರಮಕ್ಕೆ ಫಲ ಸಿಗಂದಂತಾಗಿದೆ. ಇನ್ನು ಒಂದು ಬಿದುರಿಗೆ ಅದರ ಗಾತ್ರದ ಅನುಸಾರ 100-150 ರೂಪಾಯಿ ಬೆಲೆಯಿದೆ. ಅದರ ಅನ್ವಯ ತಿಂಗಳಿಗೆ ಬೇಕಾದ ಬಿದುರನ್ನು ವ್ಯಾಪಾರಸ್ಥರೇ ತಂದು ಕೊಡುತ್ತಾರೆ. ಆದರೆ ಇದೀಗ ಲಾಕ್​​ ಡೌನ್ ಹಿನ್ನೆಲೆಯಿಂದ ಬಿದಿರಿನ ಪೂರೈಕೆ ಸ್ಥಗಿತಗೊಂಡಿರುವ ಕಾರಣ ಮಾರ್ಚ್ ತಿಂಗಳಲ್ಲಿ ಪೂರೈಕೆ ಆಗಿರುವ ಬಿದಿರಿನ ಮೇಲೆಯೇ ಕಾಯಕ ದೂಡುವಂತಾಗಿದೆ.

ಒಟ್ಟಾರೆಯಾಗಿ ಲಾಕ್‌ಡೌನ್ ಹಿನ್ನೆಲೆ ಸ್ವದೇಶಿ ವಸ್ತುಗಳ ಬಳಕೆಗೆ ಪ್ರಧಾನ ಮಂತ್ರಿ ಅವರು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇದಾರರ ತಯಾರಿಸಿದ ವಸ್ತುಗಳನ್ನು ಖರೀದಿಸುವಲ್ಲಿ ಸಾರ್ವಜನಿಕರು ಮುಂದಾದರೆ ಮಾತ್ರ ಮೇದಾರರ‌ ಬದುಕು ಹಸನಾಗುತ್ತದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close