ಮಾನವಿರಾಯಚೂರು ಜಿಲ್ಲೆ ಸುದ್ದಿಲೇಖನಸಿರವಾರ

ಕೊರೋನ ಮಹಾಮಾರಿ ರೋಗದ ವಿರುದ್ಧ ಹೋರಾಡಲು ಜನಸಾಮಾನ್ಯರಲ್ಲಿದೆ ಅಸ್ತ್ರ

ಲೇಖನ : ಸಿರಾಜುದ್ದೀನ ಬಂಗಾರ

ಇಡೀ ವಿಶ್ವವೇ ಬೆಚ್ಚಿ ಬಿಳಿಸಿದ ಈ ಮಹಾಮಾರಿ ಕೊರೋನದಿಂದ ಆದಂತಹ ನಷ್ಟಗಳನ್ನು ನಾವೆಲ್ಲ ಎದುರಿಸಿದಂತಹ ಕಷ್ಟ-ನಷ್ಟಗಳನ್ನ ನಾವು ಮತ್ತು ಮುಂದಿನ ಪಿಳಿಗೆಯು ಮರೆಯಲು ಅಸಾಧ್ಯ.ಈ ಮಹಾಮಾರಿ ವೈರೆಸ್ ಹುಟ್ಟಿದ ಹಾಗೂ ತನ್ನ ಅರ್ಭಟವನ್ನು ಬಿಡದೆ ರಾಜಾರೋಷವಾಗಿ ಮುನ್ನಡೆಯುತ್ತೀರುವ ಈ ಮಹಾಮಾರಿ ರೋಗವನ್ನು ತಡೆಯುವ ಅಸ್ತ್ರ ಜನಸಾಮಾನ್ಯರಲ್ಲಿ ಇದೆ. ಈ ರೋಗವನ್ನು ಮುಂದುವರೆಯಲು ಬಿಡಬೇಕೋ ಅಥವಾ ಶಾಸ್ವತವಾಗಿ ಕಡಿವಾಣ ಹಾಕಬೇಕಾಗುವ ನಿರ್ಣಯ ನಮ್ಮಲ್ಲಿ ಉಳಿದಿದೆ

ಸರ್ಕಾರ ತನ್ನ ಕರ್ತವ್ಯಕ್ಕೂ ಮೀರಿ ಹೆಚ್ಚಿನ ರೀತಿಯಲ್ಲಿ ನಮ್ಮ ಉಳಿವಿಗಾಗಿ ತೆಗೆದುಕೊಂಡ ನಿರ್ಣಯಗಳ ಫಲವೇ ಲಾಕಡೌನ್. ಸರ್ಕಾರ ಬಹಳ ನಷ್ಟದಲ್ಲಿ ಇದ್ದರು ಜನ ಸಾಮಾನ್ಯರ ಉಳಿವಿಗಾಗಿ ಹಗಲು-ಇರುಳು ಎನ್ನದೆ, ಜೀವ ರಕ್ಷಕರನ್ನು ನಮ್ಮ ಸೇವೆಗಾಗಿ ಕೊಡುಗೆಯಾಗಿ ನೀಡಿತು. ಈ ಜೀವ ರಕ್ಷಕರು ಯಾರು ಅಂಥ ಎಲ್ಲಾರಿಗೂ ತಿಳಿದಿದೆ ಅವರುಗಳೆ ವೈದ್ಯರು,ಪೋಲಿಸ್ ಅಧಿಕಾರಿಗಳು,ಸೈನಿಕರು ಮತ್ತು ನಮ್ಮ ಮಧ್ಯ ಇದ್ದು ತಮ್ಮ ಕುಟುಂಬವನ್ನೆ ತ್ಯಾಜೀಸಿ ಜನರ ಸೇವೆಗಾಗಿ ನಿರತರಾದ ಸರ್ಕಾರಿ ಅಧಿಕಾರಿಗಳು.ಎಂಬುದನ್ನು ನಮ್ಮ ಜೀವನದಲ್ಲಿಯೆ ಮರಿಯದ ವಿಷಯ.

ಹಾಗಿದ್ದರೆ ನಾವು ಸರ್ಕಾರದ ಸುತ್ತೋಲೆಗಳನ್ನು ಮತ್ತು ಸರ್ಕಾರ ನಮ್ಮ ಜೀವಕ್ಕಾಗಿ ಕಲಿಸಿದ ಪಾಠವನ್ನು ಮರೆತು, ನಾವೇ ವೈರೆಸನ್ನ ಹರಡುವಿಕೆಯಲ್ಲಿ ಸಹಕರಿಸುತ್ತಿರುವುದು ನಿಜಕ್ಕೂ ನಾವು ಸರ್ಕಾರಕ್ಕೆ ಮಾಡುತ್ತಿರುವ ಮೋಸ ಎಂದರು ತಪ್ಪಾಗದು.

ಇಲ್ಲ ಸಾರ್! ನಾವೇನು ಮೋಸಮಾಡಿವಿ? ಏನಪ್ಪ ನಿಮ್ಮ ಸಮಸ್ಯೆ? ನೀವೆ ಹೇಳಿ ನೋಡೊಣ ನಾವೇನು ಮಾಡಿದ್ದೇವೆ ಮೋಸ ಅಂದರು ಅದಕ್ಕೆ ಇದೆ ಇಲ್ಲಿ ಉತ್ತರ.

ಎಲ್ಲಿ ಸಾಮಾಜಿಕ ಅಂತರ? ಎಲ್ಲಿ ಮಾಸ್ಕ್? ಅನಾವಶ್ಯಕ ತಿರುಗಾಟ? ಹೊರ ಪ್ರದೇಶದಿಂದ ಪೋಲಿಸ್ ಕಣ್ ತಪ್ಪಿಸಿ ಊರಿಗೆ ಸೇರುವುದು? ನಮ್ಮಲ್ಲಿ ರೋಗದ ಲಕ್ಷಣಗಳು ಅನುಮಾನಗಳಿದ್ದರು ಹೋಗಿ ಭೇಟಿಯಾಗಿದ್ದೀರಾ ವೈಧ್ಯರುಗಳಿಗೆ? ಫೋನ್ ಕಾಲ ಮಾಡುವಾಗ ಬರುವ ಕೊರೋನ ಎಚ್ಚರಿಕೆ,ಬೇಜಾರಾಗಿದೆಯಾ? ಹೋಗಲಿ ನೀವು,ನಿಮಗಾಗಿ ಜೀವ ರಕ್ಷಣೆ ಮಾಡಿದ ಅಧಿಕಾರಿಗಳಿಗಾದರೂ ಒಂದು ಕೃತಜ್ಞತೆ? ಮಾನವಿಯತೆ ದೃಷ್ಟಿಯಿಂದಲೂ ಯೋಚಿಸಿದರು ನಾವು ಸರ್ಕಾರಕ್ಕೆ ಮಾಡಿದ್ದು ಮೋಸನೆ. ಇನ್ನೊಮ್ಮೆ ಅರಿತುಕೊಳ್ಳಿ ಈ ಮಹಮಾರಿ ರೋಗವನ್ನು ಶಾಸ್ವತವಾಗಿ ತಡೆಹಿಡಿಯುವ ಅಸ್ತ್ರ ಜನಸಾಮಾನ್ಯರಲ್ಲಿತೆ ಇದೆ. ನಾವೇನು ಮಾಡಬೇಕು ಎಂದು ಯೋಚಿಸುತ್ತಿದ್ದರೆ ಅದಕ್ಕಿದೆ ಪರಿಹಾರ.

“ನನ್ನನ್ನು ಸ್ವತಃ ರಕ್ಷಿಸಿಕೊಳ್ಳಲು ಮತ್ತು ರೋಗ ಹರಡುವಿಕೆಯನ್ನು ತಡೆಯಲು ನಾನು ಏನು ಮಾಡಬಹುದು?

ಕೋವಿಡ್‌-19ನಿಂದ ನಮ್ಮನ್ನು ನಾವು ರಕ್ಷಣೆ ಮಾಡುವ ಬಗೆ ಹೇಗೆ ?
“ಸಾಂಕ್ರಾಮಿಕವಾಗಿ ಹರಡುವ ಕೊರೊನಾದಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು. ಅದಕ್ಕಾಗಿ ಕೆಲವೊಂದು ಮುಂಜಾಗೃತಾ ಕ್ರಮಗಳನ್ನು ಅಳವಡಿಸಬೇಕಿದೆ: ಪ್ರಮುಖವಾಗಿ:

1) ಸ್ಯಾನಿಟೈಸರ್‌ ಅಥವಾ ಸಾಬೂನ್‌ಗಳಿಂದ ಕೈಗಳನ್ನು ನಿಯಮಿತವಾಗಿ ಶುಚಿಗೊಳಿಸುತ್ತಿರಿ. ಈ ರೀತಿ ಮಾಡುವುದರಿಂದ ಕೈಗಳಲ್ಲಿ ಕೋವಿಡ್‌ ವೈರಾಣು ಸೇರಿದ್ದಲ್ಲಿ, ಅವನ್ನು ಅವನ್ನು ನಾಶಪಡಿಸುತ್ತದೆ.

2) ಸಾಮಾಜಿಕ ಅಂತರ; ಇದು ಅವಶ್ಯಕ. ಗುಂಪು-ಗುಂಪು ಸೇರುವುದನ್ನ ಇಂದೇ ಬಿಟ್ಟುಬಿಡಿ ಬದಲಾಗಿ ಸಮಾಜಿಕ ಅಂತರ ಕಾಪಾಡಿಕೊಳ್ಳಿ. ಈ ವರ್ಷ ಇಲ್ಲದಿದ್ದರೂ ಬೇರೆ ವರ್ಷ ನಾವು ಹಬ್ಬಗಳನ್ನ, ಕಾರ್ಯಕ್ರಮಗಳನ್ನ ಮಾಡಬಹುದು ಜೀವ ಮುಖ್ಯ ಎಂದಿಗೂ ಮರೆಯದಿರಿ.

3) ಕೆಮ್ಮು ಅಥವಾ ಸೀನುತ್ತಿರುವ ವ್ಯಕ್ತಿಯಿಂದ ಕನಿಷ್ಠ 1ಮೀಟರ್‌ ಅಂತರವನ್ನು ಕಾಯ್ದುಕೊಳ್ಳಿ. ಏಕೆಂದರೆ ಸೀನು ಹಾಗೂ ಕೆಮ್ಮುವ ವೇಳೆ ದ್ರವ ರೂಪದ ಕಣಗಳು ಹೊರಬರುತ್ತದೆ. ಇದರಲ್ಲಿ ವೈರಸ್‌ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಸೀನುವ ಅಥವಾ ಕೆಮ್ಮುವ ವೇಳೆ ನೀವು ತುಂಬಾ ಹತ್ತಿರವಿದ್ದಲ್ಲಿ, ನಿಮ್ಮ ಉಸಿರಾಟದ ವೇಳೆ ವೈರಸ್‌ಗಳು ನಿಮ್ಮ ದೇಹ ಸೇರುವ ಸಾಧ್ಯತೆಗಳಿರುತ್ತದೆ.

4) ಆಗಾಗ್ಗೆ ಕಣ್ಣುಗಳನ್ನು ಉಜ್ಜುವುದು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳುವುದನ್ನು ನಿಯಂತ್ರಿಸುವುದು. ಏಕೆಂದರೆ ಕೈಗಳಿಂದ ಅನೇಕ ರೀತಿಯ ವಸ್ತುಗಳನ್ನು ಮುಟ್ಟುತ್ತಲೇ ಇರುತ್ತೇವೆ. ಹೀಗಾಗಿ ಎಲ್ಲ ವೇಳೆಯಲ್ಲಿ ಕೈಗಳು ಶುದ್ಧವಾಗಿರದು. ಕೈಗಳಲ್ಲಿರುವ ವೈರಾಣುಗಳು ಮೂಗು, ಕಣ್ಣುಗಳ ಮೂಲಕ ದೇಹ ಸೇರುವ ಸಾಧ್ಯತೆಗಳಿರುತ್ತದೆ.

5) ಸುತ್ತಮುತ್ತಲ ಜನರು ಶುಚಿತ್ವ ಕಾಪಾಡುವ ಕುರಿತು ಕಾಳಜಿ ವಹಿಸಬೇಕು. ಅಂದರೆ, ಕೆಮ್ಮು ಅಥವಾ ಸೀನುವ ವೇಳೆ, ಮುಖ/ಮೂಗನ್ನು ಟಿಶ್ಯು ಅಥವಾ ಕರವಸ್ತ್ರದಿಂದ ಮುಚ್ಚಿಕೊಳ್ಳುವ ಅಭ್ಯಾಸ ಮಾಡಬೇಕು. ಅಲ್ಲದೆ ಬಳಸಿದ ಟಿಶ್ಯುವನ್ನು ಸೂಕ್ತರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಏಕೆಂದರೆ ಸೀನುವ ಹಾಗೂ ಕೆಮ್ಮುವ ವೇಳೆ ದ್ರವ ರೂಪದ ಕಣಗಳು ಹೊರಹೋಗುತ್ತವೆ. ಇವುಗಳನ್ನು ಸೋಂಕು ಹರಡುವ ವೈರಾಣುಗಳಿರುವ ಸಾಧ್ಯತೆಗಳಿರುತ್ತದೆ.

6) ಅನಾರೋಗ್ಯ ಕಂಡು ಬಂದಲ್ಲಿ ಮನೆಯಲ್ಲಿಯೇ ಇರಿ. ಉಸಿರಾಟದ ಸಮಸ್ಯೆಯ ಜತೆಗೆ ನಿಮಗೆ ಜ್ವರ, ಕೆಮ್ಮು, ಶೀತ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳಿ. ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆಯನ್ನು ಪಾಲಿಸಿ. ಏಕೆಂದರೆ, ನಿಮ್ಮ ಸುತ್ತಮುತ್ತಲಿನ ಹಾಗೂ ರಾಷ್ಟ್ರ ಮಟ್ಟದಲ್ಲಿನ ವಿವರ/ಪರಿಸ್ಥಿತಿ ಬಗ್ಗೆ ಅತ್ಯಂತ ನಿಖರ ಮಾಹಿತಿ ಅವರಲ್ಲಿ ಇರುತ್ತದೆ. ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರ ನೆರವು ಪಡೆಯುವುದು ಹೆಚ್ಚು ಅನುಕೂಲಕರ ಹಾಗೂ ಇತರರಿಗೆ ಹರಡದಂತೆ ತಡೆಗಟ್ಟುವ ಅವಕಾಶವೂ ಹೆಚ್ಚು.

7) ಕೋವಿಡ್‌-19 ಹಾಟ್‌ಸ್ಪಾಟ್‌ಗಳ ಕುರಿತು ತಾಜಾ ಮಾಹಿತಿಗಳು ನಿಮ್ಮಲ್ಲಿರಲಿ. (ಯಾವ ನಗರ ಅಥವಾ ಪ್ರದೇಶಗಳಲ್ಲಿ ಕೋವಿಡ್‌-19 ಹರಡುವಿಕೆ ಹೆಚ್ಚಾಗಿದೆ). ಸಂಚಾರಕ್ಕೆ ಒತ್ತು ಕೊಡದಿರಿ. ಪ್ರಮುಖವಾಗಿ ನೀವು ಹಿರಿಯ ನಾಗರಿಕರಾಗಿದ್ದಲ್ಲಿ ಹಾಗೂ ಹೃದ್ರೋಗ, ಮಧುಮೇಹ ಸೇರಿ ಇನ್ನಿತರ ಆರೋಗ್ಯ ಸಮಸ್ಯೆ ಹೊಂದಿದ್ದಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹೀಗಾಗಿ ಹೆಚ್ಚು ಜಾಗರೂಕರಾಗಿರುವುದು ಮುಖ್ಯವಾಗುತ್ತದೆ.

8) ಬೇರೆ ಪ್ರದೇಶಗಳಿಂದ ವಲಸಿಗ ಕಾರ್ಮಿಕರಾಗಲಿ ಯಾರದರೂ ಕಣ್ ತಪ್ಪಿಸಿ ಬಂದಿದ್ದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿ. ಅಲ್ಲಿಯೂ ಇರಲಿ ಬಿಡಿ ಎಂಬ ತ್ಯಾಗವನ್ನು ಮಾಡದಿರಿ.

ನಾನು ಮಾಡಲೇಬಾರದು ಅಂತಹ ವಿಷಯ ಏನಾದರೂ ಇದೆಯೇ?
ಈ ಕ್ರಮಗಳು COVID-19 ವಿರುದ್ಧ ಅಷ್ಟು ಪರಿಣಾಮಕಾರಿ ಅಲ್ಲ ಮತ್ತು ಹಾನಿಕಾರಕ ಆಗಬಹುದು: ಧೂಮಪಾನ ಮಾಡುವುದು, ಒಂದರ ಮೇಲೊಂದು ಮಾಸ್ಕ್ ಹಾಕಿಕೊಳ್ಳುವುದು, ಆಂಟಿ ಬಯೋಟಿಕ್ಸ್ ಸೇವನೆ. ಒಂದು ವೇಳೆ ನಿಮಗೆ ಜ್ವರ ಕೆಮ್ಮು ಅಥವಾ ಉಸಿರಾಟದ ತೊಂದರೆ ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆದು ಸೋಂಕು ಹೆಚ್ಚಾಗದಂತೆ ತಡೆಯಲು ಮುಂದಾಗಿ ಮತ್ತು ನಿಮ್ಮ ಇತ್ತೀಚಿನ ಪ್ರಯಾಣದ ವಿವರಗಳನ್ನು ವೈದ್ಯಕೀಯ ಸಿಬ್ಬಂದಿಯೊಂದಿಗೆ ತಪ್ಪದೇ ಹಂಚಿಕೊಳ್ಳಿ

ಸಿರಾಜುದ್ದೀನ್ ಬಂಗಾರ್,
ಕರ್ನಾಟಕ-ಜ್ವಾಲೆ ನ್ಯೂಸ್
ಸಂಪಾದಕೀಯ

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close