ಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿ

ಜೆಡಿಎಸ್ ಶಾಸಕರ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ

–ಸಿರಾಜುದ್ದಿನ್ ಬಂಗಾರ್,ಸಂಪಾದಕರು ಸಿರವಾರ

ಕೊರೋನಾದಿಂದ  ದೇಶ ಸಂಕಷ್ಟದಲ್ಲಿದೆ. ಕರ್ನಾಟಕ ಕೂಡ ಕೋವಿಡ್-19 ಸಮಸ್ಯೆಯಲ್ಲಿ ಸಿಲುಕಿದೆ.  ಸದ್ಯ 2 ಸಾವಿರಕ್ಕೂ ಹೆಚ್ಚು ಸೋಂಕಿತರು ರಾಜ್ಯದಲ್ಲಿ ಇದ್ದಾರೆ. ಕೊರೋನಾ ವೈರಸ್​​ನಿಂದ ದೇವರೇ ಕಾಪಾಡಬೇಕು ಎನ್ನುವ ಸ್ಥಿತಿ ಬಂದು ಒದಗಿದೆ. ಈ ಮಧ್ಯೆಯೇ ದೇಶದಲ್ಲಿ  ಲಾಕ್​ಡೌನ್​  ಮುಂದುವರೆದಿದೆ.

ರಾಜ್ಯದಲ್ಲಿ ಲಾಕ್​ಡೌನ್​​ನಿಂದ ಜನರಿಗೆ ಒಂದಷ್ಟು ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಂದು ಜೆಡಿಎಸ್ ಶಾಸಕರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮಾಡಿ, ಕ್ಷೇತ್ರದಲ್ಲಿರುವ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು.

ಮುಖ್ಯವಾಗಿ ಕ್ಷೇತ್ರಗಳಲ್ಲಿನ ಸಾಮಾನ್ಯ ಜನರ  ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು . ಇದರ ಜೊತೆಗೆ  ಕ್ಷೇತ್ರಗಳಲ್ಲಿರುವ ಕೊರೋನಾ ಸೋಂಕಿತರು, ಕ್ವಾರಂಟೈನ್​​ಗೆ ಒಳಗಾದವರು, ಕೊರೋನಾ ತಡೆಗೆ ಕೈಗೊಂಡ ಕ್ರಮಗಳು, ಅಲ್ಲಿನ ಜನರ ಪರಿಸ್ಥಿತಿ, ಬೇರೆ ರಾಜ್ಯದಿಂದ ಅಲ್ಲಿಗೆ ಬಂದು ಕ್ವಾರಂಟೈನ್ ಆಗಿರೋರು ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಇದೇ ವೇಳೆ  ಕ್ಷೇತ್ರದ ಅಭಿವೃದ್ಧಿ ಕುರಿತು ಶಾಸಕರ ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತುಕತೆ ನಡೆಸಿದರು. ಜೆಪಿ‌ ನಗರದ ತಮ್ಮ ನಿವಾಸದಲ್ಲಿ ಕುಳಿತುಕೊಂಡು ಹೆಚ್ ಡಿ ಕುಮಾರಸ್ವಾಮಿ  ವೀಡಿಯೋ ಕಾನ್ಪೆರೆನ್ಸ್ ನಡೆಸಿದರು.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಜೆಡಿಎಸ್ ನ 20 ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಶಾಸಕರು ತಮ್ಮ ಕ್ಷೇತ್ರದ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಮ್ಮ ನಾಯಕರಾದ ಹೆಚ್ಡಿಕೆ ಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಕ್ಷೇತ್ರದಲ್ಲಿ ಇರುವ ಕೆಲ ಸಮಸ್ಯೆಗಳನ್ನು ಶಾಸಕರು ಹೆಚ್ಡಿಕೆ ಗಮನಕ್ಕೆ ತಂದರು.

ಮಾನ್ವಿ‌ ವಿಧಾನ ಸಭೆ ಕ್ಷೇತ್ರದ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಅವರು ವಿಡೀಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡ ಕ್ಷಣ

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡಿದ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ರವರು ನಮ್ಮ ರಾಯಚೂರು ಜಿಲ್ಲೆ ಗ್ರೀನ್ ಜೋನ್ ನಲ್ಲಿತ್ತು ಕಳೆದ ಮೂರ್ನಾಲ್ಕು ದಿನಗಳಲ್ಲಿ 66 ಪಾಸಿಟಿವ್ ಕೇಸ್ ದಾಖಲಾಗಿದ್ದರೂ ನಮ್ಮ ಕ್ಷೇತ್ರದಲ್ಲಿ ಈವರೆಗೆ ಒಂದು ಕೂಡ ಪಾಸಿಟಿವ್ ಬಂದಿಲ್ಲ.
ವೈರಸ್ ಹರಡದಂತೆ ಮತ್ತು ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ತಾಲೂಕು ಆಡಳಿತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ರಾಜ್ಯದಲ್ಲಿ ಲಾಕ್ ಡೌನ್ ಆದ ತಕ್ಷಣ ಬಡವರಿಗೆ ಕೂಲಿಕಾರ್ಮಿಕರಿಗೆ ಅಗತ್ಯ ವಸ್ತುಗಳ ವಿತರಣೆ ಮಾಡುವುದಲ್ಲದೆ ತಮ್ಮ ಒಂದು ತಿಂಗಳ ವೇತನವನ್ನು ತಾಲೂಕು ಆಡಳಿತಕ್ಕೆ ನೀಡಿದ್ದೇನೆ ಎಂದರು.
ನಂತರ ಕುಮಾರಸ್ವಾಮಿಯವರು ಕ್ಷೇತ್ರದಲ್ಲಿರುವ ರೈತರ ಬಗ್ಗೆ ಮತ್ತು ನೀರಿನ ಬಗ್ಗೆ ಮಾಹಿತಿ ಪಡೆದುಕೊಂಡರು.

Continue

Related Articles

Leave a Reply

Your email address will not be published. Required fields are marked *

Back to top button
Close
Close