ಕರ್ನಾಟಕ ಸುದ್ದಿ

ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟ: ಬೆಂಗಳೂರಿನಲ್ಲಿ ಕ್ಯಾಬ್ ಚಾಲಕ ಆತ್ಮಹತ್ಯೆ

ವರದಿ: ಸಿರಾಜುದ್ದೀನ್ ಬಂಗಾರ್

ಬೆಂಗಳೂರು(ಮೇ 21): ಲಾಕ್ ಡೌನ್​ನಿಂದಾಗಿ ಅನೇಕ ಉದ್ಯಮಗಳು ನೆಲಕಚ್ಚಿವೆ. ಅನೇಕ ಮಂದಿ ಕೆಲಸ ಇಲ್ಲದೆ ತತ್ತರಿಸಿದ್ದಾರೆ. ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಆಟೋ, ಕ್ಯಾಬ್ ಚಾಲಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಆರ್ಥಿಕ ಸಂಕಷ್ಟಕ್ಕೆ ನಲುಗಿಹೋಗಿದ್ದಾರೆ. ತತ್​ಪರಿಣಾಮವಾಗಿ ಬೆಂಗಳೂರಿನಲ್ಲಿ ಮೊದಲ ಚಾಲಕನ ಬಲಿಯಾಗಿದೆ. ರಾಮಮೂರ್ತಿನಗರದ ನಿವಾಸಿ ಮಣಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕ್ಯಾಬ್ ಚಾಲಕರಾಗಿದ್ದ ಮಣಿ ಜೀವನ ನಿರ್ವಹಣೆ ಸಾಧ್ಯವಾಗದೆ ಹತಾಶೆಯಲ್ಲಿ ಸಾವಿನ ಕಾಲಿಗೆ ಎರಗಿದ್ಧಾರೆ. ಜೀವನ ನಡೆಸುವುದು ಕಷ್ಟವಾಗಿದೆ ಎಂದು ಇವರು ಡೆತ್ ನೋಟ್ ಬರೆದಿಟ್ಟಿರುವುದು ತಿಳಿದುಬಂದಿದೆ.

ಇವರ ಮನೆಯಲ್ಲಿ ಕಷ್ಟದ ಪರಿಸ್ಥಿತಿ ಇತ್ತು. ವಾಹನದ ಇಎಂಐ ಕೂಡ ಪಾವತಿಸಲು ಸಾಧ್ಯವಿರಲಿಲ್ಲ. ಮನೆ ಮಾಲೀಕನಿಂದ ಬಾಡಿಗೆ ಕಟ್ಟಲು ಒತ್ತಡ ಇತ್ತೆನ್ನಲಾಗಿದೆ.

ಲಾಕ್ ಡೌನ್ ಘೋಷಣೆಯಾದ ಬಳಿಕ ಕ್ಯಾಬ್​ಗಳ ಸೇವೆ ಸ್ಥಗಿತಗೊಂಡವು. ಬಹುತೇಕ ಕ್ಯಾಬ್ ಚಾಲಕರು ಬೆಂಗಳೂರಿನಲ್ಲಿ ಸ್ವಂತ ಸೂರು ಹೊಂದಿದವರಲ್ಲ. ಮನೆ ಬಾಡಿಗೆ, ವಾಹನ ಇಎಂಐ ಪ್ರತಿ ತಿಂಗಳೂ ಕಟ್ಟಲೇಬೇಕಾದ ಸ್ಥಿತಿ. ಕ್ಯಾಬ್ ಓಡಿಸದೇ ವರಮಾನವಿಲ್ಲ. ಈ ಹಿನ್ನೆಲೆಯಲ್ಲಿ ಚಾಲಕರು ಅಕ್ಷರಶಃ ಬೀದಿಗೆ ಬೀಳುವಂಥ ದುಸ್ತರ ಸ್ಥಿತಿ ಇದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close