ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ಲಾಕ್ ಡೌನ್ ನಡುವೆ ಆರ್ ಬಿಐ ಗವರ್ನರ್ 3ನೇ ಪತ್ರಿಕಾಗೋಷ್ಠಿ

Posted By : Sirajuddin Bangar

Source: NS18

ನವದೆಹಲಿ(ಮೇ 22): ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇವತ್ತು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್ ಬಿಕ್ಕಟ್ಟು ಉದ್ಭವಿಸಿದ ಬಳಿಕ ಆರ್​ಬಿಐ ಗವರ್ನರ್ ಅವರು ಪತ್ರಿಕಾ ಗೋಷ್ಠಿ ನಡೆಸುತ್ತಿರುವುದು ಇದು ಮೂರನೇ ಬಾರಿ. ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಬಳಿಕ ಅವರು ಮೊದಲ ಬಾರಿಗೆ ಪತ್ರಿಕಾ ಗೋಷ್ಠಿ ಕರೆದಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಆ 20 ಲಕ್ಷ ಕೋಟಿ ಪ್ಯಾಕೇಜ್​ನ ವಿವಿಧ ವಿವರಗಳನ್ನು ಈಗಾಗಲೇ ನೀಡಿದ್ಧಾರೆ. ಈಗ ಆರ್​ಬಿಐ ಗವರ್ನರ್ ಅವರು ಇವತ್ತು ಏನು ಪ್ರಕಟಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಕೋವಿಡ್ ಬಿಕ್ಕಟ್ಟಿನ ವೇಳೆ ಈ ಮೊದಲು ನಡೆಸಿದ ಹಿಂದಿನ ಎರಡು ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಮುಖ್ಯಸ್ಥರು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಲು ವಿವಿಧ ಕ್ರಮಗಳನ್ನು ಪ್ರಕಟಿಸಿದ್ದರು. 75 ಬೇಸಿಸ್ ಪಾಯಿಂಟ್​ಗಳ ಇಳಿಕೆ, ಸಾಲದ ಕಂತು ಕಟ್ಟಲು 3 ತಿಂಗಳು ಮುಂದೂಡಿಕೆ ಇತ್ಯಾದಿ ಕ್ರಮಗಳು ಬಂದಿದ್ದವು.

ಇವತ್ತು ಕೂಡ ಶಕ್ತಿಕಾಂತ್ ದಾಸ್ ಅವರು ಸಾಲದ ಕಂತ ಕಟ್ಟುವ ಅವಧಿಯನ್ನು ಇನ್ನಷ್ಟು ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ. ಯಾಕೆಂದರೆ, ಮೇ 31ರವರೆಗೆ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗುವ ಸಂಭವ ಇದೆ. ಜನಸಾಮಾನ್ಯರ ಹಿತದೃಷ್ಟಿಯ ಜೊತೆಗೆ ಉದ್ಯಮ ವಲಯದಿಂದ ಬಂದಿರುವ ಮನವಿಯಿಂದಲೂ ಮೂರು ತಿಂಗಳ ಲೋನ್ ಮೊರಾಟೋರಿಯಮ್​ಗೆ ಆರ್​ಬಿಐ ನಿರ್ಧರಿಸಬಹುದು. ಲಾಕ್ ಡೌನ್ ಮುಗಿದು ಉದ್ಯಮವಲಯ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಗಬಹುದು. ಆ ವೇಳೆಗೆ ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಸರಿಯಾಗಿ ಬಡ್ಡಿ ಕಟ್ಟಲು ಅಥವಾ ಲೋನ್ ಕಂತು ಕಟ್ಟಲು ಕಂಪನಿಗಳಿಗೆ ಸಾಧ್ಯವಾಗದೇ ಹೋಗಬಹುದು. ಈ ದೃಷ್ಟಿಯಿಂದ ಸಾಲದ ಹೊರೆಯನ್ನು ಮುಂದೂಡಿಕೆ ಮಾಡುವ ಸಾಧ್ಯತೆಯೇ ಹೆಚ್ಚಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (NBFCs) ಹಣದ ನೆರವು ಒದಗಿಸುವ ಕ್ರಮಗಳನ್ನು ಮತ್ತೆ ಘೋಷಿಸಬಹುದು. ಹಾಗೆಯೇ, ಸಣ್ಣ ಉದ್ಯಮ ಘಟಕಗಳಿಗೂ ಅವರು ಧನಸಹಾಯ ನೀಡಬಹುದು. ಇದರ ಜೊತೆಗೆ, ಪ್ರಧಾನಿ ಪ್ರಕಟಿಸಿದ 20 ಲಕ್ಷ ಕೋಟಿ ರೂ ಪ್ಯಾಕೇಜ್​ ಬಗ್ಗೆ ಶಕ್ತಿಕಾಂತ್ ದಾಸ್ ತಮ್ಮ ಅಭಿಪ್ರಾಯಗಳನ್ನ ಹೇಳಬಹುದು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close