ಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿ

ಇಂದು ಸಂಪೂರ್ಣ ಲಾಕ್​ಡೌನ್​; ಇಡೀ ದಿನ ಕರ್ಫ್ಯೂ; ಏನಿರುತ್ತೆ? ಏನಿರಲ್ಲ?

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕ-ಜ್ವಾ.

ಮಾರಕ ಕೊರೋನಾ ವೈರಸ್​​ ತಹಬದಿಗೆ ತರಲು ಇಡೀ ದೇಶಾದ್ಯಂತ ನಾಲ್ಕನೇ ಹಂತದ ಲಾಕ್​ಡೌನ್​​ ಜಾರಿಯಲ್ಲಿದೆ. ಹೀಗಿದ್ದರೂ ಕೆಲವು ಕ್ಷೇತ್ರಗಳು ಹೊರತುಪಡಿಸಿ ಬಹುತೇಕ ಎಲ್ಲಾ ಸೇವೆಗಳು ಲಭ್ಯ ಇವೆ. ಈ ಮೂಲಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಅನುವು ಮಾಡಿ ಕೊಡಲಾಗಿದೆ. ಇದರ ನಡುವೆ ಭಾನುವಾರ ಅಂದರೆ ಇಂದು ಮಾತ್ರ ಸಂಪೂರ್ಣ ಲಾಕ್​ಡೌನ್​​ ಮಾಡಲಾಗಿದೆ.

ಇನ್ನು, ಭಾನುವಾರ ಜನರ ಓಡಾಟ ಸಹಜವಾಗಿ ಜಾಸ್ತಿಯಿರಲಿದೆ. ಇದರಿಂದ ಕೊರೋನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಇಡೀ ಸಂಡೇ ಸಂಪೂರ್ಣ ಲಾಕ್​​ಡೌನ್​​ ಮಾಡುವ ನಿರ್ಧಾರ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಜತೆಗೆ ಯಾರು ಮನೆಯಿಂದ ಬಾರದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಕರ್ಫ್ಯೂ ಜಾರಿ ಮಾಡಲಾಗಿದೆ.

ಭಾನುವಾರ ಏನಿರುತ್ತೆ? ಏನು ಇರಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಏನು ಇರುತ್ತೆ ಏನು ಇರುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಏನಿರುತ್ತೆ?

ಹಣ್ಣು ತರಕಾರಿ ,ಮೊಟ್ಟೆ ಮಾಂಸ,ದಿನಸಿ ಪದಾರ್ಥ ಅಂಗಡಿ

ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ

ಮಾಧ್ಯಮ

ಡಾಕ್ಟರ್ಸ್, ನರ್ಸ್​​, ಆಂಬುಲೆನ್ಸ್ ಓಡಾಟಕ್ಕೆ ಅವಕಾಶ

ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ

ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ


ಏನಿರಲ್ಲ?

ಸಾರ್ವಜನಿಕರ ಸಂಚಾರ ನಿರ್ಬಂಧ

ಅಗತ್ಯ ವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಗಟ್ಟು ಬಂದ್

ನಗರದ ಎಲ್ಲಾ ಪ್ರಮುಖ ರಸ್ತೆ ಕ್ಲೋಸ್

ಬಾರ್, ಸೆಲ್ಯೂನ್, ಪ್ಯಾನ್ಸಿ ಸ್ಟೋರ್ ಬಂದ್

ಎಲ್ಲಾ ಗಾರ್ಮೆಂಟ್ಸ್ ಪ್ಯಾಕ್ಟರಿ, ಎಲ್ಲಾ ಕಾರ್ಖಾನೆಗಳು, ಕಂಪನಿಗಳು ಕ್ಲೋಸ್

ಎಲ್ಲಾ ಪಾರ್ಕ್​ಗಳಿಗೂ ಬೀಗ. ಜಾಗಿಂಗ್,ವಾಕಿಂಗ್​ಗೆ ಇಲ್ಲ ಅವಕಾಸ

ಆಟೋ ಟ್ಯಾಕ್ಸಿ ,ಕ್ಯಾಬ್ ಸೇವೆ ಬಂದ್

ಖಾಸಗಿ ವಾಹನ ಬಳಸಿ ಓಡಾಡುವಂತಿಲ್ಲ

Continue

Related Articles

Leave a Reply

Your email address will not be published. Required fields are marked *

Back to top button
Close
Close