ಸಿರವಾರ

ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ; ಸಿರವಾರ ಕಂಪ್ಲೀಟ್ ಬಂದ್

ವರದಿ : ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕ-ಜ್ವಾ.

ಸಿರವಾರ ಮೇ.24 : ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿ ಸರ್ಕಾರ ಆದೇಶ ಮಾಡಿದೆ. ಲಾಕ್ ಡೌನ್ ಆಗಿರುವುದರಿಂದ ಸಾರ್ವಜನಿಕರು ಮನೆಗಳಿಂದ ಹೊರ ಬರದಂತೆ ಎಲ್ಲೆಡೆ ಪೊಲೀಸರು ರಸ್ತೆಗಳು ಬಂದ್ ಮಾಡಿ ಕಟ್ಟೆಚ್ಚರ ವಹಿಸಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆ ಮತ್ತು ಸರಬರಾಜಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

ಈ ಹಿನ್ನಲೆಯಲ್ಲಿ ಸಿರವಾರ ತಾಲೂಕಿನ ಸರ್ವಾಜನಿಕರು ತಮ್ಮ ಅಂಗಡಿ ಮುಂಗಟ್ಟುಗಳನ್ನ ಸಂಪೂರ್ಣವಾಗಿ ಬಂದ್ ಮಾಡಿದ್ದು, ಲಾಕಡೌನಗೆ ಬೆಂಬಲ ನೀಡಿದ್ದಾರೆ.

ಅನವಶ್ಯಕ ತಿರುಗಾಟಕ್ಕೆ ಪೋಲಿಸರು ಬ್ರೇಕ್;

ಅನವಶ್ಯಕವಾಗಿ ಜನರು ರಸ್ತೆಯಲ್ಲಿ ತಿರುಗಾಡುವಂತಿಲ್ಲ ಹಾಗೂ ಮಾಸ್ಕ ಕಡ್ಡಾಯಮಾಡಿದ್ದು,ಪೋಲಿಸರು ಇಂದು ಬೆಳಗ್ಗಿನಿಂದ ಸಿರವಾರ ತಾಲೂಕಿನದ್ಯಾಂತ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡು ಅನವಶ್ಯಕ ತಿರುಗಾಟಕ್ಕೆ ಬ್ರೇಕ್ ಹಾಕಿದ್ದಾರೆ.

ಮಾರಕ ಕೊರೋನಾ ವೈರಸ್​​ ತಹಬದಿಗೆ ತರಲು ಇಡೀ ದೇಶಾದ್ಯಂತ ನಾಲ್ಕನೇ ಹಂತದ ಲಾಕ್​ಡೌನ್​​ ಜಾರಿಯಲ್ಲಿದೆ. ಹೀಗಿದ್ದರೂ ಕೆಲವು ಕ್ಷೇತ್ರಗಳು ಹೊರತುಪಡಿಸಿ ಬಹುತೇಕ ಎಲ್ಲಾ ಸೇವೆಗಳು ಲಭ್ಯ ಇವೆ. ಈ ಮೂಲಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಅನುವು ಮಾಡಿ ಕೊಡಲಾಗಿದೆ. ಇದರ ನಡುವೆ ಭಾನುವಾರ ಅಂದರೆ ಇಂದು ಮಾತ್ರ ಸಂಪೂರ್ಣ ಲಾಕ್​ಡೌನ್​​ ಮಾಡಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಕೊರೋನಾ ಹಾವಳಿ ವಲಸಿಗರಿಂದ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಶಿಸ್ತಿನ ಕ್ರಮವನ್ನ ತೆಗೆದುಕೊಳ್ಳಬೇಕು ಅವಶ್ಯಕತೆ ಇದ್ದರೆ ಲಾಕಡೌನ ಮುಂದುವರೆಸಬೇಕು ಎಂಬುದು ಬಹುತೇಕ ಜನರ ಹೇಳಿಕೆಯಾಗಿದೆ. ಇನ್ನೂ ವಲಸಿಗರು ಬಹುತೇಕ ಮುಂಬೈ ಮಹಾರಾಷ್ಟ್ರದವರಾಗಿದ್ದು ಅವರು ಪಟ್ಟಣಕ್ಕೆ ಪ್ರವೇಶದಂತೆ ಅಧಿಕಾರಿಗಳು ಮುಂಜಾಗೃತೆ ವಹಿಸಬೇಕು ಎಂಬುದು ಇನ್ನೂ ಕೆಲವರ ಹೇಳಿಕೆಯಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close