ಅಪರಾಧ

ಸಿಗರೇಟ್ ಲಂಚ​​ ಪ್ರಕರಣ: ಮಧ್ಯವರ್ತಿಗಳ ಮಾತು ಕೇಳಿ ಕೆಟ್ಟ ಪೊಲೀಸ್​​ ಅಧಿಕಾರಿಗಳು; ವಾಟ್ಸಪ್​​ ಕಾಲ್​​ ಮೂಲಕವೇ ನಡೆದಿತ್ತು ಕೋಟಿ ಕೋಟಿ ಡೀಲ್​​

ವರದಿ : ಮಂಜುನಾಥ

Source : NS18

ಬೆಂಗಳೂರು(ಮೇ.23): ಏಪ್ರಿಲ್​​​​ 30ನೇ ತಾರೀಕಿನಂದು ನಗರದ ಕೆ.ಆರ್ ಪುರಂ‌ ಠಾಣಾ ವ್ಯಾಪ್ತಿಯಲ್ಲಿ ಲಾಕ್​​ಡೌನ್ ಸಂದರ್ಭದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸಿಗರೇಟ್ ಹಾಗೂ ತಂಬಾಕು ಗೋಡೌನ್​​​ ಮೇಲೆ ಸಿಸಿಬಿ ಎಸಿಪಿ ಪ್ರಭುಶಂಕರ್ ಅಂಡ್ ಟೀಂ ದಾಳಿ ಮಾಡಿದ್ದರು. ದಾಳಿ ಬಳಿಕ ಸಿಗರೇಟ್ ಮಾರಾಟ ಮಾಡಲು ಏಜೆಂಟ್​ಗಳಿಂದ ಸುಮಾರು 60 ಲಕ್ಷ ಲಂಚ ಸಹ‌ ಪಡೆದಿದ್ದರು.

ಇದರ ಜತೆಗೆ ಮತ್ತೆ ಎಂಟು ಕಡೆಗಳಲ್ಲಿ ದಾಳಿ ಮಾಡಿ ಕೇಸ್ ದಾಖಲು ಮಾಡದೆ ಒಂದೊಂದು ಏಜೆನ್ಸಿ ಬಳಿ 14 ಲಕ್ಷದಂತೆ ಲಂಚವನ್ನು ಪಡೆದಿದ್ದರು. ಇನ್ನು ಇದೆಲ್ಲಾ ಡೀಲ್​​ಗಳು ಆಗಿದ್ದು ನಾಲ್ವರು ಮಧ್ಯವರ್ತಿಗಳಿಂದ. ಕೇಳಿದಷ್ಟು ಹಣ ಯಾವಾಗ ಕೊಟ್ರೋ ಆಗ್ಲೆ ನೋಡಿ ಇನ್ನಷ್ಟು ಹಣವನ್ನು ಪೀಕಲು ಶುರು ಮಾಡಿದ್ರು.

ಇದಾದ ನಂತರ ಎಸಿಪಿ ಪ್ರಭುಶಂಕರ್ ಫ್ಲಾನ್​​ನಂತೆ ವಾಟ್ಸಪ್ ಕಾಲ್ ಮೂಲಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟರು. ಜೊತೆಗೆ ಮೊದಲು ಕುದುರಿಸಿದ್ದ ಡೀಲ್ ಸಹ ಇದೇ ವಾಟ್ಸಪ್ ಕಾಲ್ ಮೂಲಕವೇ ಮಾಡಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಹಣವನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎನ್ನಲಾಗಿತ್ತು.

ಮೊದಲಿಗೆ 3 ಸಿಗರೇಟ್ ಏಜೆನ್ಸಿಗಳಿಂದ 30 ಲಕ್ಷದಂತೆ ಹಣವನ್ನು ಪೀಕಿದ್ದು ಮತ್ತಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಆಗಲೂ ಹಣವನ್ನು ಕೊಡಲು ಸಿಗರೇಟ್ ಏಜೆನ್ಸಿಯವರು ಒಪ್ಪಿಕೊಂಡಿದ್ದರು. ಹೀಗೆ ಪದೇಪದೇ ಮಧ್ಯವರ್ತಿಗಳು ಕಾಲ್ ಮೇಲೆ ಕಾಲ್ ಮಾಡ್ತಿದ್ದು, ಕೊನೆಗೆ ಕಾಟ ತಾಳಲಾರದೆ ಪೊಲೀಸ್ ದೂರು ಸಹ ನೀಡಲು ನಿರ್ಧಾರ ಮಾಡಿದ್ದರು.

ಇನ್ನು, ಅಷ್ಟೊತ್ತಿಗೆ ಸಿಸಿಬಿಯ ಒಸಿಡಬ್ಲ್ಯೂ ಟೀಂನಿಂದ ಮತ್ತೆ ರೈಡ್ ಆಗಿದ್ದು, ಈ ವೇಳೆ ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್​​ಗಳಾದ ಅಜಯ್, ನಿರಂಜನ್ ಹಾಗೂ ಉಳಿದ ನಾಲ್ವರ ಮಧ್ಯವರ್ತಿಗಳ ಲಂಚಾವತಾರ ಬಯಲಾಗಿದೆ. ಇದರ ಜೊತೆಗೆ ನಕಲಿ ಮಾಸ್ಕ್ ತಯಾರು ಮಾಡ್ತಿದ್ದ ಕಾರ್ಖಾನೆಗಳ ಮೇಲೆಯೂ ದಾಳಿ ಮಾಡಿದ್ದು. ಅಲ್ಲಿಯೂ ಕೇಸ್ ದಾಖಲು ಮಾಡದೆ ಲಂಚ ಪಡೆದಿದ್ದಾರೆ.

ಈ ಸಂಬಂಧ ಕಾಟನ್​​ಪೇಟೆ ಠಾಣೆಯಲ್ಲಿಯೂ ಕೇಸ್ ದಾಖಲಾಗಿದೆ.‌ ಇದೆಲ್ಲ ಮಾಹಿತಿ ಪಡೆದ ಡಿಜಿ ಐಜಿಪಿ ಪ್ರವೀಣ್ ಸೂದ್ ಎಸಿಬಿಗೆ ತನಿಖೆ ಮಾಡುವಂತೆ ಆದೇಶ ನೀಡಿದ್ದು, ಅದಂರತೆಯೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದ್ಯ ಏಳು ಜನರ ಮನೆಯಲ್ಲಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close