ಕರ್ನಾಟಕ ಸುದ್ದಿ

ಕ್ರೈಂ ನ್ಯೂಸ್ ಕ-ಜ್ವಾ ;ಬೆಳಗಾವಿಯ ಸರ್ಕಾರಿ ಕಚೇರಿಯನ್ನೇ ಗಾಂಜಾ ಅಡ್ಡ ಮಾಡಿಕೊಂಡ ಪುಂಡರು; ನಾಲ್ವರ ಬಂಧನ..!

  • ಸಿರಾಜುದ್ದಿನ್ ಬಂಗಾರ್
  • Source : NS18

ಗಾಂಜಾ ನಶೆಯಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಯುವಕನೋರ್ವನಿಗೆ ಚೂರಿ ಇರಿದಿರುವ ಘಟನೆ ಬೆಳಗಾವಿಯ ಶಿವಾಜಿ ನಗರದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಅನಿಕೇತ ಮಧುಮತ್ ಎಂಬಾತನಿಗೆ ಚೂರಿಯಿಂದ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅನಿಕೇತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಮಾರ್ಕೆಟ್ ಠಾಣೆಯ ಪೊಲೀಸರು ಶಿವಾಜಿ ಘಾಟಗೆ, ಸಂಭಾಜಿ ಘಾಟಗೆ, ಅಜೇಯ ಕನ್ನುಕರ ಹಾಗೂ ವಿಷ್ಣು ಚವ್ಹಾಣ್ ಎಂಬುವರನ್ನು ಬಂಧಿಸಿದ್ದಾರೆ.‌

ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಆವರಣವನ್ನು ಕೆಲ ಪುಂಡರು ಗಾಂಜಾ ಸೇವನೆ ಅಡ್ಡೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ ‌ಸಂಜೆ 7 ರಿಂದ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಈ ಪುಂಡರು ಮಾತ್ರ ರಾತ್ರಿ ಹೊತ್ತಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಆವರಣ ಹಾಗೂ ಕಟ್ಟಡದ ಟೇರಸ್ ಮೇಲೆ ಗಾಂಜಾ ಸೇವಿಸಿ ಸ್ಥಳೀಯರಿಗೆ ಕಿರಿಕಿರಿ ಮಾಡುತ್ತಿದ್ದರು. ಪುಂಡರ ಕಾಟಕ್ಕೆ ಬೇಸತ್ತು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ರಿಮ್ಯಾಂಡ್ ಹೋಮ್ ಇದೆ. ಇಲ್ಲಿನ ಆರೋಪಿಗಳು ಕೂಡ ಪುಂಡರ ಜತೆಗೆ ಶಾಮೀಲಾಗಿ ಸ್ಥಳೀಯರಿಗೆ ಕಿರಿಕಿರಿ ನೀಡುತ್ತಿದ್ದಾರೆಂಬ ಆರೋಪವೂ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತವರಲ್ಲಿ ಈ ರೀತಿಯ ಅನೈತಿಕ ಚಟುವಟಿಕೆ ನಡೆಯತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಮಾರ್ಕೆಟ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜ ವರವಟ್ಟಿ, ರಾತ್ರಿ ಬಡಾವಣೆಯ ಹುಡುಗರು ಬಡೆದಾಡಿಕೊಂಡಿದ್ದಾರೆಂಬ ಮಾಹಿತಿ ಬಂದಿದೆ. ರಿಮ್ಯಾಂಡ್ ರೂಮ್ ಸೂಪರಿಂಟೆಂಡೆಂಟ್ ಗೆ ಈ ಬಗ್ಗೆ ಹೇಳುತ್ತೇನೆ. ಸ್ಥಳೀಯ ನಿವಾಸಿಗಳು ಯಾರೂ ಸಹ ಅನವಶ್ಯಕವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಕಟ್ಟಡದ ಮೇಲೆ ಬರಬಾರದು. ಇನ್ಮುಂದೆ ಹಾಗೇನಾದರೂ ಕಂಡರೆ ಫೋಟೋ ತಗೆದು ಪೊಲೀಸರಿಗೆ ದೂರು ನೀಡೋದಾಗಿ ತಿಳಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ ಗಾಂಜಾ ಮತ್ತಿನಲ್ಲಿ ನಿನ್ನೆ ಯುವಕನೋರ್ವನಿಗೆ ಚಾಕು ಇರಿದಿದ್ದಾರೆ. ಚವ್ಹಾಟ್ ಗಲ್ಲಿಯ ಹುಡುಗರು ಗಲಾಟೆ ಮಾಡಿದ್ದಾರೆ. ನೈಜವಾದ ಆರೋಪಿಗಳನ್ನು ಹಿಡಿದು ಶಿಕ್ಷೆಗೊಳಪಡಿಸಬೇಕು ಹಾಗೂ ರಿಮ್ಯಾಂಡ್ ರೂಮ್ ಕಟ್ಟಡ ಇರುವ ಆವರಣದಲ್ಲಿ ಹೊರಗಿನ ಜನರು ಬರದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close