ಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿ

ಖಾಸಗಿ ಪೈನಾನ್ಸ್ ಕಂಪನಿಗಳ ಸಾಲ ಮರುಪಾವತಿ ಕಿರುಕುಳ ಖಂಡಿಸಿ; ಸ್ವಾಭಿಮಾನಿ ಕರ್ನಾಟಕ ರಕ್ಷಣವೇದಿಕೆ ಮನವಿ

ವರದಿ : ಸಿರಾಜುದ್ದೀನ್ ಬಂಗಾರ್

ಕಂತು ಪಾವತಿಸಲು ಇನ್ನೂ 6 ತಿಂಗಳು ಕಾಲವಕಾಶ ನೀಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ರಾಯಚೂರು ಜಿಲ್ಲಾಧೀಕಾರಿಗಳ ಮುಖಾಂತರ ಮನವಿಪತ್ರ ಸಲ್ಲಿಸಲು. ಸಾ.ಕ.ರ.ವೇ ಮನವಿ

ರಾಯಚೂರು ಮೇ.21 : ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಮಹಾಮಾರಿ ಕೊರೋನದಿಂದ ಉಂಟಾದ ಲಾಕಡೌನ್ 2020 ಮಾರ್ಚ 22 ರಿಂದ ಮೇ31ರ ವರೆಗೆ 4ನೇ ಹಂತದ ಲಾಕಡೌನ ಜಾರಿಯಲ್ಲಿದ್ದು, ಕೊರೋನ ವೈರೆಸನಿಂದಾಗಿ ಭಯಭೀತರಾಗಿರುವ ಸಾರ್ವಜನಿಕರು ಮೆನಯಲ್ಲಿಯೇ ಉಳಿದಿದ್ದು, ಯಾವುದೇ ಕೆಲಸ ಇಲ್ಲದೇ ಆಧಾಯವಿಲ್ಲದೆ ಪರಿತಪಿಸುತ್ತಿರುವಂತಾಗಿದೆ. ಇಂತಹ ಸಂದರ್ಭದಲ್ಲಿ ಫೈನಾನ್ಸ್ ಕಂಪನಿಗಳಿಗೆ ಕಂತು ಪಾವತಿಸಲು ಸಾಧ್ಯವೇ? ಕಂತು ಪಾವತಿಸಲು ಇನ್ನೂ 6 ತಿಂಗಳು ಕಾಲವಕಾಶ ನೀಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ರಾಯಚೂರು ಜಿಲ್ಲಾಧೀಕಾರಿಗಳಿಂದ ಮುಖಾಂತರ ಮನವಿಪತ್ರವನ್ನು ಸಲ್ಲಿಸುವಂತೆ, ಸ್ವಾಭೀಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಘಟಕ ವತಿಯಿಂದ ಮನವಿಪತ್ರವನ್ನು ಸಲ್ಲಿಸಲಾಯಿತು.

ರೈತರು, ಕೂಲಿಕಾರ್ಮಿಕರು,ಮಧ್ಯಮ ವರ್ಗದವರು, ಮಹಿಳೆಯರು,ಬಡವರು,ಆಟೋ ವಾಹನ ಚಾಲಕರು ಹಾಗೂ ವ್ಯವಹಾರಸ್ಥರು ತಮ್ಮ ಜೀವನೋಪಾಯಕ್ಕಾಗಿ ಸರ್ಕಾರದಿಂದ ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳಿಂದ ಮತ್ತು ಬ್ಯಾಂಕುಗಳಿಂದ ಸಾಲ ಮಾಡಿಕೊಂಡು ಹೇಗೋ ಕೆಲಸ ಮಾಡುತ್ತ , ಪ್ರತಿ ತಿಂಗಳಿಗೆ ಕಂತು ಹಣವನ್ನು ಸರಿಯಾದ ಸಮಯಕ್ಕೆ ಕಟ್ಟುತ್ತಿದ್ದರು, ಆದರೆ ಈಗಿನ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಅತ್ತ ಮಾಡಲು ಕೆಲಸ ಇಲ್ಲದೇ ಬೀದಿಗಿಳಿದಿದ್ದಾರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೆ ಕಷ್ಟ. ಸಾಲ ಮರು ಪಾವತಿ ಮಾಡಲು ಸಾಧ್ಯವೇ.?

ಫೈನಾನ್ಸ್ ಕಂಪನಿಗಳು ಕಂತು ಪಾವತಿಗಾಗಿ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ ಎಂದು ಸಾಲ ಪಾವತಿಗಾಗಿ ಕಿರುಕುಳ ನೀಡುತ್ತಿದ್ದು,ಸಾಲ ಪಡೆದ ಜನರಿಗೆ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ದಿಕ್ಕುತೋಚದಂತಾಗಿದೆ. ಇದು ಯಾವ ನ್ಯಾಯ ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣವೇದಿಕೆ ರಾಯಚೂರು ಘಟಕವು ಖಂಡಿಸಿದೆ.

ಮೂರು ತಿಂಗಳ ಕಂತು ಕಟ್ಟಬಾರದೆಂದು ಹಾಗೂ 3 ತಿಂಗಳವರೆಗೆ ವಿದ್ಯುತ್ ಬಿಲ್ಲನ್ನು ಕಟ್ಟಬಾರದೆಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಾಧ್ಯಮಗಳಲ್ಲಿ ನೀಡಿದ್ದು ಇರುತ್ತದೆ ಆದರೆ ಇದೇ ಮೇ ತಿಂಗಳಲ್ಲಿ ಎಲ್ಲಾ ಫೈನಾನ್ಸ್ ಸಾಲ ನೀಡಿದವರು ಸಾಲ ಪಡೆದವರಿಗೆ ಕರೆ ಮಾಡಿ, ಕಂತು ಕಟ್ಟಬೇಕೆಂದು ಕಿರುಕುಳ ನೀಡುತ್ತಿದ್ದಾರೆ ಈಗಾಗಲೇ ಜೆಸ್ಕಾಂ ಇಲಾಖೆಯು 3 ತಿಂಗಳ ವಿದ್ಯುತ್ ಬಿಲ್ಲನ್ನು ಒಟ್ಟಾಗಿ ನೀಡಿದ್ದಾರೆ ಹಾಗೂ ಶ್ರೀರಾಮ್ ಫೈನಾನ್ಸ್ ಕಂಪನಿಯವರು ವಾಹನ ಸಾಲ ಪಡೆದವರಿಗೆ ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆ

ಕಾರಣ ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಇತ್ತ ಗಮನ ಹರಿಸಿ ಸಾರ್ವಜನಿಕರಿಗೆ ಇನ್ನೂ 6 ತಿಂಗಳವರೆಗೆ ಸಮಯವಕಾಶ ನಿಡುವಂತೆ ಖಾಸಗಿ ಹಾಗೂ ಸರ್ಕಾರಿ ಫೈನಾನ್ಸ್ ಕಂಪನಿಗಳಿಗೆ ಯಾವುದೇ ರೀತಿಯಲ್ಲಿ ಕಂತು ಪಾವತಿಗಾಗಿ ಕಿರುಕುಳ ನೀಡಬಾರದು ಎಂದು ಆದೇಶ ಹೊರಡಿಸಬೇಕು . ಒಂದು ವೇಳೆ ಸಾಲ ನೀಡಿರುವ ಸರ್ಕಾರಿ ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳು ಕಿರುಕುಳ ನೀಡಿದಲ್ಲಿ ಜನರು ಸ್ವಾಭಿಮಾನಕ್ಕೆ ಧಕ್ಕೆ ಬಂದು ಪ್ರಾಣಾಪಾಯ ಮಾಡಿಕೊಂಡಿದಲ್ಲಿ. ಅದಕ್ಕೆ ನೇರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ ಎಂದು ಸಾ.ಕ.ರ.ವೇಯ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಇಮ್ರಾನ್ ಬಡೇಸಾಬ್ ಅವರು ಆರೋಪಿಸಿದ್ದಾರೆ.

ಒಂದು ವೇಳೆ ಸರ್ಕಾರ ಇದರ ಬಗ್ಗೆ ಕ್ರಮಕೈಗೊಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close