ಕರ್ನಾಟಕ ಸುದ್ದಿ

ಭಾರತದಲ್ಲಿ ಕೋರೊನಾ ಪ್ರಕರಣ: ಹೀಗಿದೆ ರಾಜ್ಯವಾರು ದಾಖಲಾದ ಸೋಂಕಿತರ ವಿವರ

–ಸಿರಾಜುದ್ದೀನ್ ಬಂಗಾರ್ SRC: ANI

ಇತ್ತೀಚೆಗಿನ ಬುಲೆಟಿನ್​​ ಪ್ರಕಾರ ಇನ್ನು ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಮಂದಿಗೆ ಕೊರೋನಾ ಬಂದಿದೆ? ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ ಎಂಬ ರಾಜ್ಯವಾರು ವಿವರ ಹೀಗಿದೆ.

ಲಾಕ್​​ಡೌನ್​​ ಜಾರಿಯಲ್ಲಿದ್ದರೂ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ.‌‌ ಈಗಾಗಲೇ  ವೈರಾಣು ಪೀಡಿತರ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಕೂಡ 3 ಸಾವಿರದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ಮಾಡಿದೆ. 

ಇನ್ನು, ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ನೋಡಿದರೆ ಮತ್ತಷ್ಟು ಆತಂಕ ಶುರುವಾಗಲಿದೆ. ಪ್ರತಿನಿತ್ಯ ಈ ಮಾರಕ ಕೊರೋನಾಗೆ ಜನ ಬಲಿಯಾಗುತ್ತಲೇ ಇದ್ದಾರೆ. ಇತ್ತೀಚೆಗಿನ ಬುಲೆಟಿನ್​​ ಪ್ರಕಾರ ಇನ್ನು ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಮಂದಿಗೆ ಕೊರೋನಾ ಬಂದಿದೆ? ನಿನ್ನೆ ಎಷ್ಟೆಷ್ಟು ಪ್ರಕರಣಗಳು ವರದಿಯಾಗಿವೆ? ಒಟ್ಟಾರೆ ಎಷ್ಟು ಮಂದಿ ಕೊರೊನಾ ಪೀಡಿತರಿದ್ದಾರೆ ಎಂಬ ರಾಜ್ಯವಾರು ವಿವರ ಹೀಗಿದೆ.

ಕೊರೊನಾ ಪೀಡಿತರ ರಾಜ್ಯವಾರು ವಿವರ

ಮಹಾರಾಷ್ಟ್ರ: 2,940 ಹೊಸ ಪ್ರಕರಣಗಳು; ಒಟ್ಟು 44,582

ತಮಿಳುನಾಡು: 786 ಹೊಸ ಪ್ರಕರಣಗಳು; ಒಟ್ಟು 14,753

ಗುಜರಾತ್: 363 ಹೊಸ ಪ್ರಕರಣಗಳು; ಒಟ್ಟು 13,273

ರಾಜಸ್ಥಾನ: 267 ಹೊಸ ಪ್ರಕರಣಗಳು; ಒಟ್ಟು 6,494

ಉತ್ತರ ಪ್ರದೇಶ: 263 ಹೊಸ ಪ್ರಕರಣಗಳು; ಒಟ್ಟು 5,619

ಪಶ್ಚಿಮ ಬಂಗಾಳ: 135 ಹೊಸ ಪ್ರಕರಣಗಳು; ಒಟ್ಟು 3,322

ಬಿಹಾರ: 118 ಹೊಸ ಪ್ರಕರಣಗಳು; ಒಟ್ಟು 2,105

ಪಂಜಾಬ್: 143 ಸಕ್ರಿಯ ಪ್ರಕರಣಗಳು; ಒಟ್ಟು 2,029

ತೆಲಂಗಾಣ: 62 ಹೊಸ ಪ್ರಕರಣಗಳು ಒಟ್ಟು 1,761

ಕರ್ನಾಟಕ: 138 ಹೊಸ ಪ್ರಕರಣಗಳು; ಒಟ್ಟು 1,743

ಜಮ್ಮು ಮತ್ತು ಕಾಶ್ಮೀರ: 40 ಹೊಸ ಪ್ರಕರಣಗಳು; ಒಟ್ಟು 1,489

ಹರಿಯಾಣ: 37 ಹೊಸ ಪ್ರಕರಣಗಳು; ಒಟ್ಟು 1,067

ಕೇರಳ: 42 ಹೊಸ ಪ್ರಕರಣಗಳು; ಒಟ್ಟು 732

ಜಾರ್ಖಂಡ್: 15 ಹೊಸ ಪ್ರಕರಣಗಳು; ಒಟ್ಟು 323

ಅಸ್ಸಾಂ: 29 ಹೊಸ ಪ್ರಕರಣಗಳು; ಒಟ್ಟು 259

ಹಿಮಾಚಲ ಪ್ರದೇಶ: 14 ಹೊಸ ಪ್ರಕರಣಗಳು; ಒಟ್ಟು 166

ಉತ್ತರಾಖಂಡ: 5 ಹೊಸ ಪ್ರಕರಣಗಳು; ಒಟ್ಟು 153

ಗೋವಾ: 2 ಹೊಸ ಪ್ರಕರಣಗಳು; ಒಟ್ಟು 54

Continue

Related Articles

Leave a Reply

Your email address will not be published. Required fields are marked *

Back to top button
Close
Close