ಕರ್ನಾಟಕ ಸುದ್ದಿದೇವದುರ್ಗ

ಗಬ್ಬೂರು; ಐತಿಹಾಸಿಕ ಕಥೆ ಸಾರುವ ಶ್ರೀ ಚಿಂಚೋಳಿ ಬಸವಣ್ಣ ದೇವಸ್ಥಾನ

ವರದಿ : ನಾಗೇಂದ್ರ. ಆರ್

ದೇವದುರ್ಗ ತಾಲೂಕಿನ ಗಬ್ಬೂರಿನ ಚಿಂಚೋಳಿ ಬಸವಣ್ಣ ದೇವಾಲಯದ ಮುಂದೆ ಇರುವ ಶಾಸನದಂತೆ ದೇವಾಲಯದ ಕ್ರಿ.ಶ .1141 ರ ಕಾಲಘಟ್ಟದಲ್ಲಿ ನಿರ್ಮಿಸಲಾಯಿತು ದಾಖಲೆಗಳ ಆಧಾರದ ಪ್ರಕಾರ ವೈಷ್ಣವರ ಮಂಚಪ್ಪಯ್ಯನು ಕೇಶವದೇವರ ಆರಾಧನೆಗಾಗಿ ತನ್ನ ಭೂಮಿಯನ್ನು ನೀಡಿರುವುದು ತಿಳಿಯುವುದು . ಯೋಜನ : ಈ ದೇವಾಲಯಕ್ಕೆ ಎರಡು ಅಂತರಾಳಗಳುಳ್ಳ ಎರಡು ಗರ್ಭಗೃಹಗಳದ ಒಂದು ಗರ್ಭಗೃಹ ಉತ್ತರಾಭಿಮುಖವಾಗಿದ್ದರೆ ಮತ್ತೊಂದು ದಕ್ಷಿಣಾಭಿಮುಖವಾಗಿದೆ ದೇವಾಲಯದ ಸಭಾ ಮಂಟಪವು ಪೂರ್ವದೆಸೆಯತ್ತ ತೆರೆದುಕೊಂಡಿದೆ ಪಶ್ಚಿಮ ದೆಸೆಯಲ್ಲಿರುವ ಸಭಾಮಂಟಪದ ಗೋಡೆಯು ಇತ್ತೀಚಿನದಾಗಿದೆ .


: ಈ ದೇವಾಲಯದ ಅಧಿಷ್ಠಾನ ಮತ್ತು ಪ್ರಮುಖವಾದ ಗೋಡೆಯ ಭಾಗವು ಹೂಳಲ್ಪಟ್ಟಿದೆ . ಪಶ್ಚಿಮದ ದೆಸೆಯಲ್ಲಿರುವ ದೇವಾಲಯವು ವಸತಿ ಮನೆಯಾಗಿ ಆಕ್ರಮಿಸಲ್ಪಟ್ಟಿದೆ . ಗೋಡೆಯ ರಚನೆಯು ಸರಳವಾಗಿದೆ . ಗರ್ಭ ಗೃಹದ ಮೇಲಿರಬಹುದಾದ ಇಳಿಜಾರಿನ ಚಾಚು ಮಂಟಪವು ಇಲ್ಲಿ ಕಾಣುವುದಿಲ್ಲ ಗುಪ್ತಗಾಮಿನಿಯಂತಿರುವ ಆದು ದೇವಾಲಯದ ಸುತ್ತಲಿನ ಮೇಲ್ಬಾಗದಲ್ಲಿ ಸೂಕ್ಷ್ಮ ಕೆತ್ತನೆಗೆ ಒಳಪಡದೆ ಸಾಧಾರಣ ರಚನೆಯಲ್ಲಿ ನಿರ್ಮಾಣಗೊಂಡಿದೆ . ಪೂರ್ವ ದಿಕ್ಕಿನಲ್ಲಿ ಇರುವ ಸಭಾಮಂಟಪದ ಚಾಚು ಮಳೆಯ ಮಚ್ಚಿಗೆಯು ಭಾರದ ಬಲದಿಂದ ಬಾಗಿಕೊಂಡಂತಿದೆ . ಸಭಾ ಮಂಟಪದ ಮುಂಭಾಗದಲ್ಲಿ ಕಕ್ಷಾಸನವಿದೆ ಕಕ್ಷಾಸನದ ಹೊರ ಭಾಗದಲ್ಲಿ ಹ ಪದ್ಮಾ , ಕಂಠ , ಚೌಕಾದ ಹೂ ಪಟ್ಟಿಕೆಗಳಿಂದ ಅಲಂಕರಿಸಲ್ಪಟ್ಟಿದೆ ದೇವಾಲಯದ ಮೇಲ್ಬಾಗದಲ್ಲಿ ಯಾವುದೇ ಗೋಪುರವು ಇಂದು ಉಳಿದುಕೊಂಡಿಲ್ಲ ಮೂಲ ಕೇಶವನ ದೇವಾಲಯವು ಈಗ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ . : ಸಭಾ ಮಂಟಪವು ಪೂರ್ವದೆಸೆಯಲ್ಲಿ ತೆರೆದುಕೊಂಡಿದೆ ಅದು ಮಧ್ಯದ ನವರಂಗ ಹೊಂದಿದ್ದು ಅಲ್ಲಿ ನಾಲ್ಕು ಕಂಭಗಳನ್ನು ಒಳಗೊಂಡಂತ ಕಕ್ಷಾಸನದಲ್ಲಿ ಎರಡು ಕಂಭಗಳಿವೆ . ಮಧ್ಯದಲ್ಲಿಯ ಕಂಭಗಳಿಗೆ ಅವುಗಳಿಗೆ ಅಲಂಕೃತ ಕುಡ್ಯಗಳು ಇವೆ ಇಡೀ ಕಂಭವನ್ನು ಮೂರು ಭಾಗಗಳಲ್ಲಿ ವಿಭಾಗಿಸಿಕೊಂಡು ಮೇಲೆ ಮತ್ತು ಕೆಳಗಡೆ ಚೌರಸಾಕಾರದ ಘನವಿದ್ದರೆ ಮಧ್ಯದಲ್ಲಿ ಅಷ್ಟುಭುಜಾಕೃತಿಯ ಪಟ್ಟಿಕೆಗಳಿವೆ ಇವುಗಳ ಸುತ್ತ ಅಲಂಕಾರಕ್ಕಾಗಿ ಅಷ್ಟಭುಜದ ಪಟ್ಟಕ ಇದೆ ಮೇಲ್ಭಾಗದ ಕಂಭವು ಗಂಟೆಯಾಕಾರದಲ್ಲಿ ರಚಿಸಲ್ಪಟ್ಟಿರುವಂತೆ ಮೇಲಿರುವ ಕೀರ್ತಿಮುಖ ಮತ್ತು ಕುಡುಗಳು ಅಲಂಕೃತ ಹೂ – ಬಳ್ಳಿಯ ತೋರಣಗಳಿಂದ ಅಲಂಕೃತಗೊಂಡಿದೆ ಕಕ್ಷಾಸನದಲ್ಲಿರುವ ಕಂಬಗಳಿಗೆ ತಳಹದಿಯಲ್ಲಿ ಕುಡ್ಯಗಳು ಇರದ ಮೂಲ ಕಂಬವನ್ನೇ

ಸಾಂಪ್ರದಾಯಿಕವಾಗಿ ವರ್ಗೀಕರಿಸಲ್ಪಟ್ಟಿದೆ ಕೆಳಗಿನ ಭಾಗವು ಚೌಕು ಘನವಾಗಿದ್ದರೆ ಮೇಲೆ ಕುಂಬಾ ಭಾಕೃತಿಗಳಿವೆ . ಈ ಕಕ್ಷಾಸನದ ಕಂಭಗಳನ್ನು ಕೂಡ ಸಾಭಾಮಂಟಪದ ಮಧ್ಯೆದ ಕಂಬಗಳಂತೆ ಅಲಂಕರಿಸಲಾಗಿದೆ ಗೋಡೆಯ ರಚನೆಯು ಸಾಮಾನ್ಯವಾಗಿದ್ದು ಯಾವ ಅಲಂಕಾರಕ್ಕೂ ಒಳಪಟ್ಟಿಲ್ಲ . ದಕ್ಷಿಣ ಮತ್ತು ಪಶ್ಚಿಮದ ದಿಸೆಗಳಲ್ಲಿ ಹೊಸ ಗೋಡೆಗಳನ್ನು ನಿರ್ಮಿಸಲಾಗಿದೆ , ಸಭಾ ಮಂಟಪದ ಮೇಲ್ಛಾವಣೆಯು ಸಾಧಾರಣವಾಗಿದೆ ಜೊತೆಯಾಗಿರುವ ಚೌಳು ಶಿಲಾಫಲಕದ ಘನಗಳು ಸುತ್ತುವರೆದಿವೆ . ಮೇಲಿರುವ ಮಧ್ಯದ ಶಿಲೆಯಲ್ಲಿ ಅಲಂಕೃತ ಪದ್ಮವಿದ್ದು ಉಳಿದ ಛಾವಣಿ ಸಾದರಿತಿಯಲ್ಲಿ — ಈ ಸಭಾ ಮಂಟಪದಲ್ಲಿ ಹೆಚ್ಚುವರಿಯಾಗಿ ನಂದಿಯನ್ನು ಸ್ಥಾಪಿಸಲಾಗಿದೆ . ಉತ್ತರದ ದೇವಾಲಯ ಉತ್ತರದ ದಿಸೆಯರಲ್ಲಿರುವ ಅಂತರಾಳವು ಉತ್ತರದ ತೆರೆದುಕೊಂಡಿದ್ದು ಚಿಕ್ಕದಾಗಿದ , ಮಧ್ಯದ ಛಾವಣೆಯಲ್ಲಿ ಪದ್ಮವಿದೆ ಈ ಅಂತರಾದ ಗರ್ಭಗೃಹವು ಬಳ್ಳಿಗಳ ಶಾಖೆಗಳನ್ನು ಹೊಂದಿದ್ದು ಅಲ್ಲಲ್ಲಿ ಚೌಕು ಪಟ್ಟಿಕೆಯ. ಚೌರಸದ ಹೂಗಳನ್ನು ಹೊಂದಿದೆ . ಗೋಡೆಯ ಕಂಭಕ್ಕೆ ಎರಡು ಇಳಿಜಾರು ಪಟ್ಟಿಕೆಗಳಿವೆ ಕಂಭದ ಮೂಲದಲ್ಲಿ ಪೂರ್ಣಕುಂಭವಿದ್ದು ಮಧ್ಯದಲ್ಲಿ ಅಲ್ಲಲ್ಲಿ ಎಲೆಗಳವೆ. ಬಾಗಿಲ ಮೇಲೆ ಆಯತಾಕೃತಿಯ ಶಿಲಾಘನ ಫಲಕಗಳನ್ನು ಜೋಡಿಸಿದ್ದು ಲಾಲಾಟದಲ್ಲಿ ಗಜಲಕ್ಷ್ಮಿಯ ಮೂರ್ತಿ ಇದೆ , ಆದರೆ ಇಲ್ಲಿ ಕಪೋತಗಳಿಲ್ಲ . ಚಾಚು ಹಲಗೆಯ ಮೇಲೆ ಆಲಂಕೃತವಾಗಿರುವ ರೇಖಾನಾಗರ ಶೈಲಿಯಲ್ಲಿಯ ಐದು ಗೋಪುರದ ಆಕೃತಿಗಳಿವೆ ಆದರೆ ಗರ್ಭಗೃಹದಲ್ಲಿ ಯಾವುದೇ ಮೂಲ ಮೂರ್ತಿ ಇಲ್ಲ . ಪೂರ್ವದ ದೆಸೆಯ ಗೋಡೆಯಲ್ಲಿ ಎತ್ತರಿಸಿ ಇಟ್ಟ ಶಿಲಾ ಫಲಕವಿದೆ , ದಕ್ಷಿಣದ ದೇವಾಲಯ : ಈ ದೇವಾಲಯದ ಅಂತರಾಳದ ದೇವಾಲಯದ ಪ್ರವೇಶದಲ್ಲಿ ಎರಡು ಕಂಭಗಳಿವ . ಇವು ಕಕ್ಷಾಸನದ ಕಂಭಗಳಂತೆ ಇವೆ ಆದರೆ ಈ ಕಂಧಗಳ ಮಧ್ಯದಲ್ಲಿ ಯಾವುದೇ ಚೌಕು ಅಥವಾ ದುಂಡನೆಯ ಮಣಿಕಂಠಗಳಿಲ್ಲ ಅಂತರಾಳದಲ್ಲಿರುವ ಮೇಲ್ಛಾವಣೆಯು ಆಯತಾಕೃತಿಯ ಶಿಲಾ ಫಲಕಗಳನ್ನು ಹೊಂದಿದ್ದು ಅದರ ಮೇಲೆ ಉಬ್ಬು ಚಿತ್ರದ ಪದ್ಮವಿದೆ . ಗರ್ಭಗೃಹದ ಎದುರಿಗೆ ಅಲಂಕೃತ ಚಂದ್ರಶಿಲೆ ಇದೆ . ಈ ದೇವಾಲಯವೂ ಉತ್ತರದ ದೇವಾಲಯದಂತೆ ಇದ್ದರೂ ಒರ ಶಾಖೆಗಳಲ್ಲಿ ಭಿನ್ನತೆಯಿಂದ ಕೂಡಿಕೊಂಡಿದೆ . ಬಾಗಿಲು ಸಾದಾರೀತಿಯ ಅಲಂಕರಣಗೊಂಡಿದೆ .

Continue

Related Articles

Leave a Reply

Your email address will not be published. Required fields are marked *

Back to top button
Close
Close