ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಮಂಡ್ಯಗೆ ಕಂಟಕವಾಗುತ್ತಿದೆ ಮುಂಬೈ ಸೋಂಕು; ಹೆಚ್ಚಾದ ಸೋಂಕಿತರ ಸಂಖ್ಯೆಯಿಂದ ಆತಂಕದಲ್ಲಿ ಜನರು

Posted By : Sirajuddin Bangar

Source: NS18

ಮಂಡ್ಯ(ಮೇ. 21): ಸಕ್ಕರೆನಾಡು ಮಂಡ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ಮುಂಬೈ ಸೋಂಕಿತರ ಸಂಖ್ಯೆ ಬೆಚ್ಚಿ ಬೀಳಿಸುತ್ತಿದ್ರೆ, ಸಕ್ಕರೆನಾಡು ಮಂಡ್ಯದಲ್ಲಿ ಇಂದು ಹೊಸದಾಗಿ ಕಂಡು ಬಂದ 15 ಪ್ರಕರಣದಲ್ಲಿ ಪಿ. 1471 ರ ಪ್ರಕರಣ ಇದೀಗ ಜಿಲ್ಲಾಡಳಿತಕ್ಕೆ ಕಂಟಕ ತರುವಂತಿದೆ. ಜಿಲ್ಲೆಯಲ್ಲಿ‌ ಸೋಂಕಿತರ ಸಂಖ್ಯೆ ಇಂದು 183 ಕ್ಕೆ ಏರಿಕೆಯಾಗಿದೆ. ಇಂದು ಕಂಡು ಬಂದ 15 ಪ್ರಕರಣಗಳಲ್ಲಿ 14 ಪ್ರಕರಣಕ್ಕೆ ಮುಂಬೈ ಸೋಂಕು ಕಾರಣವಾಗಿದೆ. 11 ಜನರಿಗೆ ಮುಂಬೈ ಪ್ರಯಾಣದಿಂದ ಸೋಂಕು ಹರಡಿದ್ರೆ, ಪೆ. 869 ಸೋಂಕಿತನಿಂದ ಮೂವರಿಗೆ  ಸೋಂಕು ಹರಡಿದೆ. 1 ಸೋಂಕಿನ‌ ಮೂಲ ಪತ್ತೆ ಹಚ್ಚುವ ಕೆಲಸದಲ್ಲಿ ಜಿಲ್ಲಾಡಳಿತ ನಿರಂತರವಾಗಿದೆ.

ಒಂದು‌ ಕಡೆ ಮುಂಬೈ ಸೋಂಕು ಜಿಲ್ಲಾಡಳಿತಕ್ಕೆ ಒಂದು ರೀತಿಯ ತಲೆ ನೋವಾದ್ರೆ ಇಂದು ಪತ್ತೆಯಾಗದ ಮೂಲದ  ಮತ್ತೊಂದು ಪಾಸಿಟಿವ್ ಪ್ರಕರಣ ಜಿಲ್ಲಾಡಳಿತವನ್ನು ಬೆಚ್ಚಿ ಬೀಳಿಸಿದೆ. ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಪೆ.1471 ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕೇಳಿ ಜಿಲ್ಲಾಡಳಿತ ಕಂಗಾಲಾಗಿದೆ. ಪೆ.1471 ಮಳವಳ್ಳಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಗೂ ಇದೀಗ ಕೊರೋನಾ ಕಾಣಿಸಿಕೊಂಡಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದ್ರೆ, ಈತನ‌ ಟ್ರಾವೆಲ್ ಹಿಸ್ಟರಿಯಿಂದ 500 ಕ್ಕೂ ಹೆಚ್ಚು ಜನರು ಕ್ವಾರೆಂಟೈನ್​ಗೆ ಒಳಗಾಗಲಿದ್ದಾರೆ.

ಈ ಅಧಿಕಾರಿ ತಾಲೂಕಿನ‌ ಎಲ್ಲಾ ಅಧಿಕಾರಿಗಳ ಜೊತೆ ಪ್ರಾಥಮಿಕ‌ ಸಂಪರ್ಕ ಹೊಂದಿರುವುದು ಇದೀಗ ತಾಲೂಕು ಆಡಳಿತಕ್ಕೆ ಕ್ವಾರೆಂಟೈನ್ ಭಯ ಎದುರಾಗಿದೆ. ತಹಶೀಲ್ದಾರ್ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೋಂದು ವಿಷಯ ಅಂದ್ರೆ ಈತ ಕಳೆದ ಸೋಮವಾರ ಕಿರುಗಾವಲು ಗ್ರಾಮದಲ್ಲಿ ತನ್ನ ಮನೆಯ ಗೃಹಪ್ರವೇಶ ಮಾಡಿ ಊರಿನ‌ ಜನರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಇದಲ್ಲದೆ ಬುಧವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಂಬಂಧಿಕರೊಬ್ಬರ ಮದುವೆಗೆ ಕುಟುಂಬ ಸಮೇತ ಹೋಗಿ ಬಂದಿರುವ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.

ಸದ್ಯ ಸೋಂಕಿತ ಅಧಿಕಾರಿಯ ಟ್ರಾವೆಲ್ ಹಿಸ್ಟರಿ ಆಧರಿಸಿ ಪ್ರಾಥಮಿಕ ಮತ್ತು ಸೆಕಂಡರಿ ಕಾಂಟ್ಯಾಕ್ಟ್ ಗಳನ್ನು ಕ್ವಾರೆಂಟೈನ್ ಗೆ ಒಳಪಡಿಸಲು ಅಧಿಕಾರಿಗಳು‌ ನಿರ್ಧರಿಸಿದ್ದಾರೆ. ಇವನ ಪ್ರಾಥಮಿಕ, ಸೆಂಕಡರಿ ಸಂಪರ್ಕದಲ್ಲಿ 500 ಕ್ಕು ಹೆಚ್ಚು ಜನರಿರುವ ಮಾಹಿತಿ ಪಡೆದು ಅಧಿಕಾರಿಗಳು ಕ್ವಾರೆಂಟೈನ್ ಒಳಪಡಿಸಲು‌ ಮುಂದಾಗಿದ್ದಾರೆ. ಅಲ್ಲದೇ ಈ ಅಧಿಕಾರಿಗೆ ಸೋಂಕು ‌ಹೇಗೆ ತಗುಲಿತು ಎನ್ನುವುದರ ತನಿಖೆ ಮಾಡುತ್ತಿದ್ದಾರೆ.

ಇನ್ನು ಮಳವಳ್ಳಿ ತಾಲೂಕಿನ ಸಿಡಿಪಿಒ ಅಧಿಕಾರಿಗೆ ಕೊರೋನಾ ಪಾಸಿಟಿವ್ ಸುದ್ದಿ ಇದೀಗ ತಾಲೂಕು ಆಡಳಿತಕ್ಕೆ ಆಘಾತ ತಂದಿದ್ದು, ಸಿಬ್ಬಂದಿ ಆತಂಕದಲ್ಲಿದ್ದಾರೆ. ಅಲ್ಲದೇ ಮಳವಳ್ಳಿ ಪಟ್ಟಣದಲ್ಲಿರುವ ಸಿಡಿಪಿಒ ಕಚೇರಿಗೆ ಪುರಸಭೆ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡುತ್ತಿದ್ದರೆ, ಕಚೇರಿ ಕೆಲಸಕ್ಕೆ ಬರುವ ಸಿಬ್ಬಂದಿಆತಂಕದಲ್ಲಿ ಕಚೇರಿಗೆ ಬರದೆ ಕಚೇರಿ ಬಾಗಿಲ ಗೇಟ್ ಬಳಿ ಆತಂಕದಿಂದಲೇ ನಿಂತಿರುವ ದೃಶ್ಯ ಕಂಡು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಅಧಿಕಾರಿಗಳು  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್​ಗೆ ಮುಂದಾಗಿದ್ದಾರೆ.

ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನೇ ದಿನೇ ಏರಿಕೆಯಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಏರಿಕೆಯಾಗುತ್ತಿರುವ ಮುಂಬೈ ಸೋಂಕಿನಿಂದ ಜಿಲ್ಲಾಡಳಿತ ಕೆಂಗೆಟ್ಟಿದೆ. ಇದರ ನಡುವೆ ಇದೀಗ ಸರ್ಕಾರಿ ಅಧಿಕಾರಿಗೆ ಸೋಂಕು ತಗುಲಿರುವುದು ಜಿಲ್ಲಾಡಳಿತವನ್ನು ಮತ್ತುಷ್ಟು ಕೆಂಗೆಡಿಸಿರೋದು ಸುಳ್ಳಲ್ಲ.

Continue

Related Articles

Leave a Reply

Your email address will not be published. Required fields are marked *

Back to top button
Close
Close