ಅಪರಾಧಕರ್ನಾಟಕ ಸುದ್ದಿ

ಕ್ರೈಂ ಸ್ಟೋರಿ; ಸಿನಿಮಾದಲ್ಲಿ ನೋಡಿದ ಘಟನೆಗಳು ನಿಜ ಜೀವನದಲ್ಲೂ ನಡೆಯುತ್ತಾ.?

— ಸಿರಾಜುದ್ದೀನ್ ಬಂಗಾರ್,ಸಂಪಾದಕರು

Source : NS18

ಸಿನಿಮಾದಲ್ಲಿ ನಡೆಯುವ ಘಟನೆಗಳು ನಿಜ ಜೀವನದಲ್ಲೂ ನಡೆಯುತ್ತಾ, ಎಂಬುದು ಈ ಸ್ಟೋರಿ ಮುಖಾಂತರ ಓದಿದ ನಂತರ ನಿಮಗೆ ಕ್ಲಿಯರ್ ಆಗಿ ಗೊತ್ತಾಗುತ್ತೆ. ಸಂಪೂರ್ಣವಾಗಿ ಈ ಸ್ಟೋರಿ ಓದಿ..

ಮೇ 7ರ ಬೆಳಗ್ಗೆ ಉತ್ತರಾಳ ಮನೆಯವರು ಎದ್ದು ನೋಡಿದಾಗ ಉತ್ತರಾ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹಾವು ಕಚ್ಚಿ ಆಕೆ ಸತ್ತಿರುವುದು ಖಚಿತವಾಗಿತ್ತು.

ತಿರುವನಂತಪುರಂ (ಮೇ 24): ಕಳೆದ 2 ತಿಂಗಳಲ್ಲಿ 2 ಬಾರಿ ಹಾವು ಕಚ್ಚಿದ ಕಾರಣಕ್ಕೆ ಕೇರಳದ ವಿವಾಹಿತೆಯೊಬ್ಬಳು ಸಾವನ್ನಪ್ಪಿದ್ದಳು. ಮೊದಲ ಬಾರಿ ತಕ್ಷಣ ಆಸ್ಪತ್ರೆಗೆ ಸೇರಿಸಿ, ವಿಷವನ್ನು ಹೊರಗೆ ತೆಗೆದಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಳು. ಆದರೆ, 2ನೇ ಬಾರಿ ಹಾವು ಕಚ್ಚಿದಾಗ ಆಕೆ ಕೊನೆಯುಸಿರೆಳೆದಿದ್ದಳು. ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಹಾವಾಡಿಗನಿಗೆ ಸುಪಾರಿ ನೀಡಿ ಆಕೆಯ ಗಂಡನೇ ಹಾವಿನ ಮೂಲಕ ಹೆಂಡತಿಯ ಕೊಲೆ ಮಾಡಿಸಿದ್ದ ಎಂಬ ಸತ್ಯಾಂಶ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮ್ಮ ಮಗಳ ಸಾವಿನ ಬಗ್ಗೆ ನಮಗೆ ಅನುಮಾನಗಳಿವೆ. ಇದು ಉದ್ದೇಶಪೂರ್ವಕವಾಗಿ ನಡೆದಿರುವ ಕೊಲೆ ಎಂದು ಮೃತ ಮಹಿಳೆಯ ಅಪ್ಪ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಮೃತ ಮಹಿಳೆ 25 ವರ್ಷದ ಉತ್ತರಾ ಎಂಬಾಕೆಯ ಸಾವಿನ ತನಿಖೆ ನಡೆಸಿದ ಕೇರಳ ಪೊಲೀಸರಿಗೆ ಅಚ್ಚರಿ ಕಾದಿತ್ತು.

2 ತಿಂಗಳ ಹಿಂದೆ ಹಾವು ಕಚ್ಚಿದಾಗ ಆಕೆಗೆ ಹಳ್ಳಿ ಮದ್ದು ಮಾಡಲಾಗಿತ್ತು. ಆ ಔಷಧಿಯ ಚಿಕಿತ್ಸೆ ನಡೆಯುತ್ತಿರುವಾಗಲೇ ಇನ್ನೊಂದು ಬಾರಿ ಹಾವು ಕಚ್ಚಿತ್ತು. ಮೇ 7ರಂದು ಆಕೆ ಸಾವನ್ನಪ್ಪಿದ್ದಳು. ಮೊದಲ ಬಾರಿಗೆ ಆಕೆ ಗಂಡನ ಮನೆಯಲ್ಲಿದ್ದಾಗ ಹಾವು ಕಚ್ಚಿತ್ತು. ನಂತರ ಅನುಮಾನ ಬರಬಾರದೆಂದು ಆಕೆ ತಂದೆಯ ಮನೆಯಲ್ಲಿದ್ದಾಗಲೇ ಹಾವು ಬಿಟ್ಟು ಕಚ್ಚುವಂತೆ ಪ್ಲಾನ್​ ಮಾಡಲಾಗಿತ್ತು. ಈ ಬಗ್ಗೆ ಅನುಮಾನ ಉಂಟಾಗಿ ಉತ್ತರಾಳ ಅಪ್ಪ ತಮ್ಮ ಮಗಳ ಗಂಡ ಸೂರಜ್ ಹಾಗೂ ಆತನ ಪೋಷಕರ ವಿರುದ್ಧ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ನಡೆಸಿದಾಗ ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಹಾವಾಡಿಗನಿಗೆ 10,000 ರೂ. ನೀಡಿದ್ದ ಸೂರಜ್ ತನ್ನ ಹೆಂಡತಿಯನ್ನು ಯಾರಿಗೂ ಅನುಮಾನ ಬಾರದಂತೆ ಕೊಲ್ಲಲು ಪ್ಲಾನ್ ಮಾಡಿದ್ದ. ಮೊದಲ ಬಾರಿಗೆ ತನ್ನ ಬೆಡ್​ರೂಮಿಗೇ ಹಾವನ್ನು ತೆಗೆದುಕೊಂಡು ಹೋಗಿದ್ದ ಸೂರಜ್ ಅಲ್ಲಿ ಆಕಸ್ಮಿಕವಾಗಿ ಬಂದ ಹಾವು ಹೆಂಡತಿಯನ್ನು ಕಚ್ಚಿದೆ ಎಂದು ಎಲ್ಲರ ಬಳಿ ಹೇಳಿದ್ದ. ಕಳೆದ 5 ತಿಂಗಳಿಂದ ಹೆಂಡತಿಯ ಕೊಲೆಗೆ ಪ್ಲಾನ್​ ರೂಪಿಸಿದ್ದ ಆತ ಹಾವನ್ನು ಮುಂದಿಟ್ಟುಕೊಂಡು ಕೊಲೆ ಮಾಡಲು ನಿರ್ಧರಿಸಿದ್ದ. ಅದಕ್ಕಾಗಿ ಆಕೆ ಆಕೆಯ ಅಪ್ಪನ ಮನೆಯಲ್ಲಿದ್ದಾಗ ಆಕೆಯ ರೂಮಿನೊಳಗೆ ಹಾವನ್ನು ಬಿಟ್ಟು 2ನೇ ಬಾರಿಗೆ ಕೊಲೆ ಪ್ರಯತ್ನ ಮಾಡಿದ್ದ.

ಮೇ 7ರ ಬೆಳಗ್ಗೆ ಉತ್ತರಾಳ ಮನೆಯವರು ಎದ್ದು ನೋಡಿದಾಗ ಉತ್ತರಾ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹಾವು ಕಚ್ಚಿ ಆಕೆ ಸತ್ತಿರುವುದು ಖಚಿತವಾಗಿತ್ತು. ಆಕೆಯ ಮನೆಯವರು ಉತ್ತರಾಳ ರೂಮಿಗೆ ಹೋಗಿ ನೋಡಿದಾಗ ಅಲ್ಲಿ ದೊಡ್ಡದಾದ ಹಾವು ಇರುವುದು ಗೊತ್ತಾಗಿತ್ತು. ನಂತರ ಸೂರಜ್ ಮನೆಯವರ ಮುಂದೆ ಆ ಹಾವನ್ನು ಕೊಂದುಹಾಕಿದ್ದ. ಉತ್ತರಾ ಮತ್ತು ಸೂರಜ್ 2 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ 1 ವರ್ಷದ ಮಗನಿದ್ದಾನೆ. ಇದೀಗ ಸೂರಜ್​ ಮತ್ತು ಹಾವಾಡಿಗನನ್ನು ಬಂಧಿಸಲಾಗಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close